ಲಂಡನ್ ನಿಂದ ಬಂದ ಬಳಿಕ ಅಭಿಮಾನಿಗಳ ಜೊತೆ ಶಿವಣ್ಣ ಹುಟ್ಟುಹಬ್ಬ ಆಚರಣೆ

Recommended Video

ಲಂಡನ್ ನಲ್ಲಿ 57ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡ ಶಿವಣ್ಣ | ಫ್ಯಾನ್ಸ್ ಗೆ ಸಿಹಿ ಸುದ್ದಿ | FILMIBEAT KANNADA

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಲಂಡನ್ ನಲ್ಲಿದ್ದಾರೆ. ಇಂದು ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಪ್ರತೀವರ್ಷ ಅಭಿಮಾನಿಗಳ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಶಿವಣ್ಣ ಈ ಬಾರಿ ಚಿಕಿತ್ಸೆಯ ಪ್ರಯುಕ್ತ ಲಂಡನ್ ನಲ್ಲಿದ್ದಾರೆ.

ಸ್ಟಾರ್ ಹುಟ್ಟುಹಬ್ಬ ಅಂದ್ಮೇಲೆ ಅಪಾರ ಸಂಖ್ಯೆಯ ಅಭಿಮಾನಿಗಳು ಮನೆ ಮುಂದೆ ಜಮಾಯಿಸಿರುತ್ತಾರೆ. ನೆಚ್ಚಿನ ನಟನನ್ನು ನೋಡಿ ಶುಭ ಹಾರೈಸಲು ರಾತ್ರಿಯಿಂದನೆ ಮನೆ ಮುಂದೆ ಕ್ಯೂ ನಿಂತಿರುತ್ತಾರೆ. ರಾಜ್ಯದ ಮೂಲೆ ಮೂಲೆಯಿಂದ ಅಭಿಮಾನಿಗಳು ಬಂದಿರುತ್ತಾರೆ. ಈ ಬಾರಿ ಶಿವಣ್ಣ ಇದೆಲ್ಲವನ್ನು ಮಿಸ್ ಮಾಡಿಕೊಂಡಿದ್ದಾರೆ.

ಲಂಡನ್ ನಿಂದ ಫೇಸ್ ಬುಕ್ ಲೈವ್ ಮೂಲಕ ಮಾತನಾಡಿರುವ ಶಿವಣ್ಣ 'ಅಭಿಮಾನಿಗಳು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೀರೊ ನಾನು ಕೂಡ ಅಭಿಮಾನಿಗಳನ್ನು ಅಷ್ಟೆ ಮಿಸ್ ಮಾಡಿಕೊಳ್ಳುತ್ತಿದ್ದೀನಿ' ಎಂದು ಹೇಳಿದ್ದಾರೆ. ಮುಂದೆ ಓದಿ..

ಅಭಿಮಾನಿಗಳ ಜೊತೆ ಹುಟ್ಟುಹಬ್ಬ

ಅಭಿಮಾನಿಗಳ ಜೊತೆ ಹುಟ್ಟುಹಬ್ಬ

ಶಿವಣ್ಣ ಸದ್ಯ ಲಂಡನ್ ನಲ್ಲಿದ್ದಾರೆ. ಈ ವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದನ್ನು ಮಿಸ್ ಮಾಡಿಕೊಂಡ ಶಿವಣ್ಣ ಲಂಡನ್ ನಿಂದ ಬಂದ ಬಳಿಕ ಅಭಿಮಾನಿಗಳ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ದೂರದ ಲಂಡನ್ ನಲ್ಲಿಯೆ ಇದ್ದುಕೊಂಡು ಅಭಿಮಾನಿಗಳ ಶುಭ ಹಾರೈಕೆ ಸ್ವೀಕರಿಸಿದ ಶಿವಣ್ಣ, ವಾಪಾಸ್ ಆದ ಬಳಿಕ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ.

