ತಾಯಾಣೆಯಿಟ್ಟು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಶಿವಣ್ಣ
Recommended Video

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾ ಅಕ್ಟೋಬರ್ 18 ರಂದು ಬಿಡುಗಡೆಯಾಗುತ್ತಿದೆ. ಗಾಂಧಿನಗರದ ಪ್ರಮುಖ 3 ಚಿತ್ರಮಂದಿರಗಳು ಸೇರಿದಂತೆ 1000ಕ್ಕೂ ಅಧಿಕ ಥಿಯೇಟರ್ ನಲ್ಲಿ ಸಿನಿಮಾ ಬರ್ತಿದೆ.
ಸುದೀಪ್ ಮತ್ತು ಶಿವಣ್ಣ ಮೊದಲ ಸಲ ಒಟ್ಟಿಗೆ ಅಭಿನಯಿಸಿರುವುದು ಭಾರಿ ನಿರೀಕ್ಷೆ ಹುಟ್ಟಿಸಿದೆ. ಅದೇ ರೀತಿ ಒಂದು ರೀತಿಯ ಆತಂಕ ಕೂಡ ಇದೆ. ಯಾಕಂದ್ರೆ, ಇಬ್ಬರು ಸೂಪರ್ ಸ್ಟಾರ್ ಗಳು ಚಿತ್ರದಲ್ಲಿ ಕಾಣಿಸಿಕೊಂಡಿರುವುದರಿಂದ ಯಾರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ, ಶಿವಣ್ಣ ಅವರದ್ದು ಮೇಲಗೈ ಅಥವಾ ಸುದೀಪ್ ಮೆಲುಗೈ ಎಂಬ ವಾದಗಳು ಅಭಿಮಾನಿಗಳಲ್ಲಿ ಉಂಟಾದರೇ ಕಷ್ಟ.
ಸಾಮಾನ್ಯವಾಗಿ ಶಿವಣ್ಣ ಅವರ ಪಾತ್ರಕ್ಕೆ ವಿಲನ್ ಗಳು ಬೈಯ್ದರನೇ ಸಹಿಸಿಕೊಳ್ಳುವುದಿಲ್ಲ ಶಿವು ಫ್ಯಾನ್ಸ್. ಇನ್ನು ವಿಲನ್ ಸಿನಿಮಾದಲ್ಲಿ ಏನಾದರೂ ವ್ಯತ್ಯಾಸವಾದರೇ ದೊಡ್ಡ ಯುದ್ಧವೇ ಆಗಿಬಿಡಬಹುದು ಎಂಬ ಮಾತಿದೆ. ಇದು ಸ್ವತಃ ಸೆಂಚುರಿ ಸ್ಟಾರ್ ಗಮನಕ್ಕೂ ಬಂದಿದೆ. ಹಾಗಾಗಿ, ತಾಯಿ ಮೇಲೆ ಆಣೆಯಿಟ್ಟು ಖಡಕ್ ಎಚ್ಚರಿಕೆ ನೀಡಿದ್ದಾರೆ 'ಬಾಸ್'....ಮುಂದೆ ಓದಿ....

ಕೇವಲ ಸಿನಿಮಾ ದೃಷ್ಟಿಯಲ್ಲಿ ನೋಡಿ
''ಸಿನಿಮಾವನ್ನ ಕೇವಲ ಸಿನಿಮಾ ದೃಷ್ಟಿಯಲ್ಲಿ ಮಾತ್ರ ನೋಡಿ. ಅವನಾ ಅಥವಾ ಇವನಾ ಎಂದು ನೋಡೋದಕ್ಕೆ ಹೋಗಬೇಡಿ. ವಿಲನ್ ಆಗಿ ನೋಡಿ ನಿಜಕ್ಕೂ ಇಷ್ಟಪಡ್ತೀರ. ಯಾವ ಜಾಗದಲ್ಲಿ ಯಾರ್ ಸ್ಕೋಪ್ ತಗೋಬೇಕೋ ಅವರೇ ತಗೋಬೇಕು ಇದು ಸಿನಿಮಾ''

