ಶಿವಣ್ಣ ಅವರು ಒಂಥರಾ 'ಬುಲೆಟ್' ಇದ್ದ ಹಾಗೆ ಎಂದವರು ಯಾರು?

By Suneetha

ಹ್ಯಾಟ್ರಿಕ್ ಹೀರೋ ಶಿವಣ್ಣ ನನ್ನ ಅಣ್ಣ, ನಾನು ಅವರ ಮುದ್ದಿನ ತಮ್ಮ ಎಂದು ರಾಕಿಂಗ್ ಸ್ಟಾರ್ ಯಶ್ ಘೋಷಣೆ ಮಾಡಿದ್ದಾರೆ. ಸದ್ಯಕ್ಕೆ ಗಾಂಧಿನಗರದಲ್ಲಿ 'ಮಾಸ್ಟರ್ ಪೀಸ್' ಆಗಿ ಸಖತ್ ಹವಾ ಮೈಂಟೇನ್ ಮಾಡುತ್ತಿರುವ ರಾಕಿಂಗ್ ಸ್ಟಾರ್ ಶಿವಣ್ಣ ನನ್ನ ಮುದ್ದಿನ ಅಣ್ಣ ಎಂದಿದ್ದಾರೆ.

ಅಂದಹಾಗೆ ಯಶ್ ಅವರು ಶಿವಣ್ಣ ಅವರ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಸಖತ್ ಜೋಷ್ ಮೂಡ್ ನಲ್ಲಿದ್ದರು. ಜೊತೆಗೆ ಶಿವಣ್ಣ ಅವರ ಜೊತೆ ತುಂಬಾ ಹರಟೆ ಹೊಡೆಯುತ್ತಿದ್ದರು.['ಕಿಲ್ಲಿಂಗ್ ವೀರಪ್ಪನ್' ಆಡಿಯೋ ಲಾಂಚ್ ಮಾಡಲಿರುವ ಪವರ್ ಸ್ಟಾರ್]

ನಿನ್ನೆ(ನವೆಂಬರ್ 2) ಸಂಜೆ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನಡೆದ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿ ಆಡಿಯೋ ಬಿಡುಗಡೆ ಮಾಡಿದರು.

"ಡಾ.ಶಿವಣ್ಣ ಅವರು ತೆರೆಯ ಹಿಂದೆ, ಹಾಗೆನೇ ತೆರೆಯ ಮುಂದೆ ಕೂಡ ಅವರೊಬ್ಬ ಪರ್ಫೆಕ್ಟ್ ಜಂಟಲ್ ಮ್ಯಾನ್. ನಾನು ಅವರ 'ತಮ್ಮ'. ಜೊತೆಗೆ ಶಿವಣ್ಣ ಅವರು ಒಂಥರಾ ಬುಲ್ಲೆಟ್ ಇದ್ದಂತೆ. ಇನ್ನು ನಿರ್ದೇಶಕ ಆರ್ ಜಿ ವಿ ಅವರು ಇನ್ನೊಂದು ಭಾಗದ ಬುಲೆಟ್ ಇದ್ದಂತೆ, ಅಲ್ಲದೇ ಅವರು ಮುಟ್ಟಿದ ಕೆಲಸವನ್ನು ಕೂಡ ಅಷ್ಟೇ ವೇಗದಲ್ಲಿ ಮಾಡಿ ಮುಗಿಸುತ್ತಾರೆ.

'ಜಸ್ಟ್ ಇಮ್ಯಾಜಿನ್ ಆ ಎರಡು ಬುಲೆಟ್ ಸೇರಿದರೆ ಹೇಗಿರಬಹುದು ಅಂತ ರಾಕಿಂಗ್ ಸ್ಟಾರ್ ಯಶ್ ಅವರು ಶಿವಣ್ಣ ಹಾಗೂ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರನ್ನು ಬುಲೆಟ್ ಗೆ ಹೋಲಿಸಿದ್ದಾರೆ.[ದೀಪಾವಳಿಗೆ ಸಖತ್ ಸದ್ದು ಮಾಡಲಿದೆ ಕಿಲ್ಲಿಂಗ್ ವೀರಪ್ಪನ್!]

ಇನ್ನು ಯಶ್ ಅವರು ನಿರ್ದೇಶಕ ಆರ್‌.ಜಿ.ವಿ ಬಗ್ಗೆ ಹೇಳುತ್ತಾ, 'ಇಂತಹ ನಿರ್ದೇಶಕರು ನಮ್ಮ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ನಟರಿಗೂ ತುಂಬಾ ಬೇಕಾದವರು. ಅಲ್ಲದೇ ಇವರು ನಮ್ಮ ಕನ್ನಡದ ನಟರಿಗೆ ಕೆಲಸ ಮಾಡುತ್ತಿರುವುದು ತುಂಬಾ ಖುಷಿಯ ವಿಚಾರ'.

'ಇದೀಗ ಮತ್ತೆ ಆರ್.ಜಿ.ವಿ ಅವರು ಕಿಚ್ಚ ಸುದೀಪ್ ಅವರೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಅಲ್ಲದೇ ವರ್ಮಾ ಅವರ ನಿರ್ದೇಶನದ ಚಿತ್ರ ಅಂದರೆ ಆ ಸಿನಿಮಾದಲ್ಲಿ ಒಂಥರಾ ವಿಶೇಷತೆ ಇದ್ದೇ ಇರುತ್ತದೆ ಎಂದು ರಾಕಿಂಗ್ ಸ್ಟಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅದೇನೇ ಇರಲಿ ಒಟ್ನಲ್ಲಿ ಈ ವರ್ಷದ (ನವೆಂಬರ್ 12 ರಂದು) ದೀಪಾವಳಿಗೆ 'ಕಿಲ್ಲಿಂಗ್ ವೀರಪ್ಪನ್ ತೆರೆ ಕಾಣುತ್ತಿದ್ದು, ಪ್ರೇಕ್ಷಕರು 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಜೊತೆ ಭರ್ಜರಿಯಾಗಿ ದೀಪಾವಳಿ ಆಚರಿಸಬಹುದು.

More from Filmibeat

English summary
The rocking star of Kannada cinema who is now up to become ‘Master Piece’ in Kannada cinema was in joyous mood at the audio, trailer launch of ‘Killing Veerappan’. Yash considers Dr Shiv as on and off screen perfect gentleman. I am his ‘Thamma’ and he is like Bullet. The movie is directed by Ram Gopal Varma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X