23ಕ್ಕೆ ಲಂಡನ್ ನಿಂದ ವಾಪಸ್

23ಕ್ಕೆ ಲಂಡನ್ ನಿಂದ ವಾಪಸ್

ಶಿವಣ್ಣ ಸದ್ಯ ಸರ್ಜರಿ ಮಾಡಿಸಿಕೊಂಡು ರೆಸ್ಟ್ ನಲ್ಲಿ ಇದ್ದಾರೆ. ಇನ್ನು ಹತ್ತುದಿನಗಳ ಕಾಲ ಲಂಡನ್ ನಲ್ಲಿ ವಿಶ್ರಾಂತಿ ಪಡೆಯಲಿರುವ ಶಿವಣ್ಣ ಇದೆ ತಿಂಗಳು 23ಕ್ಕೆ ವಾಪಸ್ ಬರುವುದಾಗಿ ಹೇಳಿದ್ದಾರೆ. ಲಂಡನ್ ನಿಂದ ಬಂದ ಬಳಿಕ ಎಲ್ಲರನ್ನು ಭೇಟಿಯಾಗುವೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಅಲ್ಲದೆ ನಿಮ್ಮ ಈ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಬೇಗ ಗುಣಮುಖರಾಗಲಿ ಎಂದು ಪೂಜೆ ಮಾಡಿದ್ದೀರಾ ಇದಕ್ಕೆ ಎಷ್ಟೇ ಧನ್ಯವಾದ ಹೇಳಿದ್ರು ಸಾಲದು ಎಂದು ಹೇಳಿದ್ದಾರೆ.

ಫೈಟ್ ದೃಶ್ಯಗಳನ್ನು ಮಾಡಬಹುದು

ಫೈಟ್ ದೃಶ್ಯಗಳನ್ನು ಮಾಡಬಹುದು

ಬಲ ಭುಜಕ್ಕೆ ಸರ್ಜರಿ ಆದ ಕಾರಣ ಶಿವಣ್ಣ ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳನ್ನು ಮಾಡುತ್ತಾರೆ ಅಥವಾ ಡ್ಯಾನ್ಸ್ ಮಾಡಬಹುದಾ ಎನ್ನುವ ಆತಂಕ ಅಭಿಮಾನಿಗಳಲ್ಲಿತ್ತು. ಆದ್ರೀಗ ಆ ಗೊಂದಲಕ್ಕೆ ಶಿವಣ್ಣ ತೆರೆ ಎಳೆದಿದ್ದಾರೆ. ಕಾರಣ ವೈದ್ಯರು ಇನ್ನು ಮುಂದೆ ಹೆಚ್ಚು ಆಕ್ಷನ್ ದೃಶ್ಯಗಳನ್ನು ಮಾಡಬಹುದು ಎಂದು ಹೇಳಿದ್ದಾರಂತೆ. ಹಾಗಾಗಿ ಸೆಂಚುರಿ ಸ್ಟಾರ್ ಸಂತಸದಿಂದ ಈ ಬಗ್ಗೆ ಅಭಿಮಾನಿಗಳ ಜೊತೆ ಹೇಳಿಕೊಂಡಿದ್ದಾರೆ.

ಪತ್ನಿ ಮತ್ತು ಪುನೀತ್ ಜೊತೆ ಹುಟ್ಟುಹಬ್ಬ

ಪತ್ನಿ ಮತ್ತು ಪುನೀತ್ ಜೊತೆ ಹುಟ್ಟುಹಬ್ಬ

ಶಿವಣ್ಣ ಪತ್ನಿ ಗೀತಾ, ಮಗಳು ನಿವೇದಿತಾ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕೈಗೆ ಬ್ಯಾಂಡೇಜ್ ಹಾಕಿಕೊಂಡರು, ಅದನ್ನು ಬಿಚ್ಚಿಟ್ಟು ಬಲಗೈಯಲ್ಲೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇನ್ನು ಶಿವಣ್ಣ ಹುಟ್ಟುಹಬ್ಬದ ಪ್ರಯುಕ್ತ ಸಾಕಷ್ಟು ಚಿತ್ರಗಳ ಫೋಸ್ಟರ್ಸ್ ರಿವೀಲ್ ಆಗಿವೆ. ಭಜರಂಗಿ-2, 'ಆಯೂಷ್ಮಾನ್ ಭವ' ಸೇರಿದಂತೆ ಫೋಸ್ಟರ್ ಮತ್ತು ಹೊಸ ಸಿನಿಮಾಗಳು ಅನೌನ್ಸ್ ಆಗಿವೆ.

More from Filmibeat

English summary
Kannada actor Shiva Rajkumar return from Londen on July 23. After he returns he will celebrate birthday with his fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X