»   » ಹೊಸ ವರ್ಷಕ್ಕೆ ಹೊಸ ಚಿತ್ರವನ್ನ ಘೋಷಿಸಿದ ಶಿವಣ್ಣ!

ಹೊಸ ವರ್ಷಕ್ಕೆ ಹೊಸ ಚಿತ್ರವನ್ನ ಘೋಷಿಸಿದ ಶಿವಣ್ಣ!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ವರ್ಷದ 365 ದಿನವೂ ಬ್ಯುಸಿಯಾಗಿರುವ ನಟ ಶಿವರಾಜ್ ಕುಮಾರ್ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ, ವರ್ಷವೀಡಿ ಚಿತ್ರೀಕರಣ ಮಾಡುವಷ್ಟು ಸಾಲು ಸಾಲು ಸಿನಿಮಾಗಳು ಹ್ಯಾಟ್ರಿಕ್ ಹೀರೋ ಕೈಯಲ್ಲಿದೆ. ಆದರೂ, ಒಂದರ ಹಿಂದೆ ಮತ್ತೊಂದರಂತೆ ಹೊಸ ಹೊಸ ಪ್ರಾಜೆಕ್ಟ್ ಗಳಿಗೆ ಕರುನಾಡ ಚಕ್ರವರ್ತಿ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ.

ಈಗ ಲೇಟೇಸ್ಟ್ ಅಂದ್ರೆ ಸೆಂಚುರಿ ಸ್ಟಾರ್ ಶಿವಣ್ಣ ಮತ್ತೊಂದು ಹೊಸ ಚಿತ್ರವನ್ನ ಅನೌನ್ಸ್ ಮಾಡಿದ್ದಾರೆ. 'ಶ್ರೀಕಂಠ' ಚಿತ್ರದ ಬಿಡುಗಡೆಯ ತಯಾರಿಯಲ್ಲಿರುವ ಹ್ಯಾಟ್ರಿಕ್ ಹೀರೋ ಈ ವಿಚಾರವನ್ನ ಖುದ್ದು ತಾವೇ ಘೋಷಣೆ ಮಾಡಿದ್ದು, ಈ ಚಿತ್ರ ವಿಶೇಷವಾಗಿರಲಿದೆಯಂತೆ.[ಸಿಎಂ 'ಶ್ರೀಕಂಠ' ಜನವರಿ 6 ಕ್ಕೆ ತೆರೆಮೇಲೆ]

'ಶ್ರೀಕಂಠ'ನ ನಂತರ ಮತ್ತೊಂದು 'ಶ್ರೀಕಂಠ'

'ಶ್ರೀಕಂಠ' ಚಿತ್ರದ ನಂತರ ಅದೇ ತರಹದ ಮತ್ತೊಂದು ಚಿತ್ರವನ್ನ ಶುರು ಮಾಡಲಿದ್ದಾರಂತೆ ಶಿವರಾಜ್ ಕುಮಾರ್.[ವಿಡಿಯೋ: ಮೈನವಿರೇಳಿಸುವ ಸಾಹಸ ದೃಶ್ಯದಲ್ಲಿ ಶಿವರಾಜ್ ಕುಮಾರ್ ]

ಮತ್ತೆ 'ಕಾಮನ್ ಮ್ಯಾನ್' ಅವತಾರ

'ಶ್ರೀಕಂಠ' ಚಿತ್ರದಲ್ಲಿ ಕಾಮನ್ ಮ್ಯಾನ್ ಆಗಿ ಕಾಣಿಸಿಕೊಂಡಿರುವ ಹ್ಯಾಟ್ರಿಕ್ ಹೀರೋ, ಮುಂದಿನ ಚಿತ್ರದಲ್ಲೂ 'ಕಾಮನ್ ಮ್ಯಾನ್' ಪಾತ್ರವನ್ನ ಮಾಡಲಿದ್ದಾರಂತೆ.['ಶ್ರೀಕಂಠ'ನ ಆಡಿಯೋ ಬಿಡುಗಡೆಗೆ ಸಿದ್ದವಾಯ್ತು ವೇದಿಕೆ.!]

