ಲಂಡನ್ ನಿಂದ ಬೆಂಗಳೂರಿಗೆ ಮರಳಿದ ಶಿವರಾಜ್ ಕುಮಾರ್
ಚಿಕಿತ್ಸೆಗಾಗಿ ಲಂಡನ್ ಗೆ ತೆರಳಿದ್ದ ನಟ ಶಿವರಾಜ್ ಕುಮಾರ್ ನಿನ್ನೆ (ಮಂಗಳವಾರ) ಬೆಂಗಳೂರಿಗೆ ಮರಳಿ ಬಂದಿದ್ದಾರೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ ಶಿವಣ್ಣನನ್ನು ಅದ್ದೂರಿಯಾಗಿ ಅವರ ಅಭಿಮಾನಿಗಳು ಸ್ವಾಗತ ಮಾಡಿದ್ದಾರೆ.
ಭುಜದ ನೋವಿನಿಂದ ಬಳಲುತ್ತಿದ್ದ ಶಿವರಾಜ್ ಕುಮಾರ್ ಚಿಕಿತ್ಸೆ ಪಡೆಯಲು ಲಂಡನ್ ಗೆ ತೆರಳಿದ್ದರು. ಜುಲೈ 10 ರಂದು ಅವರಿಗೆ ಯಶಸ್ವಿಯಾಗಿ ಸರ್ಜರಿ ಮಾಡಲಾಗಿತ್ತು. ಸರ್ಜರಿಯ ಬಳಿಕ ಯಾವುದೇ ತೊಂದರೆ ಇಲ್ಲ ವೈದ್ಯರು ತಿಳಿಸಿದ್ದರು. ಡಾಕ್ಟರ್ ಆಂಡ್ರ್ಯೂ ವ್ಯಾಲೇಸ್ ಶಿವಣ್ಣನಿಗೆ ಚಿಕಿತ್ಸೆ ನೀಡಿದ್ದರು.

ಲಂಡನ್ ಗೆ ಹೋಗಿದ್ದ ಕಾರಣ ಈ ವರ್ಷದ ಹುಟ್ಟುಹಬ್ಬ ಕೂಡ ಅಲ್ಲಿಯೇ ಶಿವಣ್ಣ ಆಚರಣೆ ಮಾಡಿದ್ದರು. ಶಿವರಾಜ್ ಕುಮಾರ್ ಆರೋಗ್ಯ ಸದ್ಯ ಸುಧಾರಿಸಿದ್ದು, ಆದಷ್ಟು ಬೇಗ ಡ್ಯಾನ್ಸ್ ಫೈಟ್ ಮಾಡಬಹುದಂತೆ. ಕೆಲ ದಿನಗಳ ಬಳಿಕ ಎಂದಿನಂತೆ ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್ ಭಾಗಿಯಾಗಲಿದ್ದಾರೆ.

ಬೆಂಗಳೂರಿಗೆ ಬಂದಿಳಿದ ಶಿವರಾಜ್ ಕುಮಾರ್ ರನ್ನು ಅವರ ಗೆಳೆಯ, ನಿರ್ದೇಶಕ ರಘುರಾಮ್ ಹಾಗೂ ನಿರ್ಮಾಪಕ ಶ್ರೀಕಾಂತ್ ಸ್ವಾಗತಿಸಿ, ಅವರ ಜೊತೆಗೊಂದು ಫೋಟೋ ತೆಗೆದುಕೊಂಡಿದ್ದಾರೆ.


Click it and Unblock the Notifications











