For Quick Alerts
  ALLOW NOTIFICATIONS  
  For Daily Alerts

  ಶ್ರೀಮುರಳಿ ಹುಟ್ಟುಹಬ್ಬ: ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ ರೋರಿಂಗ್ ಸ್ಟಾರ್

  |

  ರೋರಿಂಗ್ ಸ್ಟಾರ್ ಶ್ರೀಮುರಳಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಶ್ರೀಮುರಳಿ ನಟಿಸಿದ 'ಮದಗಜ' ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿದೆ. 'ಮದಗಜ'ನ ಆರ್ಭಟಕ್ಕೆ ಕನ್ನಡದ ಪ್ರೇಕ್ಷಕರು ಮನ ಮೆಚ್ಚಿ ಹಾಡಿ ಹೊಗಳಿದ್ದಾರೆ. ಸಿನಿಮಾ ಗೆದ್ದಿರುವ ಖುಷಿಯಲ್ಲಿ ಶ್ರೀಮುರಳಿ ಅಭಿಮಾನಿಗಳಿದ್ದಾರೆ. ಆದರೆ, ಇದೇ ಖುಷಿಯಲ್ಲಿರುವಾಗಲೇ ಶ್ರೀಮುರಳಿ ತಮ್ಮ ಫ್ಯಾನ್ಸ್‌ಗೆ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ.

  Recommended Video

  ನೆಕ್ಸ್ಟ್ ಸಂಡೆ ಎಲ್ಲಾ ಒಟ್ಟಿಗೆ ಊಟಕ್ಕೆ ಸಿಗೋಣ ಅಂತ ಹೇಳಿದ್ರು ಅಪ್ಪು ಮಾಮ | Sri Murali

  ಸ್ಟಾರ್‌ಗಳ ಹುಟ್ಟುಹಬ್ಬ ಅಂದರೆ, ಅಭಿಮಾನಿಗಳು ಒಂದು ವಾರದಿಂದಲೇ ಹಬ್ಬ ಆಚರಿಸುವುದಕ್ಕೆ ಸಿದ್ಧರಾಗಿ ನಿಲ್ಲುತ್ತಾರೆ. ಸೋಶಿಯಲ್ ಮೀಡಿಯಾಗಳಲ್ಲಿ ನಿಧಾನವಾಗಿ ಬರ್ತ್ ಡೇ ಸೆಲೆಬ್ರೆಟ್ ಮಾಡಲು ಆರಂಭಿಸುತ್ತಾರೆ. ಶ್ರೀಮುರಳಿ ಹುಟ್ಟುಹಬ್ಬವನ್ನೂ ಕೂಡ ಅಭಿಮಾನಿಗಳು ಭರ್ಜರಿಯಾಗಿ ಸಂಭ್ರಮಿಸಬೇಕು ಅಂತ ಕಾದು ಕೂತಿದ್ದರು. ಅಷ್ಟರೊಳಗೆ ಸ್ವತ: ಶ್ರೀಮುರಳಿ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

  ಅಭಿಮಾನಿಗಳಿಗೆ ಶ್ರೀಮುರಳಿ ಸಂದೇಶ

  ಅಭಿಮಾನಿಗಳಿಗೆ ಶ್ರೀಮುರಳಿ ಸಂದೇಶ

  ಕಳೆದ ವರ್ಷ ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ದೂರದೂರಿನಿಂದ ಶ್ರೀಮುರಳಿ ಅಭಿಮಾನಿಗಳು ಆಗಮಿಸಿ ಬರ್ತ್ ಡೇ ಯನ್ನು ಆಚರಿಸಿದ್ದರು. ಆದರೆ, ಈ ಬಾರಿ ಶ್ರೀಮುರಳಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ. ಡಿಸೆಂಬರ್ 17ರಂದು ರೋರಿಂಗ್ ಸ್ಟಾರ್ ಶ್ರೀಮುರಳಿ 39ನೇ ಬರ್ತ್‌ಡೇಯನ್ನು ಆಚರಿಸಿಕೊಳ್ಳಬೇಕಿತ್ತು. ಹೀಗಾಗಿ 'ಮದಗಜ' ಯಶಸ್ಸಿನ ಖುಷಿಯಲ್ಲಿ ತೇಲಾಡುತ್ತಿದ್ದ ಅಭಿಮಾನಿಗಳ ಸಂಭ್ರಮಕ್ಕೆ ಬ್ರೇಕ್ ಬಿದ್ದಂತಾಗಿದೆ. ಅಷ್ಟಕ್ಕೂ ಶ್ರೀಮುರಳಿ ಮಾಡಿದ ಟ್ವೀಟ್‌ನಲ್ಲಿ ಏನಿದೆ ಅಂತ ತಿಳಿದುಕೊಳ್ಳಲು ಮುಂದೆ ಓದಿ.

