ಸರ್ಜರಿ ಬಳಿಕ ಇಂದು ತವರಿಗೆ ಶಿವಣ್ಣ : ಹ್ಯಾಟ್ರಿಕ್ ಹೀರೋ ಸ್ವಾಗತಕ್ಕೆ ಅಭಿಮಾನಿಗಳು ಸಜ್ಜು
Recommended Video
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಲ ಭುಜದ ಸರ್ಜರಿ ಮಾಡಿಸಿಕೊಂಡಿದ್ದಾರೆ. ಜುಲೈ 10ರಂದು ಲಂಡನ್ ನಲ್ಲಿ ಸರ್ಜರಿಗೆ ಒಳಗಾಗಿದ್ದ ಹ್ಯಾಟ್ರಿಕ್ ಹೀರೋ ಎರಡು ವಾರಗಳ ಕಾಲ ಲಂಡನ್ ನಲ್ಲಿ ರೆಸ್ಟ್ ನಲ್ಲಿದ್ದರು. ಈಗ ವಿಶ್ರಾಂತಿ ಬಳಿಕ ಸೆಂಚುರಿ ಸ್ಟಾರ್ ಇಂದು ತವರಿಗೆ ಆಗಮಿಸುತ್ತಿದ್ದಾರೆ.
ಇಂದು ಸಂಜೆ 6ಗಂಟೆ ಸುಮಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಸರ್ಜರಿ ಬಳಕ ಬೆಂಗಳೂರಿಗೆ ವಾಪಾಸ್ ಆಗುತ್ತಿರುವ ಶಿವಣ್ಣ ಅವರನ್ನು ಸ್ವಾಗತಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಸರ್ಜರಿ ಬಳಿಕ ಮೊದಲ ಬಾರಿಗೆ ಶಿವರಾಜ್ ಕುಮಾರ್ ಅವರನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿರುವ ಶಿವಣ್ಣ ಆ ಮೂಲಕವೆ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದರು. ಲಂಡನ್ ನ ಎಲ್ಲಾ ಅಪ್ ಡೇಟ್ ಗಳನ್ನು ನೀಡುತ್ತಿದ್ದರು.

ಸದ್ಯ ಚೇತರಿಸಿಕೊಂಡಿರುವ ಶಿವಣ್ಣ ಇಂದು ಬೆಂಗಳೂರಿಗೆ ಬರುತ್ತಿದ್ದಾರೆ. ಇನ್ನು ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದು ಆ ನಂತರ ಸಿನಿಮಾ ಚಿತ್ರೀಕರಣಗಳಲ್ಲಿ ಭಾಗಿಯಾಗಲಿದ್ದಾರೆ. ಸರ್ಜರಿಗೂ ಬಳಿಕ ಶಿವಣ್ಣ ಭಜರಂಗಿ-2 ಚಿತ್ರೀಕರಣದಲ್ಲಿ ನಿರತರಾಗಿದ್ದರು. ಹಾಗಾಗಿ ಒಂದಿಷ್ಟು ದಿನಗಳ ರೆಸ್ಟ್ ನ ಬಳಿಕ ಭಜರಂಗಿ-2 ಚಿತ್ರೀಕರಣದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ಇನ್ನು ಶಿವಣ್ಣ ಬೆಂಗಳೂರಿಗೆ ವಾಪಾಸ್ ಆದ ನಂತರ ಅಭಿಮಾನಿಗಳನ್ನು ಭೇಟಿಯಾಗುವುದಾಗಿ ಹೇಳಿದ್ದರು. ಶಿವಣ್ಣನ ಹುಟ್ಟುಹಬ್ಬವನ್ನು ಮಿಸ್ ಮಾಡಿಕೊಂಡ ಅಭಿಮಾನಿಗಳಿಗಾಗಿ ದರ್ಶನ ನೀಡುವುದಾಗಿ ಸೆಂಚುರಿ ಸ್ಟಾರ್ ಹೇಳಿದ್ದಾರೆ. ಸದ್ಯ ತವರಿಗೆ ಮರಳುತ್ತಿರುವ ಶಿವಣ್ಣನನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.


Click it and Unblock the Notifications











