'ಸತ್ಯ ಹರಿಶ್ಚಂದ್ರ' ಶರಣ್ ಗೆ ನಾಯಕಿ ಪಡುಕೋಣೆ, ಯಾರು ದೀಪಿಕಾನಾ?

By Suneetha

'ರಾವಣ' ಚಿತ್ರದಲ್ಲಿ ಲೂಸ್ ಮಾದ ಯೋಗೇಶ್ ಅವರ ಜೊತೆ ಡ್ಯುಯೆಟ್ ಹಾಡಿದ್ದ ನಟಿ ಸಂಚಿತಾ ಪಡುಕೋಣೆ ಅವರು, ತದನಂತರ ಸದ್ದಿಲ್ಲದೇ ದಕ್ಷಿಣ ಭಾರತದ ಕಡೆ ಹಾರಿ ಹೋದರು. ಅಲ್ಲಿ ಕೆಲವು ತಮಿಳು-ತೆಲುಗು ಸಿನಿಮಾಗಳಲ್ಲಿ ಮಿಂಚಿ, ಸ್ವಲ್ಪ ಮಟ್ಟಿಗೆ ಸುದ್ದಿ ಮಾಡಿದರು.

ಅಂದಹಾಗೆ ಸಂಚಿತಾ ಪಡುಕೋಣೆ ಅಂತ ಹೆಸರು ಕೇಳಿದಾಗ, ಇವರು ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರ ಸಂಬಂಧಿಯ ಅಂತ ಅನುಮಾನ ಬರಬಹುದು. ಹೌದು ಇಬ್ಬರು ಕೂಡ ಒಂದೇ ಊರಿನವರು ನಿಜ ಆದರೆ ಸಂಬಂಧಿಗಳಲ್ಲವಂತೆ. ಇದೀಗ ವಿಷ್ಯಾ ಅದಲ್ಲ, ನಟಿ ಸಂಚಿತಾ ಪಡುಕೋಣೆ ಅವರು ಮತ್ತೆ ಕನ್ನಡಕ್ಕೆ ಹಿಂತಿರುಗಿದ್ದಾರೆ.['ಸತ್ಯ ಹರಿಶ್ಚಂದ್ರ'ನ ಅವತಾರ ತಾಳಿದ ಕಾಮಿಡಿ ಕಿಂಗ್ ಶರಣ್]

ಕನ್ನಡದ 'ರಾವಣ' ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಕನ್ನಡತಿ ಸಂಚಿತಾ ಪಡುಕೋಣೆ, ಮತ್ತೆ ಕನ್ನಡದತ್ತ ಮುಖ ಮಾಡಿದ್ದಾರೆ. ಈ ಬಾರಿ ಸಖತ್ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ಸಂಚಿತಾ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಯಾವುದು?, ಯಾರ ಜೊತೆ, ಮುಂತಾದ ವಿಚಾರಗಳನ್ನು ನೋಡಲು ಮುಂದೆ ಓದಿ.....

ಸತ್ಯ ಹರಿಶ್ವಂದ್ರನ ನಾಯಕಿ ಸಂಚಿತಾ

ಸತ್ಯ ಹರಿಶ್ವಂದ್ರನ ನಾಯಕಿ ಸಂಚಿತಾ

ಕಾಮಿಡಿ ಕಿಂಗ್ ಶರಣ್ ಅವರು 'ಸತ್ಯ ಹರಿಶ್ಚಂದ್ರ' ಅನ್ನೋ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ ಅಂತ ನಾವೇ ನಿಮಗೆ ಹೇಳಿದ್ವಿ. ಆದ್ರೆ ಶರಣ್ ಗೆ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ಬಿಜಿಯಾಗಿತ್ತು. ಇದೀಗ ನಾಯಕಿ ಕೂಡ ಸಿಕ್ಕಿದ್ದು, ಶೂಟಿಂಗ್ ಕೂಡ ಜೋರಾಗೇ ಸಾಗಿದೆ.[ಮತ್ತೊಂದು ತಮಿಳು ರೀಮೇಕ್ ನಲ್ಲಿ ನಟಿಸ್ತಾರಾ ಶರಣ್.?]

