twitter
    For Quick Alerts
    ALLOW NOTIFICATIONS  
    For Daily Alerts

    'ವಜ್ರಕಾಯ' ಶಿವಣ್ಣನ ಆರೋಗ್ಯದಲ್ಲಿ ಚೇತರಿಕೆ

    By Suneetha
    |

    ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ಸಂದರ್ಭದಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು. ಇದೀಗ ನಟ ಶಿವಣ್ಣ ಅವರ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡುಬಂದಿದೆ.

    ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಚೇತರಿಸಿಕೊಂಡಿದ್ದು, ಇವತ್ತು (ಅಕ್ಟೋಬರ್ 8) 10.30 ರಿಂದ 11.30ರ ಒಳಗಡೆ ಡಿಸ್ಚಾರ್ಜ್ ಆಗಲಿದ್ದಾರೆ. ಆದರೂ ಒಂದು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. [ಸೆಂಚುರಿ ಸ್ಟಾರ್ ಶಿವಣ್ಣನ ಅನಾರೋಗ್ಯಕ್ಕೆ ನಿಜವಾದ ಕಾರಣವೇನು?]

    ಶಿವಣ್ಣ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನಲೆಯಲ್ಲಿ ನಿನ್ನೆಯೇ ಅವರನ್ನು ಐಸಿಯುನಿಂದ ಜನರಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದ್ದು, ಇವತ್ತು ಬೆಳಿಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಿದ್ದಾರೆ.

    ನಿನ್ನೆ ಆಸ್ಪತ್ರೆಯ ಐಸಿಯುನಲ್ಲಿ ಕೆಲ ಹೊತ್ತು ವಾಕಿಂಗ್ ಮಾಡಿದ ಶಿವಣ್ಜ ಅವರು ಮಾಧ್ಯಮ ಪ್ರತಿನಿಧಿಗಳನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ಕೆಲ ಹೊತ್ತು ಔಪಚಾರಿಕವಾಗಿ ಮಾತನಾಡಿ 'ಮಗಳ ಮದುವೆ ಕಾರ್ಯ ಸಂಬಂಧ ಸುತ್ತಾಟದಿಂದ ತೀವ್ರ ಬಳಲಿಕೆಯಾಗಿತ್ತು, ಜೊತೆಗೆ ಶೂಟಿಂಗ್ ಹಾಗೂ ಒಂದು ವಾರದ ಹಿಂದೆ ಜಿಮ್ ನಲ್ಲಿ ವರ್ಕ್ ಔಟ್ ಮಾಡಲು ಶುರು ಮಾಡಿದ್ದೆ. ಇದೆಲ್ಲದರಿಂದ ಅಸ್ವಸ್ಥಗೊಂಡಂತಾಗಿತ್ತು, ಈಗ ಎಲ್ಲಾ ಸರಿ ಹೋಗಿದೆ ವಾರದ ನಂತರ ಶೂಟಿಂಗ್ ನಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಶಿವಣ್ಣ ತಿಳಿಸಿದ್ದಾರೆ.[ಶಿವಣ್ಣ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಕಿಚ್ಚ]

    ಇನ್ನು ನಿನ್ನೆ ದಿನ ಕೂಡ ಸ್ಯಾಂಡಲ್ ವುಡ್ ತಾರೆಯರು ಹಾಗೂ ರಾಜಕೀಯ ನಾಯಕರಾದ ಎಸ್.ಎಂ ಕೃಷ್ಣ ಹಾಗೂ ನಟಿ ಉಮಾಶ್ರೀ ಅವರು ನಟ ಶಿವರಾಜ್ ಕುಮಾರ್ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಆಗಮಿಸಿದ್ದರು. ಇತ್ತ ಶಿವಣ್ಣ ಬೇಗ ಗುಣಮುಖರಾಗಲಿ ಎಂದು ಅಭಿಮಾನಿ ಭಕ್ತರು ದೇವರಿಗೆ ಪೂಜೆ-ಪುನಸ್ಕಾರ ನಡೆಸುತ್ತಿದ್ದಾರೆ.[ಮಲ್ಯ ಆಸ್ಪತ್ರೆ ಮುಂದೆ ಗದ್ದಲ, ಗಲಾಟೆ, ಪಿಕ್ ಪಾಕೆಟ್]

    ಒಟ್ನಲ್ಲಿ ಶಿವಣ್ಣ ಅವರು ಬಹಳ ಬೇಗ ಚೇತರಿಸಿಕೊಂಡಿದ್ದು, ಕಂಡು ಶಿವಣ್ಣ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

    English summary
    Kannada Actor Shivarajkumar has suffered a mild heart attack and has been admitted to Mallya Hospital, Bengaluru On Tuesday (October 6th). Now Is likely to be discharged on Thursday (October 8).
    Thursday, October 8, 2015, 10:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X