ಅಂದು 'ಬಂಗಾರದ ಮನುಷ್ಯ': ಇಂದು 'ಶಂಕರ್ ಗುರು'.!
ವಯಸ್ಸು ಅರ್ಧ ಸಂಚುರಿ ದಾಟಿದ್ರೂ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಖದರ್ ಮಾತ್ರ ಸ್ಯಾಂಡಲ್ ವುಡ್ ನಲ್ಲಿ ಮೂವತ್ತು ವರ್ಷಗಳ ಹಿಂದೆ ಹೇಗಿತ್ತೋ, ಇವತ್ತಿಗೂ ಹಾಗೇ ಇದೆ.
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಆ ಪೈಕಿ 'ಕಬೀರ' ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ 'ಶ್ರೀಕಂಠ' ಹಾಗೂ 'ಬಂಗಾರ...ಸನ್ ಆಫ್ ಬಂಗಾರದ ಮನುಷ್ಯ' ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್ ತೊಡಗಿದ್ದಾರೆ. ['ಬಂಗಾರದ ಮನುಷ್ಯ'ನ ಅವತಾರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ]

ಹೀಗಿರುವಾಗಲೇ, ಶಿವರಾಜ್ ಕುಮಾರ್ ಒಂದು ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆ ಚಿತ್ರವೇ 'ಶಂಕರ್ ಗುರು'.
'ಶಂಕರ್ ಗುರು' ಅಂದಕೂಡಲೆ ನಿಮಗೆ 1978 ರಲ್ಲಿ ತೆರೆಕಂಡ ಡಾ.ರಾಜ್ ಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ 'ಶಂಕರ್ ಗುರು' ನೆನಪಿಗೆ ಬರಬಹುದು.

ಈಗ ಅದೇ ಚಿತ್ರವನ್ನು ನೆನಪಿಸುವಂತೆ, ಅದೇ ಶೀರ್ಷಿಕೆಯನ್ನಿಟ್ಟುಕೊಂಡು (ಶಂಕರ್ ಗುರು) ಹೊಸ ಸಿನಿಮಾ ಶುರುವಾಗಲಿದೆ. ಹಾಗಾದ್ರೆ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧ ಇದ್ಯಾ? ಅಪ್ಪನಂತೆ, ಮಗ ಶಿವಣ್ಣ ಇಲ್ಲೂ ಮೂರ್ಮೂರು ಪಾತ್ರಗಳಲ್ಲಿ ಕಾಣಿಸಿಕೊಳ್ತಾರಾ? ಅಂತ ಈಗಲೇ ಪ್ರಶ್ನೆ ಕೇಳ್ಬೇಡಿ. ಯಾಕಂದ್ರೆ, ಉತ್ತರ ಕೊಡಲು ನಿರ್ದೇಶಕರು ತಯಾರಿಲ್ಲ.

ಅಸಲಿಗೆ, ನೂತನ 'ಶಂಕರ್ ಗುರು' ಚಿತ್ರಕ್ಕೆ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವವರು ಯೋಗರಾಜ್ ಭಟ್ ಶಿಷ್ಯ ಹರಿಪ್ರಸಾದ್ ಜಯಣ್ಣ. ಹೀಗಾಗಿ, 'ಶಂಕರ್ ಗುರು' ಚಿತ್ರಕ್ಕೆ ಭಟ್ರ ಸಾಹಿತ್ಯ ಇರಲಿದೆ ಎಂಬ ಊಹೆ ಬಿಟ್ರೆ ಬಾಕಿ ಇನ್ಯಾವುದು ಪಕ್ಕಾ ಆಗಿಲ್ಲ.
ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅಭಿನಯದ ಸರ್ವಕಾಲಿಕ ಸೂಪರ್ ಹಿಟ್ ಸಿನಿಮಾ 'ಬಂಗಾರದ ಮನುಷ್ಯ' ಟೈಟಲ್, 'ಬಂಗಾರ...ಸನ್ ಆಫ್ ಬಂಗಾರದ ಮನುಷ್ಯ' ಚಿತ್ರಕ್ಕಾಗಿ ರಿಪೀಟ್ ಆಗಿರುವಂತೆ ಈಗ 'ಶಂಕರ್ ಗುರು' ಸರದಿ.

ಈ ಎರಡೂ ಶಿವಣ್ಣನ ಚಿತ್ರಗಳು ಅಪ್ಪನ ಕ್ಲಾಸಿಕ್ ಸಿನಿಮಾಗಳಂತೆ ಬಾಕ್ಸ್ ಆಫೀಸ್ ಉಡೀಸ್ ಮಾಡಲಿ ಎಂಬುದೇ 'ರಾಜವಂಶ'ದ ಅಭಿಮಾನಿಗಳ ಆಶಯ.


Click it and Unblock the Notifications