Don't Miss!
- News
ಭೂಕಂಪನ ಮಹಾಮಳೆಯ ಮುನ್ಸೂಚನೆಯಾ?... ಅವತ್ತು ಹಾಗೆಯೇ ಆಗಿತ್ತು!
- Technology
ಪೊಕೊ F4 5G V/S ಪೊಕೊ F3 GT: ಇವೆರಡರಲ್ಲಿ ಖರೀದಿಗೆ ಯಾವುದು ಬೆಸ್ಟ್?
- Automobiles
ಅತ್ಯಾಧುನಿಕ ಫೀಚರ್ಸ್ಗಳೊಂದಿಗೆ ಹೀರೋ ಪ್ಯಾಶನ್ ಎಕ್ಸ್ಟೆಕ್ ಬೈಕ್ ಬಿಡುಗಡೆ
- Sports
ENG vs NZ 2ನೇ ಟೆಸ್ಟ್: ನೆಲಕಚ್ಚಿದ್ದ ಇಂಗ್ಲೆಂಡ್ಗೆ ಬೈರ್ಸ್ಟೋ, ಓವರ್ಟನ್ ಆಸರೆ; 3ನೇ ದಿನದ ಲೈವ್ ಸ್ಕೋರ್
- Lifestyle
ಅಪಘಾತದಿಂದ ಕ್ಷಣಾರ್ಧದಲ್ಲಿ ಮಗುವಿನ ರಕ್ಷಿಸಿ, ತಾಯಿಯ ಮೊಬೈಲ್ ಪುಡಿ ಮಾಡಿದ ಸೈನಿಕ: ಸೈನಿಕನ ಕಾರ್ಯಕ್ಕೆ ನೆಟ್ಟಿಗರು ಫುಲ್ ಫಿದಾ
- Finance
ಪಿಎಂ ಕಿಸಾನ್ 12ನೇ ಕಂತು: ಶೀಘ್ರ ಈ ಕಾರ್ಯ ಮಾಡಿ
- Education
Vijayapura District Court Recruitment 2022 : 28 ಜವಾನ, ಆದೇಶ ಜಾರಿಕಾರ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
Exclusive:ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟನ ನರೇಶ್ ಮದುವೆ: ಅಸಲಿ ಮ್ಯಾಟರ್ ಏನು?
ಸಿನಿಮಾರಂಗದಲ್ಲಿ ಪ್ರೀತಿ, ಪ್ರೇಮ, ಮದುವೆ ಇವೆಲ್ಲವೂ ಕಾಮನ್. ಇದರೊಂದಿಗೆ ವಿಚ್ಛೇದನ ಕೂಡ ಕಾಮನ್ ಆಗಿಬಿಟ್ಟಿದೆ. ಚಿತ್ರರಂಗದಲ್ಲಿ ಪ್ರೀತಿಸಿ ಮದುವೆಯಾದ ಜೋಡಿ ಕೆಲವು ವರ್ಷಗಳ ಬಳಿಕ ಬೇರೆಯಾಗಿರುವ ಸುದ್ದಿ ಬರುತ್ತಲೇ ಸಹಜ ಎನಿಸಲು ಶುರುವಾಗಿವೆ. ಅದಕ್ಕೆ ಮತ್ತೊಂದು ಜೋಡಿ ಬೇರೆಯಾಗಿದೆ ಎನ್ನುವ ಸುದ್ದಿ.
ಟಾಲಿವುಡ್‌ನಲ್ಲಿ ಕಳೆದ ಕೆಲವು ದಿನಗಳಿಂದ ಕನ್ನಡ ನಟಿಯ ಮದುವೆ ವಿಚಾರ ಹರಿದಾಡುತ್ತಿದೆ. ಅದು ಮತ್ಯಾರೂ ಅಲ್ಲ ನಟಿ ಪವಿತ್ರಾ ಲೋಕೇಶ್. ಹೆಚ್ಚು-ಕಡಿಮೆ ನಾಲ್ಕೈದು ದಿನಗಳಿಂದ ಪವಿತ್ರ ಲೋಕೇಶ್ ತೆಲುಗು ನಟನನ್ನು ಮದುವೆಯಾಗುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದೇ ಸುದ್ದಿಯೀಗ ಸ್ಯಾಂಡಲ್‌ವುಡ್‌ನಲ್ಲೂ ಹಲ್‌ಚಲ್ ಎಬ್ಬಿಸಿದೆ.

