ಶಿವಣ್ಣ - ಯೋಗರಾಜ್ ಭಟ್ ಜೋಡಿಯ ಚಿತ್ರಕ್ಕೆ ಅಣ್ಣಾವ್ರ ಟೈಟಲ್
ನಟ ಶಿವರಾಜ್ ಕುಮಾರ್ ಹಾಗೂ ಯೋಗರಾಜ್ ಭಟ್ ಜೋಡಿ ಸೇರಿ ಒಂದು ಹೊಸ ಸಿನಿಮಾ ಮಾಡುತ್ತಿದೆ. ಸದ್ಯ 'ಪಂಚತಂತ್ರ' ಸಿನಿಮಾದಲ್ಲಿ ತೊಡಗಿರುವ ಯೋಗರಾಜ್ ಭಟ್ ಅದರ ನಂತರ ಶಿವಣ್ಣನ ಜೊತೆಗೆ ಸೇರಲಿದ್ದಾರೆ.
ಇದೀಗ ಈ ಜೋಡಿಯ ಸಿನಿಮಾ ಟೈಟಲ್ ಬಗ್ಗೆ ಚರ್ಚೆ ಶುರುವಾಗಿದೆ. ಈ ಸಿನಿಮಾಗೆ ರಾಜ್ ಕುಮಾರ್ ಅವರ ಕನೆಕ್ಷನ್ ಇರುವ ಹೆಸರು ಇಡುವ ಆಲೋಚನೆ ನಡೆಯುತ್ತಿದೆ. 'ಕುಲದಲ್ಲಿ ಕೀಳ್ಯಾವುದೊ' ಎಂಬ ಟೈಟಲ್ ಸಿನಿಮಾಗೆ ಫಿಕ್ಸ್ ಆಗುವ ಸಾಧ್ಯತೆ ಇದೆ.
'ಸತ್ಯ ಹರಿಶ್ಚಂದ್ರ' ಸಿನಿಮಾದ 'ಕುಲದಲ್ಲಿ ಕೀಳ್ಯಾವುದೊ' ಹಾಡು ದೊಡ್ಡ ಜನಪ್ರಿಯತೆ ಗಳಿಸಿದೆ. ಅದಕ್ಕಿಂತ ಹೆಚ್ಚಾಗಿ ಈ ಹಾಡು ಕೇಳದವರೇ ಇಲ್ಲ ಎಂದೂ ಹೇಳಬಹುದು. ಈ ಹಾಡಿನ ಸಾಹಿತ್ಯವೇ ಈಗ ಸಿನಿಮಾ ಟೈಟಲ್ ಆಗಿದೆ.

ಇದು ಶಿವರಾಜ್ ಕುಮಾರ್ ಹಾಗೂ ಯೋಗರಾಜ್ ಭಟ್ ಜೋಡಿಯ ಮೊದಲ ಸಿನಿಮಾವಾಗಿದೆ. ಈ ಹಿಂದೆ ಶಿವಣ್ಣನ ಹುಟ್ಟುಹಬ್ಬಕ್ಕೆ ಸಿನಿಮಾದ ಪೋಸ್ಟರ್ ಗಳು ಬಿಡುಗಡೆಯಾಗಿದ್ದು, ಸದ್ಯದಲ್ಲಿಯೇ ಸಿನಿಮಾದ ಟೈಟಲ್ ಲಾಂಚ್ ಆಗಲಿದೆ.
More from Filmibeat
English summary
shivaraj Kumar and yogaraj bhat combination new movie titeld as kuladalli keelyavudo.
shivaraj kumar yogaraj bhat sandalwood kannada movie ಶಿವರಾಜ್ ಕುಮಾರ್ ಯೋಗರಾಜ್ ಭಟ್ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ


Click it and Unblock the Notifications











