'ಭರತ ಚಕ್ರವರ್ತಿ' ಶಿವಣ್ಣನ ಕಟ್ ಔಟ್ ಕ್ರೇಜ್ ನೋಡಿ
ಸ್ಟಾರ್ ನಟರ ಸಿನಿಮಾಗಳಿಗೆ ಮೊದಲ ದಿನ ದೊಡ್ಡ ಕ್ರೇಜ್ ಇರುತ್ತದೆ. ಅದರಲ್ಲಿಯೂ ನಟ ಶಿವರಾಜ್ ಕುಮಾರ್ ಚಿತ್ರಗಳನ್ನು ಫಸ್ಟ್ ಡೇ ನೋಡುವುದು ಅಂದರೆ ಹಬ್ಬದ ನೋಡಿದ ಹಾಗೆ.
ಶಿವಣ್ಣನ ಕಟ್ ಔಟ್ ಕ್ರೇಜ್ ನಿನ್ನೆ ಮೊನ್ನೆಯದಲ್ಲ ಅಂದಿನಿಂದ ಇಂದಿನವರೆಗೆ ಅವರ ಚಿತ್ರಗಳನ್ನು ಅಭಿಮಾನಿಗಳು ಅದ್ಧೂರಿ ಯಾಗಿ ಸ್ವಾಗತ ಮಾಡಿಕೊಂಡು ಬರುತ್ತಿದ್ದಾರೆ. ಅದಕ್ಕೆ ಸದ್ಯದ ತಾಜಾ ಉದಾಹಾರಣೆ ಅಂದರೆ 'ದಿ ವಿಲನ್' ಚಿತ್ರ.
'ದಿ ವಿಲನ್' ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗುವುದಕ್ಕು ಮೊದಲೇ ಚಿತ್ರಮಂದಿರಗಳಲ್ಲಿ ಅದರ ಪೋಸ್ಟರ್ ಗಳಿಗೆ ಹಾಲಿನ ಅಭಿಷೇಕ ನಡೆಯುತ್ತಿದೆ. ಅಂದಹಾಗೆ, ಇಂತಹ ಸಂಧರ್ಭದಲ್ಲಿ ಶಿವಣ್ಣನ ಅಭಿಮಾನಿಗಳು ಅವರ ಹಳೆಯ ಸಿನಿಮಾಗಳ ಕೆಲ ಕಟ್ ಔಟ್ ಗಳನ್ನ ಸಾಮಾಜಿಕ ಜಾಲತಾಲಗಳಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ......
ಚಿತ್ರಕೃಪೆ : ಶಿವಣ್ಣ ಅಭಿಮಾನಿಗಳು

'ಓಂ' ಚಿತ್ರದ ಕಟ್ ಔಟ್
ಉಪೇಂದ್ರ ನಿರ್ದೇಶನದ 'ಓಂ' ಇಡೀ ಭಾರತ ಚಿತ್ರರಂಗದ ಇತಿಹಾಸದಲ್ಲಿ ಬಂದ ಸಾರ್ವಕಾಲಿಕ ದಾಖಲೆಯ ಸಿನಿಮಾ. ಶಿವಣ್ಣನ ಈ ಸಿನಿಮಾ ಈಗ ರಿಲೀಸ್ ಆದರೂ ಚಿತ್ರಮಂದಿರವನ್ನ ತುಂಬಿಸುವ ತಾಕತ್ತು ಇದೆ. 'ಓಂ' ಚಿತ್ರ ಈಗಾಗಲೇ 550ಕ್ಕೂ ಹೆಚ್ಚು ಬಾರಿ ಮರು ಬಿಡುಗಡೆಯಾಗಿದೆ. ಆ ರೀತಿ ಒಮ್ಮೆ ರೀ ರಿಲೀಸ್ ಆದ ಸಂದರ್ಭದಲ್ಲಿ ಚಿತ್ರಮಂದಿರದ ಮುಂದೆ ಹಾಕಿದ್ದ ಕಟ್ ಔಟ್ ಚಿತ್ರ ಇಲ್ಲಿದೆ.

'ಸಿಂಹದ ಮರಿ' ಕಟ್ ಔಟ್
ನಟ ಶಿವರಾಜ್ ಕುಮಾರ್ ಅವರ ಸೂಪರ್ ಹಿಟ್ ಚಿತ್ರಗಳಲ್ಲಿ 'ಸಿಂಹದ ಮರಿ' ಕೂಡ ಒಂದಾಗಿತ್ತು. ಈ ಸಿನಿಮಾ 1997ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ರಿಲೀಸ್ ಆದ ಸಮಯದಲ್ಲಿ ಆದರ್ಶ ಚಿತ್ರಮಂದಿರದಲ್ಲಿ ಇದ್ದ ಸಂಭ್ರಮಾಚರಣೆಯ ಫೋಟೋಗಳನ್ನು ಫ್ಯಾನ್ಸ್ ಇದೀಗ ಹಂಚಿಕೊಂಡಿದ್ದಾರೆ. ಆದರೆ, ಈಗ ಈ ಚಿತ್ರಮಂದಿರ ನೆಲಸಮ ಆಗಿದೆ.

