'ವಿಷ್ಣು ಪ್ರಿಯ'ನಾದ 'ಪಡ್ಡೆಹುಲಿ' ಶ್ರೇಯಸ್ ಮಂಜು
ಪಡ್ಡೆ ಹುಲಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದ ನಟ ಶ್ರೇಯಸ್ ಮಂಜು ಈಗ ಎರಡನೆ ಸಿನಿಮಾಗೆ ಸಿದ್ಧರಾಗುತ್ತಿದ್ದಾರೆ. ರಿಯಲ್ ಲೈಫ್ ನಲ್ಲಿ ಸಾಹಸ ಸಿಂಹ ವಿಷ್ಣುದಾದಾನ ಅಪ್ಪಟ ಅಭಿಮಾನಿಯಾಗಿರುವ ಶ್ರೇಯಸ್ ರೀಲ್ ಮೇಲು ವಿಷ್ಣುವರ್ಧನ್ ಅಭಿಮಾನಿಯಾಗಿ ಮಿಂಚಿದ್ದರು.
ಶ್ರೇಯಸ್ ಸ್ಯಾಂಡಲ್ ವುಡ್ ನ ಖ್ಯಾತ ನಿರ್ಮಾಪಕ ಕೆ ಮಂಜು ಪುತ್ರ. ಕೆ. ಮಂಜು ಕೂಡ ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ಹಾಗಾಗಿ ಮಗನ ಸಿನಿಮಾದಲ್ಲಿ ವಿಷ್ಣುವರ್ಧನ್ ಛಾಯೆ ಇರುತ್ತೆ. ಸದ್ಯ ಶ್ರೇಯಸ್ ಎರಡನೆ ಸಿನಿಮಾ ಅನೌನ್ಸ್ ಆಗಿದೆ. ಕೆ ಮಂಜು ಪುತ್ರನ ಎರಡನೇ ಸಿನಿಮಾಗೆ ವಿಷ್ಣು ಪ್ರಿಯ ಎಂದು ಟೈಟಲ್ ಇಡುವ ಮೂಲಕ ಮತ್ತೆ ವಿಷ್ಣುವರ್ಧನ್ ಮೇಲಿನ ಅಭಿಮಾನ ಮೆರೆದಿದ್ದಾರೆ ಕೆ ಮಂಜು.
ಅಂದ್ಹಾಗೆ ಚಿತ್ರಕ್ಕೆ ಮಲಯಾಳಂನ ಖ್ಯಾತ ನಿರ್ದೇಶಕ ವಿ ಕೆ ಪ್ರಕಾಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದ್ದು ಚಿತ್ರಕ್ಕೆ ಧಾರವಾಡ ಮೂಲದವರಾದ ಸಿಂಧು ಶ್ರೀ ಕಥೆ ಬರೆದಿದ್ದಾರೆ. ಚಿತ್ರತಂಡ ಸದ್ಯ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

ಅಂದ್ಹಾಗೆ ವಿಷ್ಣು ಪ್ರಿಯಾ ಮುಂದಿನ ತಿಂಗಳು ಆಗಸ್ಟ್ 9ಕ್ಕೆ ಅಂದ್ರೆ ವರಮಹಾಲಕ್ಷ್ಮಿ ಹಬ್ಬದ ದಿನ ಸ್ಕ್ರಿಪ್ಟ್ ಪೂಜೆ ಮಾಡಲಿದೆ ಚಿತ್ರತಂಡ. ಇನ್ನು ಆಗಸ್ಟ್ 24ಕ್ಕೆ ಚಿತ್ರಕ್ಕೆ ಅದ್ದೂರಿ ಮುಹೂರ್ತ ನಡೆಯಲಿದೆ. ಸೆಪ್ಟಂಬರ್ ನಿಂದನೆ ಚಿತ್ರೀಕರಣ ಪ್ರಾರಂಭವಾಗಲಿದೆ. ಉಳಿದಂತೆ ಚಿತ್ರದಲ್ಲಿ ಯಾರೆಲ್ಲ ಅಭಿನಯಿಸಲಿದ್ದಾರೆ ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಹೂರ್ತದ ಸಮಯದಲ್ಲಿ ನೀಡಲಿದೆ ಚಿತ್ರತಂಡ.


Click it and Unblock the Notifications