ತೆಲುಗಿನ ಹಿರಿಯ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಇಬ್ಬರೂ ಪ್ರೀತಿಸುತ್ತಿದ್ದಾರೆ. ಬಹಳ ದಿನಗಳಿಂದ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದಾರೆ ಎಂದು ತೆಲುಗು ವೆಬ್ ಸೈಟ್ ಸಾಕ್ಷಿ ವರದಿ ಮಾಡಿದೆ. ಪವಿತ್ರಾ ಲೋಕೇಶ್ ಹಾಗೂ ನರೇಶ್ ಇಬ್ಬರೂ ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಾಗಿ ಈ ಸುದ್ದಿ ನಿಜ ಇದ್ದರೂ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಹಾಗಿದ್ದರೆ, ಈ ಪ್ರಕರಣದ ಬಗ್ಗೆ ಪವಿತ್ರ ಲೋಕೇಶ್ ಹಾಗೂ ಪತಿ ಸುಚೇಂದ್ರ ಪ್ರಸಾದ್ ಪ್ರತಿಕ್ರಿಯೆ ನೀಡಿದ್ರಾ? ಅಸಲಿಗೆ ಏನಿದು ಕಥೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಪವಿತ್ರಾ ಲೋಕೇಶ್ ಮದುವೆ ಕಥೆಯೇನು?
ಇತ್ತೀಚೆಗೆ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಇಬ್ಬರೂ ಒಟ್ಟಿಗೆ ಮಹಾಬಲೇಶ್ವರಕ್ಕೆ ಹೋಗಿ ಸ್ವಾಮೀಜಿಯೊಬ್ಬರನ್ನು ಭೇಟಿಯಾಗಿ ಬಂದಿದ್ದಾರೆ ಎನ್ನಲಾಗಿದೆ. ಇಲ್ಲಿಂದ ಇಬ್ಬರ ಮದುವೆ ವಿಚಾರ ಬೆಳಕಿಗೆ ಬಂದಿದೆ ಎನ್ನುವುದು ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ. ಮತ್ತೂ ಕೆಲವರು ಪವಿತ್ರಾ ಲೋಕೇಶ್ ಹಾಗೂ ನರೇಶ್ ಇಬ್ಬರೂ ಸ್ವಾಮೀಜಿ ಮುಂದೆನೇ ಮದುವೆಯಾಗಿದ್ದಾರೆ ಎಂಬ ಸುದ್ದಿನೂ ಹಬ್ಬಿಸುತ್ತಿದ್ದಾರೆ. ಅಸಲಿಗೆ ಈ ಬಗ್ಗೆ ಅಧಿಕೃತವಾಗಿ ಯಾರೂ ಏನೂ ಹೇಳಿಕೆ ನೀಡಿಲ್ಲ.

ಸುಚೇಂದ್ರ ಪ್ರಸಾದ್, ಪವಿತ್ರಾ ಲೋಕೇಶ್ ಜೊತೆಯಾಗಿಲ್ಲ
ಪವಿತ್ರಾ ಲೋಕೇಶ್ ಮದುವೆ ವಿಚಾರ ಟಾಲಿವುಡ್‌ನಲ್ಲಿ ವೈರಲ್ ಆಗುತ್ತಿದ್ದಂತೆ, ಇತ್ತ ಸ್ಯಾಂಡಲ್‌ವುಡ್‌ನಲ್ಲೂ ಹಲ್‌ಚಲ್ ಎಬ್ಬಿಸಿದೆ. ನಟ, ನಿರ್ದೇಶಕ ಸುಚೇಂದ್ರ ಪ್ರಸಾದ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ 2007ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರಿಗೂ ಅದು ಎರಡನೇ ಮದುವೆಯಾಗಿತ್ತು. ಆದರೂ ಇಬ್ಬರ ವೈವಾಹಿಕ ಜೀವನದಲ್ಲಿ ಸಾಮರಸ್ಯವಿಲ್ಲ ಎಂದು ಸ್ಯಾಂಡಲ್‌ವುಡ್ ಈಗ ಮಾತಾಡಿಕೊಳ್ಳುತ್ತಿದೆ. ಇಬ್ಬರೂ ಜೊತೆಯಲ್ಲಿ ಜೀವನ ನಡೆಸುತ್ತಿಲ್ಲ ಎಂದು ಎಂಬ ಗುಸುಗುಸು ಎದ್ದಿದೆ.

