'ದಾದಾಸಾಹೇಬ್ ಫಾಲ್ಕೆ' ಅಮಿತಾಬ್ ಬಚ್ಚನ್ ಭೇಟಿಯಾದ ಶಿವರಾಜ್ ಕುಮಾರ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ಭಜರಂಗಿ-2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಹೊಸ ಹೇರ್ ಸ್ಟೈಲ್ ಮೂಲಕ ಮಿಂಚುತ್ತಿರುವ ಶಿವಣ್ಣ ದಿಢೀರನೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಭೇಟಿಯಾಗಿದ್ದಾರೆ.
ಮೊನ್ನೆಮೊನ್ನೆಯಷ್ಟೆ ಸಿನಿಮಾ ರಂಗದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮುಗಿಗೇರಿಸಿಕೊಂಡಿರುವ ಅಮಿತಾಭ್ ಬಚ್ಚನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಶಿವಣ್ಣ ದಿಢೀರನೆ ಅಮಿತಾಭ್ ಭೇಟಿ ಮಾಡಿರುವುದು ಅಚ್ಚರಿ ಮೂಡಿಸಿದೆ. ಬಿಗ್ ಬಿ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿವಣ್ಣ ಜೊತೆ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಕೂಡ ಕಾಣಿಸಿಕೊಂಡಿದ್ದಾರೆ.
ಶಿವಣ್ಣ ಹೊಸ ಹೇರ್ ಸ್ಟೈಲ್ ಫೋಟೋಗಳು ವೈರಲ್ ಆಗಿವೆ. ನ್ಯೂ ಲುಕ್ ಜೊತೆಗೆ ಹ್ಯಾಟ್ರಿಕ್ ಹೀರೋ ಎಲ್ಲಿಗೋ ಪಯಣ ಬೆಳೆಸಿದ್ದರು. ಆದ್ರೆ ಯಾವ ಕಡೆ ಪಯಣ ಎನ್ನುವುದು ಗೊತ್ತಿರಲಿಲ್ಲ. ಆದ್ರೆ ಶಿವಣ್ಣ ಪಯಣ ಬೆಳೆಸಿದ್ದು ಮುಂಬೈಗೆ. ಕಾರಣ ಅಮಿತಾಭ್ ಜೊತೆ ಕಲ್ಯಾಣ್ ಜ್ಯುವೆಲ್ಸ್ ಜಾಹಿರಾತು ಚಿತ್ರೀಕರಣಕ್ಕೊಂದು ತೆರಳಿದ್ದಾರೆ.

ಜಾಹಿರಾತು ಚಿತ್ರೀಕರಣದ ವೇಳೆ ಅಮಿತಾಭ್ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ನಿರ್ಮಾಪಕ ಕೆ.ಪಿ ಶ್ರೀಕಾಂತ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.ಫೋಟೋ ಜೊತೆಗೆ "ಅದ್ಭುತವಾದ ಶನಿವಾರ, ನಮ್ಮ ಹ್ಯಾಟ್ರಿಕ್ ಹೀರೋ ಶಿವಣ್ಣ ಜೊತೆ ಗ್ರೇಟ್ ಲೆಜೆಂಡ್ ಅಮಿತಾಭ್ ಬಚ್ಚನ್ ಸರ್ ಅವರನ್ನು ಭೇಟಿಯಾಗಲು ಸಾಧ್ಯವಾಯಿತು" ಎಂದು ಬರೆದು ಕೊಂಡಿದ್ದಾರೆ
ಅಮಿತಾಭ್ ಜೊತೆ ಜಾಹಿರಾತಿನಲ್ಲಿ ಶಿವಣ್ಣ ಅನೇಕ ವರ್ಷಗಳಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿಯೂ ಜಾಹಿರಾತು ಚಿತ್ರೀಕರಣದಲ್ಲಿ ಅಮಿತಾಭ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಅಮಿತಾಭ್ ಬಚ್ಚನ್ ಸದ್ಯ ಏಳೆಂಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳ ಜೊತೆಗೆ ಕೌನ್ ಬನೇಗ ಕರೋಡ್ ಪತಿ ಮತ್ತು ಜಾಹಿರಾತಿನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











