ನಟ ನಾನಿ ಭೇಟಿ ಬೆನ್ನಲ್ಲೇ, 'ಹಾಯ್ ನಾನ್ನ' ಸಿನಿಮಾ ನೋಡಿದ ಶಿವಣ್ಣ: ತಂದೆ- ಮಗಳ ಬಾಂಧವ್ಯಕ್ಕೆ ಏನಂದ್ರು?
ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿರುವ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ 'ಹಾಯ್ ನಾನ್ನ' ಸಿನಿಮಾಗೆ ದೇಶದೆಲ್ಲೇಡೆ ಉತ್ತಮ ರೆಸ್ಪಾನ್ಸ್ ದೊರೆಯುತ್ತಿದೆ. ತಂದೆ- ಮಗಳ ಬಾಂಧವ್ಯದ ಎಮೋಷನಲ್ ಕಥಾಹಂದರಕ್ಕೆ ಚಿತ್ರಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಸಿನಿಮಾ ನೋಡಿದ್ದಾರೆ.
ಇತ್ತೀಚೆಗೆ ನಟ ಅಲ್ಲು ಅರ್ಜುನ್ ಕೂಡ ಸಿನಿಮಾ ನೋಡಿದ್ದರು. ನಟಿ ಸಮಂತಾ 'ಹಾಯ್ ನಾನ್ನ' ಸಿನಿಮಾ ನೋಡಿದ್ದರು. ಜೊತೆಗೆ ಮಕ್ಕಳಿಗಾಗಿಯೂ ಸಿನಿಮಾ ಪ್ರದರ್ಶನ ಏರ್ಪಡಿಸಿದ್ದರು. ಇದರ ಬೆನ್ನಲ್ಲೇ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸಿನಿಮಾ ನೋಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ನಟ ನಾನಿ ಬೆಂಗಳೂರಿಗೆ ಸಿನಿಮಾ ಪ್ರಚಾರಕ್ಕೆ ಬಂದಿದ್ದ ವೇಳೆ ಶಿವಣ್ಣ ಅವರನ್ನು ಭೇಟಿಯಾಗಿದ್ದರು.

'ಹಾಯ್ ನಾನ್ನ' ನೋಡಿ ಶಿವಣ್ಣ ಏನಂದ್ರು?
'ಹಾಯ್ ನಾನ್ನ' ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದ ನಾನಿ, ಚಿತ್ರ ಬಿಡುಗಡೆಗೂ ಮುನ್ನ ಶಿವರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ದರು. ಈಗ ಮೈಸೂರಿನಲ್ಲಿ ಶಿವರಾಜ್‌ಕುಮಾರ್ ಅವರು ಬಿಡುವು ಮಾಡಿಕೊಂಡು 'ಹಾಯ್ ನಾನ್ನ' ಚಿತ್ರ ವೀಕ್ಷಿಸಿ, ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಸಿನಿಮಾ ನೋಡಿ ಸುದ್ದಿ ಮಾಧ್ಯಮದರೊಂದಿಗೆ ಮಾತನಾಡಿದ ಶಿವಣ್ಣ , "ಹಾಯ್ ನಾನ್ನ ತುಂಬ ಅದ್ಭುತ ಸಿನಿಮಾ. ಎಮೋಷನ್, ಸೆಂಟಿಮೆಂಟ್ ಬೇಗ ಕನೆಕ್ಟ್ ಆಗುತ್ತದೆ. ಅದರಲ್ಲಿಯೂ ಹೆಣ್ಣು ಮಕ್ಕಳು ಇದ್ದರೆ ಬೇಗ ಇಷ್ಟವಾಗುತ್ತದೆ. ನನಗೆ ಇಬ್ಬರು ಹೆಣ್ಣು ಮಕ್ಕಳು. ಹೀಗಾಗಿ ನನಗೂ ಬೇಗ ಕನೆಕ್ಟ್ ಆಯ್ತು" ಎಂದು ಹೇಳಿದ್ದಾರೆ.
"ಸಿನಿಮಾದಲ್ಲಿ ಮ್ಯೂಸಿಕ್ ತುಂಬಾ ಚೆನ್ನಾಗಿದೆ. ನಾನಿ ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ. ಎಲ್ಲರ ಅಭಿಯನ ಅದ್ಭುತವಾಗಿದೆ. ನನಗೆ ಈ ಸಿನಿಮಾ ಬಹಳ ಟಚ್ ಆಯ್ತು. ಕೊನೆ ಹತ್ತು ನಿಮಿಷ ಕಣ್ಣಲ್ಲಿ ನೀರು ಬಂತು. ನಾನಿ ನಾನು ನಿಮ್ಮ ಅಭಿಮಾನಿಯಾಗಿದ್ದೇನೆ" ಎಂದು ನ್ಯಾಚುರಲ್ ಸ್ಟಾರ್ ನಾನಿಯನ್ನು ಹೊಗಳಿದ್ದಾರೆ ಕರುನಾಡ ಚಕ್ರವರ್ತಿ.