  ಈ ಬಾರಿ ಹುಟ್ಟುಹಬ್ಬ ಆಚರಣೆ ಇಲ್ಲ

  ಈ ಬಾರಿ ಹುಟ್ಟುಹಬ್ಬ ಆಚರಣೆ ಇಲ್ಲ

  ಹೌದು.. ಶ್ರೀಮುರಳಿ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ಇರಲು ನಿರ್ಧರಿಸಿದ್ದಾರೆ. ಹೀಗಾಗಿ ಒಂದು ದಿನ ಮುಂಚಿತವಾಗಿ ಶ್ರೀಮುರಳಿ ಟ್ವೀಟ್ ಮಾಡಿ, ಅಭಿಮಾನಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ. "ನನ್ನ ಪ್ರೀತಿಯ ಅಭಿಮಾನಿಗಳೆ. ಈ ಬಾರಿ ನಿಮ್ಮೊಂದಿಗೆ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಾಗುವುದಿಲ್ಲ. ಕಾರಣವೇನೆಂದು ನಿಮಗೆ ಗೊತ್ತಿರುವುದೆಂದು ಭಾವಿಸುವೆ. ನಾನು ಬೆಂಗಳೂರಿನಲ್ಲೂ ಇರುವುದಿಲ್ಲ. ಸದಾ ನಿಮ್ಮ ಪ್ರೀತಿ ಹಾಗು ಆಶೀರ್ವಾದವನ್ನು ಬಯಸುವ.. ನಿಮ್ಮ, ಶ್ರೀಮುರಳಿ (ಅಭಿಮಾನಿಗಳ ಅಭಿಮಾನಿ)" ಎಂದು ಶ್ರೀಮುರಳಿ ಟ್ವೀಟ್ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

  ಅಪ್ಪು ನಿಧನವೇ ಕಾರಣ

  ಶ್ರೀಮುರಳಿ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ಇರಲು ಪ್ರಮುಖ ಕಾರಣ, ಪುನೀತ್ ರಾಜ್‌ಕುಮಾರ್ ನಿಧನ. ಅಣ್ಣಾವ್ರ ಇಡೀ ಕುಟುಂಬ ಅಪ್ಪು ನಿಧನದ ನೋವಿನಲ್ಲಿದೆ. ಶ್ರೀಮುರಳಿ ಕೂಡ ಪವರ್‌ಸ್ಟಾರ್ ಅಗಲಿದ ನೋವಿನಿಂದ ಇನ್ನೂ ಹೊರಬಂದಿಲ್ಲ. ಹೀಗಾಗಿ ಇಂತಹ ಸಂದರ್ಭದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ಇರಲು ರೋರಿಂಗ್ ಸ್ಟಾರ್ ನಿರ್ಧರಿಸಿದ್ದಾರೆ. ಇದೊಂದೇ ಕಾರಣಕ್ಕೆ ಈ ಬಾರಿ ಬರ್ತ್‌ಡೇ ಇರುವುದಿಲ್ಲ. ನಾನು ಊರಿನಲ್ಲಿಯೂ ಇರುವುದಿಲ್ಲವೆಂದು ರೋರಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಂದೇಶವನ್ನು ರವಾನೆ ಮಾಡಿದ್ದಾರೆ.

  39ನೇ ಹುಟ್ಟುಹಬ್ಬಕ್ಕೆ ಬ್ರೇಕ್

  39ನೇ ಹುಟ್ಟುಹಬ್ಬಕ್ಕೆ ಬ್ರೇಕ್

  ಪರಿಸ್ಥಿತಿ ಎಲ್ಲವೂ ಸರಿಯಾಗಿ ಇದ್ದಿದ್ದರೆ, ರೋರಿಂಗ್ ಸ್ಟಾರ್ ಶ್ರೀಮುರಳಿ ಇಂದು 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. 'ಮದಗಜ' ಸಿನಿಮಾದ ಯಶಸ್ಸು ಶ್ರೀಮುರಳಿ ನೋವಿನಲ್ಲಿಯೂ ಖುಷಿಯನ್ನು ತಂದುಕೊಟ್ಟಿದೆ. ಇದೇ ಖುಷಿಯಲ್ಲಿ ಹುಟ್ಟುಹಬ್ಬವನ್ನೂ ಅಷ್ಟೇ ಸಂಭ್ರಮದಿಂದ ಸೆಲೆಬ್ರೆಟ್ ಮಾಡಿಕೊಳ್ಳಬೇಕಿತ್ತು. ಸದ್ಯ ಶ್ರೀಮುರಳಿ ಸಿನಿಮಾ ಒಂದು ಸಣ್ಣ ಬ್ರೇಕ್ ತೆಗೆದುಕೊಂಡು ಹೊಸ ಸಿನಿಮಾಗೆ ತಯಾರಿ ನಡೆಸಲಿದ್ದಾರೆ. ಡಾ.ಸೂರಿ ನಿರ್ದೇಶಿಸುತ್ತಿರುವ 'ಬಘೀರ' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಹೊಂಬಾಳೆ ಫಿಲಂಸ್ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.

  English summary
  Kannada actor Sri Murali not celebrating his birthday due to Puneeth Rajkumar death. Sri Murali supposed to celebrate his 39th birthday on December 17.
  Thursday, December 16, 2021, 16:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X