ಎಲ್ಲರ ಅಭಿಮಾನಿಗಳಿಗೂ ಹೇಳೋದು ಒಂದೇ
''ದಯವಿಟ್ಟು ಇದು ನನ್ನ ಮನವಿ. ಸಿನಿಮಾ ನೋಡುವ ಸುದೀಪ್ ಅಭಿಮಾನಿಗಳಾಗಲಿ ಶಿವರಾಜ್ ಕುಮಾರ್ ಅಭಿಮಾನಿಗಳಾಗಲಿ ಅಥವಾ ಸಿನಿಮಾ ನೋಡೋ ಪುನೀತ್ ಅಭಿಮಾನಿಗಳು ಅಥವಾ ದರ್ಶನ್ ಅಭಿಮಾನಿಗಳು ಎಲ್ಲರ ಅಭಿಮಾನಿಗಳಾಗಲಿ ಸಿನಿಮಾನಾ ಸಿನಿಮಾ ರೀತಿ ನೋಡಿ. ನಿಜವಾಗಲೂ ಎಂಜಾಯ್ ಮಾಡ್ತೀರಾ''

ಅದ್ಭುತವಾದ ಸನ್ನಿವೇಶಗಳಿವೆ
''ಪ್ರತಿಯೊಂದು ಸನ್ನಿವೇಶವೂ ಮೈಂಡ್ ಬ್ಲೋಯಿಂಗ್ ಆಗಿದೆ. ಆಕ್ಷನ್, ಎಮೋಷನ್ ದೃಶ್ಯಗಳು ಎಲ್ಲವೂ ಚೆನ್ನಾಗಿ ಬಂದಿದೆ. ಯಾರಿಗೂ ನಿರಾಸೆಯಂತೂ ಆಗಲ್ಲ. ಅವರು ಫ್ಯಾನ್ಸ್ ಇವರ ಫ್ಯಾನ್ಸ್ ಅನ್ನೋದು ಬಿಟ್ಟು ಸಿನಿಮಾ ತರ ನೋಡಿದ್ರೆ ಇಷ್ಟವಾಗುತ್ತೆ''

ತಾಯಾಣೆ ಥಿಯೇಟರ್ ಗೆ ಬರಲ್ಲ
''ಬೇರೆ ರೀತಿ ಗಲಾಟೆಗಳಂತೂ ಯಾವುದು ಮಾಡಬೇಡಿ. ಒಂದು ವೇಳೆ ಈ ರೀತಿ ಆಯ್ತು ಅಂದ್ರೆ ಮುಂದಿನ ಸಲ 'ತಾಯಾಣೆ' ನಾನು ಥಿಯೇಟರ್ ಗೆ ಬರಲ್ಲ. 'ನಾನು ತಾಯಾಣೆ ಇಟ್ರೆ' ಖಂಡಿತಾ ಹಾಗೆ ನಡೆದುಕೊಳ್ಳೋದು. ಅದು ಎಲ್ಲರಿಗೂ ಗೊತ್ತು. ಒಂದೇ ಒಂದು ಗಲಾಟೆ ಆದ್ರೂ ಮತ್ತೆ ನಾನು ಚಿತ್ರಮಂದಿರಕ್ಕೆ ಬರಲ್ಲ''

ಕಾಂಬಿನೇಷನ್ ನೋಡೋದು ಕಲಿಯಿರಿ
''ಬೇರೆ ಭಾಷೆಗಳಲ್ಲಿ ಒಂದು ಕಾಂಬಿನೇಷನ್ ಸಿನಿಮಾ ಅಂತ ಬಂದ್ರೆ ಎಷ್ಟು ಚೆನ್ನಾಗಿ ರಿಸೀವ್ ಮಾಡ್ತಾರೆ. ಅದೇ ತರ ನೀವು ನೋಡಿ. ಜಗಳ ಮಾಡ್ಕೋಬಾರದು. ನಾವು ಇಂಡಸ್ಟ್ರಿಯಲ್ಲಿ ಒಂದು. ಎಷ್ಟು ದಿನ ಹೀಗೆ ಇರ್ತೀರಾ. ಸೋ ಇದೆಲ್ಲಾ ಬೇಡ''


Click it and Unblock the Notifications











