For Quick Alerts
  ALLOW NOTIFICATIONS  
  For Daily Alerts

  ಗಣೇಶ ಹಬ್ಬದಂದು 'ಪಾರ್ವತಿ' ದತ್ತು ಪಡೆದ ನಟ ಶಿವರಾಜ್ ಕುಮಾರ್

  |

  ಗಣೇಶ ಹಬ್ಬದ ಸಂಭ್ರಮದಲ್ಲಿರುವ ಕನ್ನಡ ನಟ ಶಿವರಾಜ್ ಕುಮಾರ್ 'ಪಾರ್ವತಿ' ಎಂಬ ಆನೆಯನ್ನು ದತ್ತು ಪಡೆದುಕೊಂಡಿದ್ದಾರೆ. 75 ಸಾವಿರ ರೂಪಾಯಿ ಪಾವತಿಸಿ ಒಂದು ವರ್ಷ ಅವಧಿಗೆ ದತ್ತು ಪಡೆದಿದ್ದಾರೆ.

  ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

  ಈ ವಿಚಾರವನ್ನು ಖುದ್ದು ಮೈಸೂರು ಮೃಗಾಲಯದ ಆಡಳಿತ ಮಂಡಳಿ ಅಧಿಕೃತವಾಗಿ ತಿಳಿಸಿದೆ. 'ಪ್ರಸಿದ್ಧ ಕನ್ನಡ ಚಲನಚಿತ್ರ ತಾರೆ ಡಾ.ಶಿವರಾಜ್ ‌ಕುಮಾರ್ ಅವರು 20/08/2020 ರಿಂದ 19/08/2021 ರವರೆಗೆ "ಪಾರ್ವತಿ" ಎಂಬ ಆನೆ ಮರಿಯನ್ನು 75,000 ರೂ ಪಾವತಿಸಿ ದತ್ತು ಪಡೆದಿದ್ದಾರೆ. ಮೈಸೂರು ಮೃಗಾಲಯ ಮತ್ತು ಕರ್ನಾಟಕದ ಮೃಗಾಲಯ ಪ್ರಾಧಿಕಾರ ಡಾ.ಶಿವರಾಜ್ ‌ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತದೆ' ಎಂದು ಟ್ವೀಟ್ ಮಾಡಿದ್ದಾರೆ.

  'ಧೈರ್ಯವಾಗಿ ಶೂಟಿಂಗ್ ಶುರು ಮಾಡಿ', ಮತ್ತೆ ಅಖಾಡಕ್ಕಿಳಿದ ಶಿವಣ್ಣ'ಧೈರ್ಯವಾಗಿ ಶೂಟಿಂಗ್ ಶುರು ಮಾಡಿ', ಮತ್ತೆ ಅಖಾಡಕ್ಕಿಳಿದ ಶಿವಣ್ಣ

  ಅಂದ್ಹಾಗೆ, ಐರಾವತಿ ಎಂಬ ಆನೆ ಜನ್ಮ ನೀಡಿದ್ದ ಹೆಣ್ಣಾನೆಗೆ 2017ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಪಾರ್ವತಿ ಎಂದು ಹೆಸರಿಟ್ಟಿದ್ದರು. ಅದೇ ಆನೆಯನ್ನು ಶಿವರಾಜ್ ಕುಮಾರ್ ದತ್ತು ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  ಇನ್ನುಳಿದಂತೆ ಕೊರೊನಾ ವೈರಸ್‌ನಿಂದ ಇಷ್ಟು ಸಮಯ ಮನೆಯಲ್ಲಿ ದಿನ ಕಳೆದ ಶಿವರಾಜ್ ಕುಮಾರ್ ಇಂದಿನಿಂದ ಭಜರಂಗಿ-2 ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಉಳಿದ ಚಿತ್ರತಂಡಗಳು ಸಹ ಧೈರ್ಯದಿಂದ ಶೂಟಿಂಗ್ ಶುರು ಮಾಡಬೇಕೆಂದು ಶಿವಣ್ಣ ವಿನಂತಿಸಿಕೊಂಡಿದ್ದಾರೆ.

  English summary
  The famous Kannada film star, Dr Shivrajkumar has adopted an elephant calf named “Parvathi” by donating Rs.75,000.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X