ಬ್ಲಾಕ್‌ಬಸ್ಟರ್ 'ಧುರಂಧರ್'-2 ಸಿನಿಮಾ ನೋಡಿ ಶಿವರಾಜ್‌ಕುಮಾರ್ ಪೋಸ್ಟ್

ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್'-2 ಸಿನಿಮಾ ಗೆಲುವಿನ ನಾಗಾಲೋಟ ಮುಂದುವರೆದಿದೆ. ಬಾಕ್ಸಾಫೀಸ್‌ನಲ್ಲಿ ವಿಧ್ವಂಸ ಸೃಷ್ಟಿಸಿದೆ. ಕೆಲವರು ಸಿನಿಮಾ ನೋಡಿ ಟೀಕಿಸಿದರೂ ಬಹುತೇಕರು ಸಿನಿಮಾವನ್ನು ಅಪ್ಪಿ ಮುದ್ದಾಡುತ್ತಿದ್ದಾರೆ. ಖ್ಯಾತ ಸಿನಿಮಾ ತಾರೆಯರು ಸಿನಿಮಾ ನೋಡಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ನಟಿ ರಮ್ಯಾ ಸೇರಿ ಕೆಲವರು 'ಧುರಂಧರ್'-2 ಚಿತ್ರದ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಆದರೆ ರಾಜಮೌಳಿ, ಜ್ಯೂ. ಎನ್‌ಟಿಆರ್, ರಾಮ್‌ಚರಣ್, ಅಲ್ಲು ಅರ್ಜುನ್ ಹಾಗೂ ರಜನಿಕಾಂತ್ ಸೇರಿ ಹಲವು ಸಿನಿಮಾ ನಡಿ ಕೊಂಡಾಡಿದ್ದಾರೆ. ಆದಿತ್ಯಧರ್ ವಿಷನ್, ಕಲಾವಿದ ಆಯ್ಕೆ, ಮೇಕಿಂಗ್ ಎಲ್ಲದರ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಸಿನಿಮಾ ನೋಡಿ ಪ್ರತಿಕ್ರಿಯಿಸಿದ್ದಾರೆ.

Kannada Actor Shivarajkumar Praises Dhurandhar 2 Amid boxoffice success

"ಧುರಂಧರ್: ದಿ ರಿವೆಂಜ್' ಸಿನಿಮಾ ಅದ್ಭುತವಾಗಿದೆ. ಅದರ ಪ್ರತಿಯೊಂದು ಭಾಗವೂ ಇಷ್ಟವಾಯಿತು. ರಣ್‌ವೀರ್ ಸಿಂಗ್ ಅಂತೂ ಅದ್ಭುತ.. ಶಾಶ್ವತ್ ಸಚ್‌ದೇವ್ ಸಂಗೀತದ ಹಾಡುಗಳು ಬಹಳ ಪರಿಣಾಮಕಾರಿಯಾಗಿದೆ. ಆದಿತ್ಯಧರ್ ದೃಢನಿಶ್ಚಯ ಮತ್ತು ಕೌಶಲ್ಯಕ್ಕಾಗಿ ಹ್ಯಾಟ್ಸಾಪ್.. ದೇಶಭಕ್ತಿಗಾಗಿ ಸೈನಿಕನೊಬ್ಬ ಪಡುವ ಕಷ್ಟಗಳು ಚಿತ್ರದ ಜೀವಾಳ. ಇಡೀ ತಂಡಕ್ಕೆ ಅಭಿನಂದನೆ" ಎಂದು ಶಿವಣ್ಣ ಟ್ವೀಟ್ ಮಾಡಿದ್ದಾರೆ.

ಅಂದಹಾಗೆ 'ಧುರಂಧರ್'-2 ಸಿನಿಮಾ ಬಗ್ಗೆ ಬಾಲಿವುಡ್ ಮಂದಿ ಸೈಲೆಂಟ್ ಆಗಿದ್ದಾರೆ. ಕೆಲವರು ಮಾತ್ರ ಸಿನಿಮಾ ನೋಡಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಸ್ಟಾರ್ ನಟ, ನಟಿಯರು ಮೌನಕ್ಕೆ ಜಾರಿದ್ದಾರೆ. ಇನ್ನು ಶಾರುಖ್ ಖಾನ್ ಸಿನಿಮಾ ನೋಡಿ ಮೆಚ್ಚಿಕೊಂಡಾಡಿದ್ದಾರೆ ಎಂದು ಫೇಕ್ ಸ್ಕ್ರೀನ್ ಶಾಟ್ ವೈರಲ್ ಆಗ್ತಿದೆ.

6ನೇ ದಿನ ಅಂದರೆ ಮಂಗಳವಾರ ಕೂಡ 'ಧುರಂಧರ್-2' ಸಿನಿಮಾ ಕಲೆಕ್ಷನ್ ಮಾಡಿದೆ. 56 ಕೋಟಿ ರೂ. ಗಳಿಕೆ ಕಂಡು ದಾಖಲೆ ಬರೆದಿದೆ. ಭಾರತದಲ್ಲಿ ಮೊದಲ ವಾರ 550 ಕೋಟಿ ನೆಟ್ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿದೆ. ವಿಶ್ವದಾದ್ಯಂತ ಗ್ರಾಸ್ ಕಲಲೆಕ್ಷನ್ 700 ಕೋಟಿ ರೂ. ಗಡಿ ದಾಟಿದೆ.

More from Filmibeat

Read more about: shivarajkumar bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X