ರೋರಿಂಗ್ ಸ್ಟಾರ್ ಬರ್ತಡೇ ಗೆ 'ಕೆ ಆರ್ ಜಿ' ಪ್ರೊಡಕ್ಷನ್ಸ್ ನೀಡಿದ ಸ್ಪೆಷಲ್ ಗಿಫ್ಟ್

By Pavithra

ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಶ್ರೀ ಮುರಳಿ ಮಫ್ತಿ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಯಶಸ್ವಿಯಾಗಿ ಮೂರನೇ ವಾರ ಪೂರೈಸುತ್ತಿರುವ ಮಫ್ತಿ ಸಿನಿಮಾದ ಸಂಭ್ರಮದ ಜೊತೆಗೆ ನಟ ಶ್ರೀ ಮುರಳಿ ಅವರಿಗೆ ಇಂದು(ಡಿ 17) ಹುಟ್ಟುಹಬ್ಬದ ಸಂಭ್ರಮ .

ಮೂವತ್ತೈದನೇ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಿರುವ ಶ್ರೀ ಮುರಳಿ ಅವರ ಬರ್ತಡೇ ವಿಶೇಷವಾಗಿ ತಮ್ಮ ಮುಂದಿನ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಮಫ್ತಿ ಚಿತ್ರದ ನಂತರ ಶ್ರೀ ಮುರಳಿ 'ಕೆ ಆರ್ ಜಿ' ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ಆಕ್ಟ್ ಮಾಡುತ್ತಿದ್ದಾರೆ. 'ಕೆ ಆರ್ ಜಿ ಪ್ರೊಡಕ್ಷನ್ಸ್', ನಿರ್ಮಾಪಕ 'ವಿಜಯ್ ಕಿರಗೊಂದೂರು' ಅವರ ಸಹೋದರ ಸಂಬಂಧಿ ಕಾರ್ತಿಕ್ ಗೌಡ ಅವರ ಸಂಸ್ಥೆ. ತಮ್ಮ ಸಂಸ್ಥೆಯ ಚೊಚ್ಚಲ ಸಿನಿಮಾವನ್ನ ಶ್ರೀ ಮುರಳಿಯವರಿಗೆ ನಿರ್ಮಾಣ ಮಾಡುತ್ತಿದ್ದಾರೆ ಕಾರ್ತಿಕ್.

Kannada actor sri murali celebrating his birthday today

'ನಿನ್ನಿಂದಲೇ', 'ಮಾಸ್ಟರ್ ಪೀಸ್', 'ರಾಜಕುಮಾರ' ಹಾಗೂ 'ಕೆ ಜಿ ಎಫ್' ಸಿನಿಮಾಗಳ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರೋ ಕಾರ್ತಿಕ್ ಗೌಡ ಶ್ರೀ ಮುರಳಿ ಅವರ ಮುಂದಿನ ಚಿತ್ರದ ಪ್ರೊಡ್ಯೂಸ್ ಮಾಡೋ ಮೂಲಕ ಸ್ವತಂತ್ರ ನಿರ್ಮಾಪಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.

Kannada actor sri murali celebrating his birthday today

ಪ್ರೊಡಕ್ಷನ್ ನಂ 1 ಹೆಸರಿನಲ್ಲಿ ಚಿತ್ರದ ಪೋಸ್ಟರ್ ಗಳು ರಿಲೀಸ್ ಆಗಿದ್ದು ಬಂಗಾರದ ಮನುಷ್ಯ ಸಿನಿಮಾ ಖ್ಯಾತಿಯ ನಿರ್ದೇಶಕ 'ಯೋಗಿ ಜಿ ರಾಜ್' ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸ ಶುರು ಮಾಡಿರೋ ನಿರ್ದೇಶಕರು ಇನ್ನ ಕೆಲವೇ ದಿನಗಳಲ್ಲಿ ಸಿನಿಮಾದ ಮಹೂರ್ತ ಮಾಡಲಿದ್ದಾರೆ. ಬಿಡುಗಡೆ ಆಗಿರೋ ಪೊಸ್ಟರ್ ಗಳನ್ನ ನೋಡಿದ್ರೆ ಈ ಚಿತ್ರವೂ ಕೂಡ ಔಟ್ ಅಂಡ್ ಔಟ್ ಆಕ್ಷನ್ ಕಮರ್ಷಿಯಲ್ ಸಿನಿಮಾ ಆಗುವ ಸೂಚನೆ ಸಿಕ್ತಿದೆ.

More from Filmibeat

English summary
Kannada actor sri murali celebrating his birthday today, karthik gowda producing sri murali next movie, yogi g raj was directing the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X