ದಯಾಳ್ ಪದ್ಮನಾಭ್ ಗೆ ಆಕಸ್ಮಿಕವಾಗಿ ಸಿಕ್ಕ ಸಂಚಿತಾ

ದಯಾಳ್ ಪದ್ಮನಾಭ್ ಗೆ ಆಕಸ್ಮಿಕವಾಗಿ ಸಿಕ್ಕ ಸಂಚಿತಾ

ನಿರ್ದೇಶಕ ದಯಾಳ್ ಪದ್ಮನಾಭ ನಿರ್ದೇಶನ ಮಾಡುತ್ತಿರುವ 'ಸತ್ಯ ಹರಿಶ್ಚಂದ್ರ' ಚಿತ್ರಕ್ಕೆ ನಾಯಕಿಯ ಹುಡುಕಾಟದಲ್ಲಿ ತೊಡಗಿದ್ದಾಗ, ಆಕಸ್ಮಿಕವಾಗಿ ಸಂಚಿತಾ ಪಡುಕೋಣೆ ಅವರ ಫೋಟೋ ಫೇಸ್ ಬುಕ್ಕಿನಲ್ಲಿ ಸಿಕ್ಕಿತ್ತು. ಗಣೇಶ ಹಬ್ಬದ ಅಂಗವಾಗಿ ಸಂಚಿತಾ ಅವರು ಶುಭಾಶಯ ಕೋರಿ ಪೋಟೋ ಅಪ್ ಲೋಡ್ ಮಾಡಿದ್ದರು ಅದನ್ನು ಕಂಡ ದಯಾಳ್ ಅವರು ಸಂಚಿತಾ ಅವರನ್ನು ಕಾಂಟಾಕ್ಟ್ ಮಾಡಿದ್ದರು.[ಭಿಕ್ಷುಕರಾಗಿ 128 ರೂಪಾಯಿ ಸಂಪಾದಿಸಿದ ಕಾಮಿಡಿ ಕಿಂಗ್ ಶರಣ್]

ಕನ್ನಡದಲ್ಲಿ ನೆಲೆಯೂರುವ ಮನಸ್ಸು ಮಾಡಿರುವ ಸಂಚಿತಾ

ಕನ್ನಡದಲ್ಲಿ ನೆಲೆಯೂರುವ ಮನಸ್ಸು ಮಾಡಿರುವ ಸಂಚಿತಾ

'ರಾವಣ' ಚಿತ್ರದ ನಂತರ ನಾಪತ್ತೆಯಾಗಿದ್ದ ಕುಂದಾಪುರದ ಹುಡುಗಿ ಸಂಚಿತಾ ಪಡುಕೋಣೆ ಅವರು, ಕನ್ನಡದಲ್ಲಿ ಒಳ್ಳೆ ಸ್ಕ್ರಿಪ್ಟ್ ಗಾಗಿ ಇಷ್ಟು ದಿನ ಕಾದಿದ್ದರಂತೆ. ಇದೀಗ 'ಸತ್ಯ ಹರಿಶ್ಚಂದ್ರ' ಚಿತ್ರದ ಮೂಲಕ ಒಳ್ಳೆ ಸ್ಕ್ರಿಪ್ಟ್ ದೊರೆತಿದ್ದು, ಕನ್ನಡದಲ್ಲಿ ಮತ್ತೆ ಅವಕಾಶ ದೊರೆತಿದ್ದಕ್ಕಾಗಿ ಸಖತ್ ಖುಷಿಯಾಗಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲೇ ನೆಲೆಸಿರುವ ಸಂಚಿತಾ ಅವರು ಕನ್ನಡ ಚಿತ್ರರಂಗದಲ್ಲೇ ನೆಲೆಯೂರುವ ಮಹದಾಸೆಯನ್ನು ಹೊಂದಿದ್ದಾರೆ.

ಯಾವಾಗ ಚಿತ್ರೀಕರಣ

ಯಾವಾಗ ಚಿತ್ರೀಕರಣ

ಗೌರಿ-ಗಣೇಶ ಹಬ್ಬದ ದಿನ ಮುಹೂರ್ತ ನೆರವೇರಿಸಿಕೊಂಡ 'ಸತ್ಯ ಹರಿಶ್ಚಂದ್ರ' ಚಿತ್ರತಂಡ, ಇದೇ ತಿಂಗಳು 24 ರಿಂದ, ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ಆರಂಭ ಮಾಡಲಿದೆಯಂತೆ. ತದನಂತರ ಜರ್ಮನಿ, ಜೆಕ್ ರಿಪಬ್ಲಿಕ್, ಸ್ವಿಟ್ಜರ್ಲ್ಯಾಂಡ್ ಮುಂತಾದೆಡೆ, ಸುಮಾರು 20 ದಿನಗಳ ಕಾಲ ಚಿತ್ರೀಕರಣ ನಡೆಸಲಿದೆ.

'ಸತ್ಯ ಹರಿಶ್ಚಂದ್ರ' ರೀಮೇಕ್ ಸಿನಿಮಾನಾ?

'ಸತ್ಯ ಹರಿಶ್ಚಂದ್ರ' ರೀಮೇಕ್ ಸಿನಿಮಾನಾ?

ಕೆ.ಮಂಜು ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರ ರೀಮೇಕ್ ಅಥವಾ ಸ್ವಮೇಕಾ ಅಂತ ಇನ್ನೂ ನಿರ್ದೇಶಕರು ಹೇಳಿಲ್ಲ. ಮೂಲಗಳ ಪ್ರಕಾರ ಇದು ಸ್ವಮೇಕ್ ಸಿನಿಮಾ ಎಂದು ಹೇಳಲಾಗುತ್ತಿದೆ. ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಸಂಭಾಷಣೆಯ ಜೊತೆಗೆ ನಿರ್ದೇಶನವನ್ನು ಕೂಡ ದಯಾಳ್ ಅವರೇ ಮಾಡಿದ್ದಾರೆ.

More from Filmibeat

English summary
Kannada Actor Sharan's next film 'Sathya Harischandra', has now got a heroine. Actress Sanchitha Padukone, who made her debut with the Kannada movie 'Ravana' and later ventured into Tamil industry, is making a comeback with this flick. 'Sathya Harischandra' was launched recently at the Ganesha Temple, Bashveshwarnagar. The movie is directed by Dayal Padmanabhan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X