'ಬಾಸ್' ಬರ್ತ್ ಡೇ ಗೆ ಶ್ರೀಮುರಳಿ ಕೊಟ್ಟ ಭರ್ಜರಿ ಗಿಫ್ಟ್

By Bharath Kumar

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆ ರೋರಿಂಗ್ ಸ್ಟಾರ್ ಶ್ರೀಮುರಳಿ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಸೆಂಚುರಿ ಸ್ಟಾರ್ ಬರ್ತ್ ಡೇ ವಿಶೇಷವಾಗಿ ಶಿವಣ್ಣ ಅಭಿನಯದ ಹೊಸ ಚಿತ್ರಗಳ ಪೋಸ್ಟರ್, ಟೀಸರ್ ಗಳು ಬಿಡುಗಡೆಯಾಗುವುದು ಸಹಜ. ಅದೇ ಸಂಪ್ರದಾಯದಂತೆ ಈಗ 'ಮಫ್ತಿ' ಚಿತ್ರದ ಎರಡನೇ ಟೀಸರ್ ಬಿಡುಗಡೆಯಾಗಿದೆ.

ಕರುನಾಡ ಚಕ್ರವರ್ತಿಯ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿರುವ 'ಮಫ್ತಿ' ಟೀಸರ್ ಸಖತ್ ಮಾಸ್ ಆಗಿದ್ದು, ಶಿವಣ್ಣನ ಲುಕ್ ಕ್ರೇಜ್ ಹೆಚ್ಚಿಸಿದೆ. ಕಪ್ಪು ಬಣ್ಣದ ಪಂಚೆ ಮತ್ತು ಕಪ್ಪು ಬಣ್ಣದ ಶರ್ಟ್ ತೊಟ್ಟಿರುವ ಶಿವರಾಜ್ ಕುಮಾರ್ ಎಂಟ್ರಿ ಚಿಂದಿ ಉಡಾಯಿಸುತ್ತಿದೆ.

Kannada Actor Srimurali Starerr 'Mufti' 2nd teaser release

ಅಂದ್ಹಾಗೆ, ಕಳೆದ ಡಿಸೆಂಬರ್ ನಲ್ಲಿ ನಟ ಶ್ರೀಮುರಳಿ ಹುಟ್ಟುಹಬ್ಬದಂದು 'ಮಫ್ತಿ' ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿತ್ತು. ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಒಟ್ಟಿಗೆ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ.

ಇನ್ನುಳಿದಂತೆ ನರ್ತನ್ ಆಕ್ಷನ್ ಕಟ್ ಹೇಳುತ್ತಿರುವ 'ಮಫ್ತಿ' ಚಿತ್ರವನ್ನ ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೀಮುರಳಿ ಜೊತೆ ಶಾನ್ವಿ ಶ್ರೀವಾಸ್ತವ ಜೋಡಿಯಾಗಿದ್ದಾರೆ.

More from Filmibeat

English summary
Kannada Actor Shiva Rajkumar and SriMurali starrer 'Mufti' 2nd teaser released Today (july 12th) for Shiva Rajkumar's birthday special.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X