ಹೊಸ ಚಿತ್ರ ಘೋಷಣೆ ಮಾಡಿದ ಶಿವಣ್ಣ

'ಶ್ರೀಕಂಠ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಶಿವಣ್ಣ ತಮ್ಮ ಹೊಸ ಚಿತ್ರದ ಬಗ್ಗೆ ಬಹಿರಂಗಪಡಿಸಿದರು. ಕೇವಲ 20 ನಿಮಿಷದಲ್ಲಿ ಕಥೆ ಕೇಳಿ ಚಿತ್ರವೊಂದಕ್ಕೆ ಓಕೆ ಅಂದಿದ್ದಾರಂತೆ. ಶಿವಣ್ಣ ಹೇಳಿದಾಗೆ, ಈ ಚಿತ್ರವೂ ಒಂದು ವಿಶೇಷ ಸಿನಿಮಾವಾಗಲಿದೆಯಂತೆ.[ಅಂದು ಯಶ್, ಇಂದು ಶಿವಣ್ಣ: ಇಬ್ಬರಿಗೂ 'ನಾಗರಹಾವಿನ' ದ್ವೇಷ.! ]

ಹೊಸ ನಿರ್ದೇಶಕ, ಹಳೆ ನಿರ್ಮಾಪಕ

ಈ ಹೊಸ ಚಿತ್ರವನ್ನ ನವ ನಿರ್ದೇಶಕ ರಾಧಕೃಷ್ಣ ಎಂಬುವವರು ನಿರ್ದೇಶನ ಮಾಡಲಿದ್ದು, ಶ್ರೀಕಂಠ ಚಿತ್ರವನ್ನ ನಿರ್ಮಾಣ ಮಾಡಿದ್ದ, ಮನು ಪ್ರೊಡಕ್ಷನ್ ಹೊಸ ಚಿತ್ರಕ್ಕೂ ಬಂಡವಾಳ ಹಾಕಲಿದ್ದಾರೆ.

ಜನವರಿ 6 ರಂದು 'ಶ್ರೀಕಂಠ'

ಸದ್ಯ, ಶಿವರಾಜ್ ಕುಮಾರ್ ಅಭಿನಯದ 'ಶ್ರೀಕಂಠ' ಚಿತ್ರ ಇದೇ ವಾರ ಅಂದ್ರೆ ಜನವರಿ 6 ರಂದು ಬಿಡುಗಡೆಯಾಗುತ್ತಿದೆ. ಇದರ ಜೊತೆ ಶ್ರೀಮುರುಳಿ ಅಭಿನಯದ 'ಮಫ್ತಿ', ಮತ್ತು ತೆಲುಗು ನಟ ಬಾಲಕೃಷ್ಣ ಅಭಿನಯದ 'ಗೌತಮಿಪುತ್ರ ಶಾತಕರ್ಣಿ' ಚಿತ್ರಗಳಲ್ಲಿ ಶಿವಣ್ಣ ವಿಶೇಷ ಪಾತ್ರಗಳನ್ನ ನಿರ್ವಹಿಸಿದ್ದಾರೆ.

'ಶಿವಣ್ಣ' ತುಂಬಾ ಬ್ಯುಸಿ

ಇದಲ್ಲದೇ, ಶಿವರಾಜ್ ಕುಮಾರ್ ಜೋಳಿಗೆಯಲ್ಲಿ 'ಟಗರು', 'ಬಂಗಾರು ಸನ್ ಆಫ್ ಬಂಗಾರದ ಮನುಷ್ಯ', 'ಲೀಡರ್', 'ಬಾದ್ ಶಾ', 'ದಿ ವಿಲನ್', 'ರಾಬೀನ್ ಹುಡ್', 'ಶಿವಲಿಂಗ-2', 'ಖದರ್', 'ಮನಮೋಹಕ', 'ಮೈ ನೇಮ್ ಈಸ್ ಅಂಜಿ' ಸೇರಿದಂತೆ ಇನ್ನೂ ಹಲವು ಚಿತ್ರಗಳಿಗೆ ಶಿವಣ್ಣ ಬುಕ್ ಆಗಿದ್ದಾರೆ.

English summary
Kannada Actor Shivarajkumar Announced his New Film With New Director Radhakrishna. He Playing Common man Character In This Movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada