ಶಿವಣ್ಣನಿಗೆ ಲಘು ಹೃದಯಾಘಾತ : ಅಣ್ಣಾವ್ರ ಮಗನಿಗೆ ಶಸ್ತ್ರಚಿಕಿತ್ಸೆ?

By Harshitha

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್, ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಅಭಿಮಾನಿಗಳು ಊಹಿಸಿಕೊಳ್ಳುವುದಕ್ಕೂ ಸಾಧ್ಯವಾಗದ ಶಾಕಿಂಗ್ ನ್ಯೂಸ್ ಇಂದು ಹೊರಬಿದ್ದಿದೆ.

ನಟ ಶಿವರಾಜ್ ಕುಮಾರ್ ಅಸ್ವಸ್ಥಗೊಂಡಿದ್ದಾರೆ. ಶಿವಣ್ಣನ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಅಣ್ಣಾವ್ರ ಮಗ ಶಿವಣ್ಣ ರವರನ್ನ ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. [ನಟ ಶಿವರಾಜ್ ಕುಮಾರ್ ಅಸ್ವಸ್ಥ: ಮಲ್ಯ ಆಸ್ಪತ್ರೆಗೆ ದಾಖಲು]

ಮೂಲಗಳ ಪ್ರಕಾರ, ನಟ ಶಿವರಾಜ್ ಕುಮಾರ್ ಗೆ ಇಂದು ಬೆಳಗ್ಗೆ ಲಘು ಹೃದಯಾಘಾತವಾಗಿದೆ. ಹೃದಯದ ರಕ್ತನಾಳ ಬ್ಲಾಕ್ ಆಗಿರುವುದು ಆಂಜಿಯೋಗ್ರಾಮ್ ನಲ್ಲಿ ಪತ್ತೆ ಆಗಿದೆ. ರಕ್ತನಾಳ ಬ್ಲಾಕೇಜ್ ಹೆಚ್ಚಾಗಿರುವ ಕಾರಣ ಮಲ್ಯ ಆಸ್ಪತ್ರೆ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಮುಂದೆ ಓದಿ.....

ಶಿವಣ್ಣನಿಗೆ ಆಂಜಿಯೋಪ್ಲಾಸ್ಟ್?

ಶಿವಣ್ಣನಿಗೆ ಆಂಜಿಯೋಪ್ಲಾಸ್ಟ್?

ಹೃದಯ ಸಂಬಂಧಿ ಕಾಯಿಲೆಯಿಂದ ನಟ ಶಿವರಾಜ್ ಕುಮಾರ್ ಬಳಲುತ್ತಿದ್ದಾರೆ. ಇಂದು ಬೆಳಗ್ಗೆ ಶಿವಣ್ಣನಿಗೆ ಲಘು ಹೃದಯಾಘಾತವಾಗಿದೆ. ಅತಿಯಾದ ಸ್ಟ್ರೆಸ್, ಪ್ರೆಶರ್ ಮತ್ತು ಹೆರಿಡಿಟಿ ಇದಕ್ಕೆ ಕಾರಣ ಎನ್ನಲಾಗಿದೆ. ಆಂಜಿಯೋಗ್ರಾಮ್ ನಲ್ಲಿ ರಕ್ತನಾಳ ಬ್ಲಾಕ್ ಆಗಿರುವುದು ಪತ್ತೆ ಆಗಿರುವ ಕಾರಣ, ಬ್ಲಾಕೇಜ್ ತೆಗೆಯಲು ಆಂಜಿಯೋಪ್ಲಾಸ್ಟ್ ನಡೆಸಲು ವೈದ್ಯರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. [ಶಿವಣ್ಣನಿಗೆ ಹಾರ್ಟ್ ಅಟ್ಯಾಕ್.! ಮಲ್ಯ ವೈದ್ಯರು ಹೇಳಿದ್ದೇನು?]

ಇಂದು ಬೆಳಗ್ಗೆ ಆಗಿದ್ದೇನು?

