For Quick Alerts
  ALLOW NOTIFICATIONS  
  For Daily Alerts

  ಮತ್ತೆ ಖಾಕಿ ಧರಿಸಲು ಸಜ್ಜಾದ ಹ್ಯಾಟ್ರಿಕ್ ಹೀರೋ: ಶಿವಣ್ಣನಿಗೆ ನಾಯಕಿಯಾಗ್ತಾರಾ 'ರಾಜಕುಮಾರ' ಬೆಡಗಿ

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ 'ಭಜರಂಗಿ-2' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಶಿವಣ್ಣ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಮೂಲಗಳ ಪ್ರಕಾರ ಈಗಾಗಲೆ ಶಿವಣ್ಣ ಮುಂದಿನ ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸ ಶುರುವಾಗಿದೆಯಂತೆ.

  ಕಪ್ ಒಳಗೆ ಸ್ಪೂನ್ ಹಾಕುವ ಶಿವಣ್ಣನ ಸ್ಟೈಲ್ ಗೆ ಫಿದಾ ಆದ ನೆಟ್ಟಿಗರು.!ಕಪ್ ಒಳಗೆ ಸ್ಪೂನ್ ಹಾಕುವ ಶಿವಣ್ಣನ ಸ್ಟೈಲ್ ಗೆ ಫಿದಾ ಆದ ನೆಟ್ಟಿಗರು.!

  ಹ್ಯಾಟ್ರಿಕ್ ಹೀರೋ ಮುಂದಿನ ಸಿನಿಮಾಗೆ ತಮಿಳಿನ ಖ್ಯಾತ ನಿರ್ದೇಶಕ ರವಿ ಅರಸು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೂಲಕ ರವಿ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಇನ್ನು ಹೆಸರಿಡದ ಈ ಚಿತ್ರಕ್ಕೆ ಭಾರತೀಯ ಚಿತ್ರರಂಗದ ದೊಡ್ಡ ಪ್ರೊಡಕ್ಷನ್ ಕಂಪನಿಯಾದ ಸತ್ಯಜ್ಯೋತಿ ಫಿಲ್ಸ್ ಅವರು ಬಂಡವಾಳ ಹೂಡುತ್ತಿದ್ದಾರೆ.

  ಮತ್ತೆ ಖಾಕಿ ತೊಟ್ಟ ಶಿವಣ್ಣ

  ಮತ್ತೆ ಖಾಕಿ ತೊಟ್ಟ ಶಿವಣ್ಣ

  ಅಂದ್ಹಾಗೆ ಶಿವಣ್ಣ ಈ ಚಿತ್ರದಲ್ಲಿ ಖಾಕಿ ತೊಟ್ಟು ಖದರ್ ತೋರಿಸಲಿದ್ದಾರೆ. ಇತ್ತೀಚಿಗಷ್ಟೆ ಖಾಕಿ ಧರಿಸಿ ರುಸ್ತುಂ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಶಿವಣ್ಣ ಈಗ ಮತ್ತೆ ಪೊಲೀಸ್ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ವಿಶೇಷ ಅಂದರೆ ಶಿವಣ್ಣನಿಗೆ ನಾಯಕಿಯಾಗಿ ರಾಜಕುಮಾರ ಚಿತ್ರದಲ್ಲಿ ಮಿಂಚಿದ್ದ ನಟಿ ಪ್ರಿಯಾ ಆನಂದ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

  ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಶಿವರಾಜ್ ಕುಮಾರ್ ಪತ್ನಿ ಗೀತಾತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಶಿವರಾಜ್ ಕುಮಾರ್ ಪತ್ನಿ ಗೀತಾ

  ರಾಜಕುಮಾರ ಪ್ರಿಯಾ ಮೊದಲ ಕನ್ನಡ ಸಿನಿಮಾ

  ರಾಜಕುಮಾರ ಪ್ರಿಯಾ ಮೊದಲ ಕನ್ನಡ ಸಿನಿಮಾ

  ಚಿತ್ರತಂಡ ಈಗಾಗಲೆ ಪ್ರಿಯಾ ಜೊತೆ ಮಾತುಕತೆ ನಡೆಸಿದ್ದಾರಂತೆ. ಅಲ್ಲದೆ ಪ್ರಿಯಾ ಕಡೆಯಿಂದ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆಯಂತೆ. ಆದರೆ ಚಿತ್ರತಂಡ ಅಧಿಕೃತವಾಗಿ ಬಹಿರಂಗ ಪಡಿಸುವುದೊಂದೇ ಬಾಕಿ ಇದೆ. ರಾಜಕುಮಾರ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಪ್ರಿಯಾ ಮೊದಲ ಸಿನಿಮಾದಲ್ಲೆ ದೊಡ್ಡ ಮಟ್ಟದ ಸಕ್ಸಸ್ ಕಂಡುಕೊಂಡರು.

  ಆರೆಂಜ್ ನಲ್ಲಿ ಮಿಂಚಿದ್ದ ಪ್ರಿಯಾ

  ಆರೆಂಜ್ ನಲ್ಲಿ ಮಿಂಚಿದ್ದ ಪ್ರಿಯಾ

  'ರಾಜಕುಮಾರ' ನಂತರ ಪ್ರಿಯಾ ಆನಂದ್ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್ ಚಿತ್ರದ ಮೂಲಕ ಎರಡನೆ ಬಾರಿಗೆ ಕನ್ನಡ ಚಿತ್ರಪ್ರಿಯರ ಮುಂದೆ ಬಂದಿದ್ದರು. ಈಗ ಶಿವಣ್ಣನಿಗೆ ನಾಯಕಿಯಾಗುವ ಮೂಲಕ ಮೂರನೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ''ಹ್ಯಾಟ್ರಿಕ್ ಹೀರೋ ಒಬ್ರೆ ಅದು ಶಿವರಾಜ್ ಕುಮಾರ್''- ದರ್ಶನ್''ಹ್ಯಾಟ್ರಿಕ್ ಹೀರೋ ಒಬ್ರೆ ಅದು ಶಿವರಾಜ್ ಕುಮಾರ್''- ದರ್ಶನ್

  ಚರಣ್ ರಾಜ್ ಸಂಗೀತ, ಚಂದ್ರಮೌಳಿ ಸಂಭಾಷಣೆ

  ಚರಣ್ ರಾಜ್ ಸಂಗೀತ, ಚಂದ್ರಮೌಳಿ ಸಂಭಾಷಣೆ

  ಶಿವಣ್ಣ ಮತ್ತು ರವಿ ಅರಸು ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರಂತೆ. ಇನ್ನು ಕೆಜಿಎಫ್ ಮತ್ತು ರಾಬರ್ಟ್ ಚಿತ್ರಕ್ಕೆ ಸಂಭಾಷಣೆ ಬರೆದಿರುವ ಚಂದ್ರಮೌಳಿ, ಶಿವಣ್ಣ ಸಿನಿಮಾಗೂ ಸಂಭಾಷಣೆ ಬರೆಯುತ್ತಿದ್ದಾರಂತೆ. ಇನ್ನು ಉಳಿದ ಕಲಾವಿದರು ಮತ್ತು ತಂತ್ರಜ್ಞರ ಹುಡುಕಾಟದಲ್ಲಿ ಚಿತ್ರತಂಡ ನಿರತವಾಗಿದೆ.

  English summary
  Kannada actor Shivaraj Kumar to work with Tamil director Ravi Arasu. Actress Priya Anand will playing lead heroine in this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X