ರಾಮ್ ಲೀಲಾ, ಮೂರನೇ ಹಾಡು ರಿಲೀಸ್ ಮಾಡಿದ ಹ್ಯಾಟ್ರಿಕ್ ಹೀರೋ
ನಟ ಚಿರಂಜೀವಿ ಸರ್ಜಾ ಅವರು ತಮ್ಮ ಹುಟ್ಟುಹಬ್ಬವನ್ನು ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಕೇಕ್ ಕತ್ತರಿಸುವ ಮೂಲಕ 'ರಾಮ್ ಲೀಲಾ' ಚಿತ್ರ ತಂಡದೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡರು.
ನಟ ಶಿವಣ್ಣ ಅವರು ಚಿರಂಜೀವಿ ಸರ್ಜಾ ಹಾಗೂ ಅಮೂಲ್ಯಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ರೊಮ್ಯಾಂಟಿಕ್ 'ರಾಮ್ ಲೀಲಾ' ಚಿತ್ರದ ಮೂರನೇ ಹಾಡು 'ನೀನು ಬಂದ ಮೇಲೆ' ಹಾಡನ್ನು ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.[ರಾಮ್ ಲೀಲಾ ಹಾಡಿಗೆ ಪವರ್ ಸ್ಟಾರ್ ಪವರ್ ಫುಲ್ ವಾಯ್ಸ್]
"ಸೌಂದರ್ಯ ಜಗದೀಶ್ ಅವರ ಹೊಸ ಚಿತ್ರ 'ರಾಮ್ ಲೀಲಾ' ಚಿರಂಜೀವಿ ಸರ್ಜಾ ಅವರು ನಟಿಸಿದ್ದಾರೆ. ಟ್ರೈಲರ್ ನೋಡಿದೆ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಒಟ್ಟಾರೆ ಫಿಲ್ಮ್ ತುಂಬಾ ಇಂಟ್ರೆಸ್ಟಿಂಗ್ ಆಗಿದೆ ಅಂತ ಅನಿಸುತ್ತಿದೆ, ನನಗೂ ಈ ಹಾಡು ನೋಡಿದ ಮೇಲೆ ಸ್ವಲ್ಪ ಕುತೂಹಲ ಜಾಸ್ತಿ ಆಯ್ತು. ಈ ಹಾಡಂತೂ ತುಂಬಾ ಚೆನ್ನಾಗಿದೆ. ಅಪ್ಪು ಬೇರೆ ಈ ಫಿಲ್ಮ್ ಗೆ ಒಂದು ಹಾಡು ಹಾಡಿದ್ದಾರೆ.['ರಾಮ್ ಲೀಲಾ' ಸುರ್ರ್..ಸೂಪರ್ರು, ಹಾಡು ಬಿಡುಗಡೆ ಮಾಡಿದ ಉಪೇಂದ್ರ]
'ನನಗೆ ಸಂಗೀತ ನಿರ್ದೇಶಕರು ತುಂಬಾ ಇಷ್ಟ, ತೆಲುಗು ಚಿತ್ರ 'ಮನಂ' ನೋಡಿದ ಮೇಲೆ ನಾನು ತುಂಬಾ ಇಷ್ಟಪಡುತ್ತೇನೆ. ಜೊತೆಗೆ ಈ ಹಾಡಿಗೆ ಬಳಸಿಕೊಂಡ ಲೊಕೇಷನ್ ತುಂಬಾನೇ ಚೆನ್ನಾಗಿದೆ. ನಿರ್ದೇಶಕರಿಗೆ ಫಸ್ಟ್ ಫಿಲ್ಮ್ ಆದ್ರೂನು, ಇದನ್ನು ನೋಡ್ತಾ ಇದ್ರೆ ಫಸ್ಟ್ ಫಿಲ್ಮ್ ಥರಾ ಅನ್ನಿಸುತ್ತಿಲ್ಲ, ಖಂಡಿತವಾಗಿಯೂ ಈ ಸಿನಿಮಾ ನೋಡಬೇಕೆಂದಿದ್ದೇನೆ. ನೋಡುತ್ತೇನೆ. ಆಲ್ ದ ಬೆಸ್ಟ್' ಎಂದು ಶಿವಣ್ಣ ಅವರು 'ರಾಮ್ ಲೀಲಾ' ತಂಡಕ್ಕೆ ವಿಶ್ ಮಾಡಿದ್ದಾರೆ.
ಕವಿರಾಜ್ ಸಾಹಿತ್ಯದಲ್ಲಿ ಗಾಯಕ ಸೋನು ನಿಗಮ್ ಹಾಗು ಶ್ರಾವಣಿ ರಾಜ್ ಕುಮಾರ್ ಅವರ ಧ್ವನಿಯಲ್ಲಿ ಮೂಡಿಬಂದಿರುವ 'ನೀನು ಬಂದ ಮೇಲೆ' ಹಾಡಿನ ವಿಡಿಯೋ ಇಲ್ಲಿದೆ ನೋಡಿ..
'ರಾಮ್ ಲೀಲಾ' ಚಿತ್ರತಂಡ ಮಾತು ಕೊಟ್ಟಂತೆ ಪ್ರತೀ ವಾರ ಒಂದೊಂದು ಹಾಡನ್ನು ಬಿಡುಗಡೆ ಮಾಡುತ್ತಿದೆ. ಈ ಮೊದಲು ಪುನೀತ್ ಆವರು ಹಾಡಿದ ಹಾಡನ್ನು ಧ್ರುವ ಸರ್ಜಾ ಅವರ ಹುಟ್ಟುಹಬ್ಬದಂದು ಬಿಡುಗಡೆ ಮಾಡಿದ್ದು, 'ಸನ್ನಿ ಲಿಯೋನ್' ಹಾಡನ್ನು ಸಂಜನಾ ಅವರ ಹುಟ್ಟುಹಬ್ಬದಂದು ಉಪೇಂದ್ರ ಅವರು ತಮ್ಮ ನಿವಾಸದಲ್ಲಿ ಬಿಡುಗಡೆ ಮಾಡಿದ್ದರು. ಇದೀಗ ಚಿರು ಬರ್ತ್ ಡೇ ದಿನ ಶಿವಣ್ಣ ಅವರ ಸರದಿ.[ಟ್ರೈಲರ್ : ಕನ್ನಡದ 'ರಾಮ್ ಲೀಲಾ' ಪಕ್ಕಾ ಎಂಟರ್ ಟೇನರ್]
ಒಟ್ನಲ್ಲಿ ಸಾಂಗ್ ಹಾಗು ಟ್ರೈಲರ್ ಮೂಲಕ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸುತ್ತಿರುವ ಪಕ್ಕಾ ಫ್ಯಾಮಿಲಿ ಎಂರ್ಟಟೈನರ್ 'ರಾಮ್ ಲೀಲಾ' ಸಿನಿಮಾ ಸದ್ಯದಲ್ಲೇ ತೆರೆ ಮೇಲೆ ಅಪ್ಪಳಿಸಲಿದೆ.


Click it and Unblock the Notifications