ಇಂದು ಬೆಳಗ್ಗೆ ಆಗಿದ್ದೇನು?

ಎಂದಿನಂತೆ ಇಂದು ಬೆಳಗ್ಗೆ ಶಿವಣ್ಣ ವ್ಯಾಯಾಮ ಮಾಡುತ್ತಿದ್ದರು. ಆಗ ಬಲ ಭುಜ ಭಾಗದಲ್ಲಿ ಶಿವಣ್ಣನಿಗೆ ಅತಿಯಾದ ನೋವು ಕಾಣಿಸಿಕೊಂಡಿದೆ. ತಕ್ಷಣ ಪತ್ನಿ ಗೀತಾ ಶಿವರಾಜ್ ಕುಮಾರ್, ಶಿವರಾಜ್ ಕುಮಾರ್ ರನ್ನ ಹತ್ತಿರದ ಕೊಲಂಬಿಯಾ ಏಷ್ಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

 ECGಯಲ್ಲಿ ವ್ಯತ್ಯಾಸ?

ECGಯಲ್ಲಿ ವ್ಯತ್ಯಾಸ?

ಕೊಲಂಬಿಯಾ ಏಪ್ಯ ಆಸ್ಪತ್ರೆಯಲ್ಲಿ ವೈದ್ಯರು ECG ನಡೆಸಿದ್ದಾರೆ. ರಿಪೋರ್ಟ್ ನಲ್ಲಿ ಲಘು ಹೃದಯಾಘಾತ ಆಗಿರುವುದು ಪತ್ತೆ ಆದ ಬಳಿಕ ಆಂಜಿಯೋಗ್ರಾಮ್ ಚಿಕಿತ್ಸೆ ಪಡೆಯಲು ವಿಠಲ್ ಮಲ್ಯ ರಸ್ತೆಯಲ್ಲಿರುವ ಮಲ್ಯ ಆಸ್ಪತ್ರೆಗೆ ಶಿವಣ್ಣ ರನ್ನ ಕರೆತರಲಾಯ್ತು.

ರಕ್ತನಾಳ ಬ್ಲಾಕ್ ಆಗಿರುವುದು ಪತ್ತೆ?

ರಕ್ತನಾಳ ಬ್ಲಾಕ್ ಆಗಿರುವುದು ಪತ್ತೆ?

ಮೂಲಗಳ ಪ್ರಕಾರ, ಮಲ್ಯ ಆಸ್ಪತ್ರೆಯಲ್ಲಿ ಆಂಜಿಯೋಗ್ರಾಮ್ ನಡೆಸಿದ ವೈದ್ಯರು ಶಿವಣ್ಣನ ಹೃದಯದಲ್ಲಿ ರಕ್ತನಾಳ ಬ್ಲಾಕ್ ಆಗಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಹೀಗಾಗಿ ಆಂಜಿಯೋಪ್ಲಾಸ್ಟ್ ನಡೆಸಲು ವೈದ್ಯರು ತೀರ್ಮಾನಿಸಿದ್ದಾರೆ ಅಂತ ವರದಿಯಾಗಿದೆ.

ಇನ್ನೆರಡು ದಿನ ಆಸ್ಪತ್ರೆಯಲ್ಲೇ ಶಿವಣ್ಣ?

ಇನ್ನೆರಡು ದಿನ ಆಸ್ಪತ್ರೆಯಲ್ಲೇ ಶಿವಣ್ಣ?

ಈಗಷ್ಟೆ ಆಂಜಿಯೋಗ್ರಾಮ್ ನಡೆಸಿರುವ ವೈದ್ಯರು, ಎರಡು ದಿನ ಬೆಡ್ ರೆಸ್ಟ್ ನಲ್ಲಿರುವಂತೆ ಸೂಚಿಸಿದ್ದಾರೆ.

More from Filmibeat

English summary
According to the sources, Kannada Actor Shivarajkumar has suffered a mild heart attack and has been admitted to Mallya Hospital, Bengaluru today (October 6th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X