ಅಪ್ಪ-ಮಗಳ ಬಾಂಧವ್ಯದ 'ಹಾಯ್ ನಾನ್ನ'
'ಹಾಯ್ ನಾನ್ನ' ಸಿನಿಮಾ ಅಪ್ಪ - ಮಗಳ ಬಾಂಧವ್ಯದ ಹೃದಯಸ್ಪರ್ಶಿ ಕಥೆಯಾಗಿದೆ. ನಾಯಕಿಯಾಗಿ ಮೃಣಾಲ್ ಠಾಕೂರ್ ನಟಿಸಿದ್ದು ,ಮೃಣಾಲ್ ಠಾಕೂರ್ ಮತ್ತು ನಾನಿ ಕೆಮಿಸ್ಟ್ರಿ ಸಿನಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ. 'ಹಾಯ್ ನಾನ್ನ'ಗೆ ಯುವ ನಿರ್ದೇಶಕ ಶೌರ್ಯುವ್ ಆಕ್ಷನ್ ಕಟ್ ಹೇಳಿದ್ದಾರೆ. ಶೌರ್ಯುವ್‌ಗೆ ಇದು ಚೊಚ್ಚಲ ಚಿತ್ರ.
ಇತ್ತೀಚಿಗೆ 'ಹಾಯ್ ನಾನ್ನ' ಸಿನಿಮಾ ನೋಡಿ 'ಪುಷ್ಪ' ನಟ ಅಲ್ಲು ಅರ್ಜುನ್ ಕೂಡ ಭಾವುಕರಾಗಿದ್ದಾರೆ. ಈ ಸಿನಿಮಾದಲ್ಲಿ ಅಪ್ಪ - ಮಗಳ ಸೆಂಟಿಮೆಂಟ್ ನನ್ನ ಮನ ಮುಟ್ಟಿದೆ ಎಂದು ಅಲ್ಲು ಅರ್ಜುನ್ ಬರೆದುಕೊಂಡಿದ್ದರು. ಈ ಚಿತ್ರದಲ್ಲಿ ನಟಿಸಿದ ನಾನಿ ಮತ್ತು ಇತರ ನಟರಿಗೆ ಸ್ಪೆಷಲ್ ಥ್ಯಾಂಕ್ಸ್ ಎಂದು ಪತ್ರ ಬರೆದಿದ್ದಾರೆ.
"ಹಾಯ್ ನಾನ್ನ ಇಡೀ ತಂಡಕ್ಕೆ ಅಭಿನಂದನೆಗಳು. ಎಂತಹ ಬೆಚ್ಚಗಿನ ಚಿತ್ರ. ನಿಜವಾಗಿಯೂ ಹೃದಯ ಸ್ಪರ್ಶಿ. ಕಷ್ಟವಿಲ್ಲದೆ ನ್ಯಾಚುರಲ್ ಆಗಿ ಅಭಿನಯಿಸುವ ಮತ್ತು ಅಂತಹ ಮನಮೋಹಕ ಸ್ಕ್ರಿಪ್ಟ್‌ಗೆ ಜೀವ ಕೊಟ್ಟಿದ್ದಕ್ಕೆ ನಾನಿ ಅವರಿಗೆ ನನ್ನ ಗೌರವಗಳು. ಆತ್ಮೀಯ ಮೃಣಾಲ್ ನಿಮ್ಮ ಪಾತ್ರ ತೆರೆಯ ಮೇಲೆ ಕಾಡುತ್ತಿದೆ. ಇದು ನಿಮ್ಮಂತೆಯೇ ಸುಂದರವಾಗಿದೆ. ಬೇಬಿ ಕಿಯಾರಾ ನಿನ್ನ ಮುದ್ದು ಅಭಿನಯದಿಂದ ನನ್ನ ಹೃದಯ ಕರಗುತ್ತಿದೆ" ಎಂದು ಬರೆದಕೊಂಡು, ಇಡೀ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.
'ಹಾಯ್ ನಾನ್ನ' ಚಿತ್ರವನ್ನು ವೈರ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿ ಮೋಹನ್ ಚೆರುಕುರಿ, ಡಾ.ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ನಿರ್ಮಾಣ ಮಾಡಿದ್ದಾರೆ. ಸಾನು ಜಾನ್ ವಗೀಸ್ ಐಎಸ್ಸಿ ಕ್ಯಾಮರಾ ವರ್ಕ್, ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿದೆ.


Click it and Unblock the Notifications











