ಅಮೇರಿಕಾದಲ್ಲಿ ಶ್ರೀನಾಥ್ ಗೆ ಸಿಕ್ಕಿದೆ ಹೊಸ ಬಿರುದು
ಹಿರಿಯ ನಟ ಶ್ರೀನಾಥ್ ಪ್ರಣಯರಾಜ ಎಂದೇ ಜನಪ್ರಿಯತೆ ಗಳಿಸಿದ್ದಾರೆ. ಆದರೆ, ಈ ನಟನಿಗೆ ಈಗ ಹೊಸ ಬಿರುದು ಸಿಕ್ಕಿದೆ. ಅದು ಅಮೇರಿಕಾದಲ್ಲಿ ಎನ್ನುವುದು ವಿಶೇಷ.
ಅಮೇರಿಕಾದಲ್ಲಿ ನಡೆಯುತ್ತಿರುವ ಅಕ್ಕ ಸಮ್ಮೇಳನದಲ್ಲಿ ಕನ್ನಡ ಅನೇಕ ನಟರು ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ಈಗ ನಟ ಶ್ರೀನಾಥ್ ಅವರಿಗೆ ಗೌರವ ಸಮರ್ಪಣೆ ಮಾಡಲಾಗಿದೆ. ಕಳೆದ 50 ವರ್ಷಗಳಿಂದ ಚಿತ್ರರಂಗದಲ್ಲಿ ಅವರು ಮಾಡಿರುವ ಸಾಧನೆಯನ್ನು ಗಮನಿಸಿ 'ಅಭಿನಯ ಮಾಣಿಕ್ಯ' ಎಂಬ ಬಿರುದನ್ನು ನೀಡಲಾಗಿದೆ.
ಅಮೆರಿಕದ ಡಲ್ಲಾಸ್ ನಗರದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಈ ಬಿರುದನ್ನು ಅವರಿಗೆ ನೀಡಿ ಸನ್ಮಾನಿಸಲಾಗಿದೆ. ಈ ಸುಂದರ ಕ್ಷಣಗಳಲ್ಲಿ ಅವರ ಪತ್ನಿ ಗೀತಾ ಕೂಡ ಭಾಗಿಯಾಗಿದ್ದರು.

1967ರಲ್ಲಿ ಬಂದ 'ಲಗ್ನ ಪತ್ರಿಕೆ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದ ಈ ನಟ ಇಂದಿಗೂ ಬಣ್ಣದ ಜಗತ್ತಿನ ನಂಟಿನಲ್ಲಿ ಇದ್ದಾರೆ. ಪುಟ್ಟಣ್ಣ ಕಣಗಾಲ್ ರೀತಿಯ ಶ್ರೇಷ್ಟ ನಿರ್ದೇಶಕರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳ ಜೊತೆಗೆ ಕಿರುತೆರೆಯ ಕಾರ್ಯಕ್ರಮ ಹಾಗೂ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.


Click it and Unblock the Notifications











