For Quick Alerts
  ALLOW NOTIFICATIONS  
  For Daily Alerts

  ಅಪ್ಪ-ಅಮ್ಮಂದಿರಿಗೆ ಕಾಶಿ ವಿಶ್ವನಾಥನ ದರ್ಶನ ಮಾಡಿಸಿದ ಸಂತಸದಲ್ಲಿ ಶರಣ್

  |

  ಸ್ಯಾಂಡಲ್ ವುಡ್ ನ ಕಾಮಿಡಿ ಕಿಂಗ್ ನಟ ಶರಣ್ ಸದ್ಯ ಅವತಾರ ಪುರುಷ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯು ಶರಣ್ ಈಗ ಕಾಶಿ ಯಾತ್ರೆ ಕೈಗೊಂಡಿದ್ದಾರೆ. ಅಂದ್ಹಾಗೆ ಶರಣ್ ದಿಢೀರನೆ ಕಾಶಿ ಯಾತ್ರೆ ಹೊರಟ ಕಾರಣ ಅವರ ಅಪ್ಪ ಮತ್ತು ಅಮ್ಮಂದಿರಿಗಾಗಿ. ಕಾಶಿ ಯಾತ್ರೆ ಮಾಡಬೇಕು ಎನ್ನುವುದು ಅನೇಕರ ಕನಸಾಗಿರುತ್ತೆ. ಹಾಗೆ ಕಾಶಿ ವಿಶ್ವನಾಥನ ದರ್ಶನ ಮಾಡಬೇಕೆನ್ನುವುದು ಶರಣ್ ಅಪ್ಪ ಅಮ್ಮಂದಿರ ಬಹುದಿನಗಳ ಕನಸಾಗಿತ್ತಂತೆ.

  ಅಪ್ಪ-ಅಮ್ಮನ ಕನಸನ್ನು ನನಸು ಮಾಡುವುದು ಮಕ್ಕಳ ಕರ್ತವ್ಯ. ಆದರೆ ಪೋಷಕರ ಆಸೆಯನ್ನು ಈಡೇರಿಸುವ ಮಕ್ಕಳು ತೀರ ವಿರಳ. ನಟ ಶರಣ್ ವಿಶ್ವನಾಥನ ದರ್ಶನ ಮಾಡಲು ಅಪ್ಪ ಅಮ್ಮಂದಿರನ್ನು ಕರೆದುಕೊಂಡು ಕಾಶಿಗೆ ತೆರಳಿದ್ದಾರೆ. ಕಲಾವಿದರು ಶೂಟಿಂಗ್ ನೆಪದಲ್ಲಾದರು ಅನೇಕ ಊರುಗಳನ್ನು ನೋಡಿರುತ್ತಾರೆ. ಆದರೆ ಶರಣ್ ಅಪ್ಪ ಅಮ್ಮಂದಿರಿಗೂ ಕಾಶಿ ದರ್ಶನ ಮಾಡಿಸಿದ್ದಾರೆ.

  ಅಂದು ಆರ್ಕೆಸ್ಟ್ರಾದಲ್ಲಿದ್ದ ಯುವಕ ಇಂದು ಸ್ಯಾಂಡಲ್ ವುಡ್ ಸ್ಟಾರ್ ನಟಅಂದು ಆರ್ಕೆಸ್ಟ್ರಾದಲ್ಲಿದ್ದ ಯುವಕ ಇಂದು ಸ್ಯಾಂಡಲ್ ವುಡ್ ಸ್ಟಾರ್ ನಟ

  ಕಾಶಿಯ ಗಂಗಾ ನಂದಿ ತೀರದಲ್ಲಿ ಶರಣ್ ಮತ್ತು ಅಪ್ಪ ಅಮ್ಮಂದಿರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ ಶರಣ್. ಈ ಫೋಟೋ ನೋಡಿ ಅನೇಕ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿ ಶುಭಾಶಯ ಕೋರುತ್ತಿದ್ದಾರೆ.

  ಶರಣ್ ಹಂಚಿಕೊಂಡಿರುವ ಫೋಟೋದಲ್ಲಿ ಅಪ್ಪ-ಅಮ್ಮಂದಿರಿಗೆ ಕಾಶಿ ದರ್ಶನ ಮಾಡಿಸಿದ ಸಂತೃಷ್ತಿ ಮನೋಭಾವ ಶರಣ್ ಮುಖದಲ್ಲಿ ಎದ್ದು ಕಾಣುತ್ತಿದ್ದರೆ, ಮಗನ ಜೊತೆ ವಿಶ್ವನಾಥನ ದರ್ಶನ ಮಾಡಿದ ಸಂತಸ ಪೋಷಕರ ಮುಖದಲ್ಲಿ ಕಾಣುತ್ತಿದೆ. ಈ ಬಗ್ಗೆ ಶರಣ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  "ಅಪ್ಪ ಅಮ್ಮಂದಿರ ಜೊತೆ ಕಾಶಿ ವಿಶ್ವನಾಥನ ದರ್ಶನ ಪಡೆದ ಭಾಗ್ಯ ನನ್ನದಾಯಿತು"ಎಂದು ಹೇಳಿದ್ದಾರೆ. ಶರಣ್ ಸದ್ಯ ಅವತಾರ ಪುರುಷ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಚಿತ್ರದಲ್ಲಿ ಶರಣ್ ಗೆ ಜೋಡಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿದ್ದಾರೆ.

  Read more about: sharan ಶರಣ್
  English summary
  Kannada actor Sharan Visited Kashi Vishwanath Temple with his parents.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X