ಸಿ.ಎಂ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ನೀಡಿದ ನಟ ಶಿವರಾಜ್ ಕುಮಾರ್
Recommended Video

''ಕೊಡಗಿನ ಜನತೆಗೆ ನೆರವು ನೀಡಿ.. ಯಾವುದೇ ಭೇದಭಾವ ಇಲ್ಲದೆ ಎಲ್ಲರಿಗೂ ಸಹಾಯ ಮಾಡಿ..'' ಎಂದು ಮೂರು ದಿನಗಳ ಹಿಂದೆಯಷ್ಟೇ ನಟ ಶಿವರಾಜ್ ಕುಮಾರ್ ವಿಡಿಯೋ ಮೂಲಕ ಕನ್ನಡಿಗರ ಬಳಿ ಕೇಳಿಕೊಂಡಿದ್ದರು.
ಇದೀಗ ಸ್ವತಃ ನಟ ಶಿವರಾಜ್ ಕುಮಾರ್ ಕೊಡಗಿನ ಜನತೆಗೆ ಸಹಾಯ ಆಗಲಿ ಎಂದು ಹತ್ತು ಲಕ್ಷ ರೂಪಾಯಿ ನೀಡಲು ಮುಂದಾಗಿದ್ದಾರೆ. ಸಿ.ಎಂ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ನೀಡಲು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಿರ್ಧಾರ ಮಾಡಿದ್ದಾರೆ.
ಇಂದು ಸಂಜೆ ಹೊತ್ತಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರ ಮಾಡಲಿದ್ದಾರೆ.
ಈಗಾಗಲೇ ನಟ ಯಶ್ ತಮ್ಮ 'ಯಶೋಮಾರ್ಗ' ಫೌಂಡೇಶನ್ ಮೂಲಕ ಕೊಡಗಿನ ಜನತೆಗೆ ಅಗತ್ಯ ವಸ್ತುಗಳನ್ನು ನೀಡಿ ಸಹಾಯ ಮಾಡಿದ್ದಾರೆ. ಇನ್ನೂ ನಟ ಜಗ್ಗೇಶ್ ಹಾಗೂ ಸಂಯುಕ್ತ ಹೊರನಾಡು ಕೂಡ ಟ್ರಕ್ ಗಳ ಮುಖಾಂತರ ಕೊಡಗಿನ ಜನರಿಗೆ ಪ್ರತಿನಿತ್ಯ ಬಳಸುವ ವಸ್ತುಗಳನ್ನ ಪೂರೈಕೆ ಮಾಡುತ್ತಿದ್ದಾರೆ.

ಹಾಗೇ, ನಟ ಪ್ರಕಾಶ್ ರೈ ಕೊಡಗು ಜನತೆಗೆ 5 ಲಕ್ಷ ರೂಪಾಯಿ ನೀಡುತ್ತೇನೆ ಎಂದು ಘೋಷಿಸಿದ್ದಾರೆ. ಒಟ್ನಲ್ಲಿ ಕೊಡಗಿನವರಿಗೆ ಸಹಾಯ ಮಾಡಲು ಒಬ್ಬೊಬ್ಬರೇ ಮುಂದೆ ಬರುತ್ತಿದ್ದಾರೆ. ವರುಣನ ಅಬ್ಬರ ಕಮ್ಮಿ ಆಗಿ, ಮತ್ತೆ ಸಹಜ ಸ್ಥಿತಿಯತ್ತ ಕೊಡಗು ಬೇಗ ಬರಲಿ ಅನ್ನೋದೇ ಎಲ್ಲರ ಪ್ರಾರ್ಥನೆ.


Click it and Unblock the Notifications











