''ಭಾರತದ ಶಕ್ತಿಶಾಲಿ ರಾಜಕೀಯ ನಾಯಕರಲ್ಲಿ ಕರುಣಾನಿಧಿ ಒಬ್ಬರು'' - ಶಿವರಾಜ್ ಕುಮಾರ್

By Naveen

Recommended Video

ಕರುಣಾನಿಧಿ ಬಗ್ಗೆ ಮಾತನಾಡಿದ ಶಿವರಾಜ್‌ಕುಮಾರ್..! | Filmibeat Kannada

ತಮಿಳು ನಾಡಿನ ಜನನಾಯಕ ಹಾಗೂ ಕಾಲಿವುಡ್ ಚಿತ್ರರಂಗ ಕಂಡ ಅದ್ಬುತ ಸಾಹಿತಿ ಕರುಣಾನಿಧಿ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಕನ್ನಡದ ಹಿರಿಯ ನಟಿ ಲೀಲಾವತಿ, ಹಿರಿಯ ನಟ, ನಿರ್ಮಾಪಕ ದ್ವಾರಕೀಶ್, ನಟ ಸುದೀಪ್ ಸೇರಿದಂತೆ ಅನೇಕರು ಈಗಾಗಲೇ ಸಂತಾಪ ಸೂಚಿಸಿದ್ದಾರೆ. ಈಗ ನಟ ಶಿವರಾಜ್ ಕುಮಾರ್ ಕೂಡ ಕರುಣಾನಿಧಿ ಅವರನ್ನು ನೆನೆಪು ಮಾಡಿಕೊಂಡಿದ್ದಾರೆ.

ಕರುಣಾನಿಧಿ ಅವರ ಬಗ್ಗೆ ನೋವಿನಿಂದ ಮಾತನಾಡಿದ ಶಿವಣ್ಣ ''ನಾನು ಚಿಕ್ಕ ಹುಡುಗ ಆಗಿದ್ದಾಗಿನಿಂದ ಅವರನ್ನು ನೋಡುಕೊಂಡು ಬೆಳೆದಿದ್ದೆ. ಈ ವಿಷಯ ಕೇಳಿ ನಮಗೆ ತುಂಬ ನೋವಾಗಿದೆ. ಅವರ ಕುಟುಂಬ ನಮ್ಮ ಕುಟಂಬಕ್ಕೆ ಚೆನ್ನಾಗಿ ಪರಿಚಯ ಇದೆ. ಅವರು ಅವರು ಒಳ್ಳೆಯ ರೈಟರ್ ಆಗಿದ್ದು, ಸಿನಿಮಾ ಹಾಗೂ ರಾಜಕೀಯ ಎರಡು ಕ್ಷೇತ್ರದಲ್ಲಿ ಜ್ಞಾನ ಹೊಂದಿದ್ದರು. ಭಾರತದ ಶಕ್ತಿಶಾಲಿ ರಾಜಕೀಯ ನಾಯಕರಲ್ಲಿ ಅವರು ಒಬ್ಬರು'' ಎಂದು ಕರುಣಾನಿಧಿ ಅವರ ಬಗ್ಗೆ ಶಿವಣ್ಣ ನೋವಿನ ನುಡಿಯನ್ನು ಹೇಳಿಕೊಂಡಿದ್ದಾರೆ.

ಜೊತೆಗೆ ರಾಜ್ ಕುಮಾರ್ ಹಾಗೂ ಕರುಣಾನಿಧಿ ಅವರ ಬಗ್ಗೆ ಮಾತನಾಡಿರುವ ಶಿವರಾಜ್ ಕುಮಾರ್ ''ಐದು ಬಾರಿ ಮುಖ್ಯ ಮಂತ್ರಿ ಆಗುವುದು ಎಂದರೆ ತುಂಬ ದೊಡ್ಡ ಸಾಧನೆ. ಅಪ್ಪಾಜಿ ಅಪಹರಣ ಆದ ಸಂಧರ್ಭದಲ್ಲಿ ಅವರೇ ಸಿಎಂ ಆಗಿದ್ದರು. ಅಪ್ಪಾಜಿ ಬಗ್ಗೆ ಅವರಿಗೆ ತುಂಬ ಗೌರವ ಇತ್ತು. ಇಂದು ಭಾರತ ಒಬ್ಬ ಒಳ್ಳೆಯ ರಾಜಕೀಯ ವ್ಯಕ್ತಿಯನ್ನು ಕಳೆದುಕೊಂಡಿದೆ. ಜನರಿಗೆ ಒಳ್ಳೆಯದು ಮಾಡಬೇಕು ಎನ್ನುವುದು ಅವರಿಗೆ ಇತ್ತು. ಅವರ ಸರಳತೆ ನನಗೆ ತುಂಬ ಇಷ್ಟ ಆಗುತ್ತಿತ್ತು'' ಎಂದು ಕಂಬಿನಿ ಮಿಡಿದಿದ್ದಾರೆ.

kannada actor Shiva Rajkumar pays Condolence to M Karunanidhi

ಅಂದಹಾಗೆ, ತಮಿಳುನಾಡಿನ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಆಗಿದ್ದ ಕರುಣಾನಿಧಿ ಅವರು ನಿನ್ನೆ (ಆಗಸ್ಟ್ 7) ನಿಧನರಾದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 94 ವರ್ಷದ ಡಿಎಂಕೆ ಪಕ್ಷದ ಅಧಿನಾಯಕ ಈಗ ನೆನಪು ಮಾತ್ರ.

More from Filmibeat

English summary
Former chief minister of Tamil Nadu and DMK supremo M Karunanidhi passed away at Chennai's Kauvery Hospital at 6:10 pm on Tuesday, 7 August. Kannada actor Shiva Rajkumar pays Condolence to M Karunanidhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X