AK 47 ಕಟ್ ಔಟ್
'AK 47' ಶಿವಣ್ಣನ ಅಭಿಮಾನಿಗಳ ಮೆಚ್ಚಿನ ಚಿತ್ರಗಳಲ್ಲಿ 'AK 47' ಕೂಡ ಒಂದು. ಈ ಚಿತ್ರ ರಿಲೀಸ್ ಆಗಿದ್ದು, 1999ರಲ್ಲಿ. ಆ ಸಂದರ್ಭದಲ್ಲಿ ಈ ಚಿತ್ರ ದೊಡ್ಡ ಸೌಂಡ್ ಮಾಡಿದ್ದು, ಚಿತ್ರಮಂದಿರಗಳಲ್ಲಿ ಶಿವಣ್ಣನ ದೊಡ್ಡ ದೊಡ್ಡ ಕಟ್ ಔಟ್ ಗಳು ರಾರಾಜಿಸಿದವು. ಓಂ ಪ್ರಕಾಶ್ ರಾವ್ ಚಿತ್ರವನ್ನ ನಿರ್ದೇಶನ ಮಾಡಿದ್ದರು.

'ಮದುವೆ ಆಗೋಣ ಬಾ' ಚಿತ್ರ
'ಮದುವೆ ಆಗೋಣ ಬಾ' ಶಿವರಾಜ್ ಕುಮಾರ್ ನಟನೆಯಲ್ಲಿ ಬಂದ ಫ್ಯಾಮಿಲಿ ಸಿನಿಮಾವಾಗಿತ್ತು. ಬೆಂಗಳೂರಿನ ಗಾಂಧಿನಗರದ ಮೇನಕಾ ಚಿತ್ರಮಂದಿರದಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರಮಂದಿರ ಬಣ್ಣದ ದೀಪದಿಂದ ಅಲಂಕಾರವಾಗಿತ್ತು. 2001ರ ಜನವರಿ 1ರಂದು ಹೊಸ ವರ್ಷದ ವಿಶೇಷವಾಗಿ ಈ ಸಿನಿಮಾ ರಿಲೀಸ್ ಆಗಿತ್ತು.

'ಜೋಗಿ' ಮಹಿಮೆ
ಕನ್ನಡ ಚಿತ್ರರಂಗದಲ್ಲಿ 'ಜೋಗಿ' ಸೃಷ್ಟಿಸಿದ ಸಂಚಲನದ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಈ ಚಿತ್ರ ಬಿಡುಗಡೆಯಾದ ಸಮಯದಲ್ಲಿ ಅಭಿಮಾನಿಗಳ ಆಚರಣೆ ಮುಗಿಲು ಮುಟ್ಟಿತ್ತು. ಯಾವ ಚಿತ್ರಮಂದಿರ ನೋಡಿದ್ದರೂ ಜೋಗಿಯ ದೊಡ್ಡ ದೊಡ್ಡ ಕಟ್ ಔಟ್ ಗಳು ರಾರಾಜಿಸುತ್ತಿದ್ದವು. ಈ ಚಿತ್ರದಿಂದ ಪ್ರೇಮ್ ಹ್ಯಾಟ್ರಿಕ್ ಬಾರಿಸಿದ್ದರು.

ಶುರುವಾಗಿದೆ 'ದಿ ವಿಲನ್' ಕ್ರೇಜ್
'ದಿ ವಿಲನ್' ಸಿನಿಮಾದ ಬಿಡುಗಡೆಗೆ ಇನ್ನೂ ಎರಡು ವಾರಗಳು ಬಾಕಿ ಇವೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಸಿನಿಮಾದ ಕ್ರೇಜ್ ಶುರುವಾಗಿದೆ. ಶಿವಣ್ಣನ ಪೋಸ್ಟರ್ ಗೆ ಹಾಲಿನ ಅಭಿಷೇಕ, ಹೂವಿನ ಹಾರ ಹಾಕಿ ಚಿತ್ರವನ್ನು ಫ್ಯಾನ್ಸ್ ಸ್ವಾಗತ ಮಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