ಇಬ್ಬರ ಪ್ರತಿಕ್ರಿಯೆ ಏನು?
ಮದುವೆ ವಿಷಯ ಹೊರಬೀಳುತ್ತಿದ್ದಂತೆ ಪವಿತ್ರಾ ಲೋಕೇಶ್ ಅವರನ್ನು ಮಾಧ್ಯಮಗಳು ಸಂಪರ್ಕಿಸಲು ಯತ್ನಿಸಿವೆ. ಆದರೆ, ಅವರು ಪೋನ್ ರಿಸೀವ್ ಮಾಡಿಲ್ಲ. ಬದಲಾಗಿ ಮದುವೆ ವಿಚಾರವಾಗಿ ಎದ್ದಿರುವ ಸುದ್ದಿ ಸುಳ್ಳು ಎಂಬುದಾಗಿ ಮಾದ್ಯಮದವರಿಗೆ ಮೆಸೇಜ್ ಮಾಡಿ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನೊಂದು ಕಡೆ ಸುಚೇಂದ್ರ ಪ್ರಸಾದ್ ಕೂಡ 'ಮಾವು-ಬೇವು' ಅನ್ನುವ ಹೊಸ ಸಿನಿಮಾವೊಂದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಪವಿತ್ರಾ ಲೋಕೇಶ್ ಮದುವೆ ವಿಚಾರದ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಿಲ್ಲ. ಸಿನಿಮಾದ ಚಿತ್ರೀಕರಣದ ಬಗ್ಗೆ ಗಮನ ಹರಿಸಿದ್ದಾರೆ. ತಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತಿದ್ದಾರೆ. ಏನೇ ಸ್ಪಷ್ಟೀಕರಣ ಬೇಕಿದ್ದರೂ ಅವರನ್ನೇ ಕೇಳಿಲಿ ಎಂಬ ಭಾವ ಹೊಂದಿದ್ದಾರೆಂದು ಆಪ್ತರೊಬ್ಬರು ತಿಳಿಸಿದ್ದಾರೆ.

ಇನ್ನೂ ವಿಚ್ಛೇದನ ಪಡೆದಿಲ್ಲ
ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಮದುವೆ ವಿಚಾರ ಸದ್ದು ಮಾಡುತ್ತಿದ್ದಂತೆ ಹಲವು ವಿಷಯಗಳು ಚರ್ಚೆಯಲ್ಲಿವೆ. ಸುಚೇಂದ್ರ ಪ್ರಸಾದ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರ ನಡುವೆ ಕಾನೂನು ಬದ್ಧವಾಗಿ ವಿಚ್ಛೇದನ ಪಡೆದಿಲ್ಲ ಎನ್ನಲಾಗಿದೆ. ಒಮ್ಮೆ ವಿಚ್ಛೇದನ ದೊರೆತ ಬಳಿಕ ತೆಲುಗು ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಮಾತು ಕೂಡ ಕೇಳಿಬರುತ್ತಿದೆ. ಆದರೆ, ಈ ಪ್ರಕರಣದ ಬಗ್ಗೆ ಸ್ವತ: ಪವಿತ್ರ ಲೋಕೇಶ್ ಹಾಗೂ ಸುಚೇಂದ್ರ ಪ್ರಸಾದ್ ಇಬ್ಬರೂ ಮುಂದೆ ಬಂದು ಸ್ಪಷ್ಟನೆ ನೀಡಿ, ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುತ್ತಾರಾ ಅನ್ನೋದು ಕಾಲವೇ ಉತ್ತರಿಸಲಿದೆ.