twitter
    For Quick Alerts
    ALLOW NOTIFICATIONS  
    For Daily Alerts

    ನೋಡಿ ಇದಕ್ಕೆ ಕಿಚ್ಚ ಸುದೀಪ್ ಅಂದ್ರೆ ಎಲ್ಲರಿಗೂ ಅಚ್ಚು-ಮೆಚ್ಚು !

    ಕಷ್ಟ ಎಂದು ಬಂದವರಿಗೆ ಹಿಂದೆ-ಮುಂದೆ ನೋಡದೇ ಸಹಾಯ ಮಾಡುವ ಸುದೀಪ್ ಅವರು, ಈ ಬಾರಿಯ ದೀಪಾವಳಿ ಹಬ್ಬದ ಅಂಗವಾಗಿ 28 ಮಂದಿ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಇನ್ನುಮುಂದೆ ಅಷ್ಟೂ ಮಕ್ಕಳ ಖರ್ಚು-ವೆಚ್ಚವನ್ನು ಸುದೀಪ್ ಭರಿಸಲಿದ್ದಾರೆ.

    By Suneetha
    |

    ಸ್ಯಾಂಡಲ್ ವುಡ್ ನ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಅವರು ಎಲ್ಲರಿಗೂ ಇಷ್ಟವಾಗಲು ಪ್ರಮುಖ ಕಾರಣ, ಅವರ ಮಾನವೀಯತೆಯುಳ್ಳ ಗುಣ. ಹಾಗೂ ಅವರು ತಮ್ಮೆಲ್ಲಾ ಅಭಿಮಾನಿಗಳ ನೋವು-ನಲಿವು, ಸಂತಸ-ದುಃಖದ ಸಂದರ್ಭದಲ್ಲಿ ಭಾಗಿಯಾಗಿ, ಅವರ ಸಮಸ್ಯೆಗಳನ್ನು ಆಲಿಸಿ, ಸಾಧ್ಯವಾದರೆ ಸ್ಪಂದಿಸುತ್ತಾರೆ.

    ಈ ನಟನಿಗೆ ಒಂದು ಗ್ರಾಮದಲ್ಲಿ ಪೂಜೆ-ಪುನಸ್ಕಾರ ಕೂಡ ನಡೆಯುತ್ತದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಗ್ಗನಡು ಎಂಬ ಗ್ರಾಮದಲ್ಲಿ, ಇಡೀ ಊರಿಗೆ ಊರೇ ಸುದೀಪ್ ಅವರನ್ನು ದೇವರಂತೆ ಬಿಂಬಿಸಿ, ಅವರ ಫೋಟೋಗೆ ಪೂಜೆ ಸಲ್ಲಿಸುತ್ತಾರೆ.[ಗುಂಡೇಟಿಗೆ ಬಲಿಯಾದ ಉಮೇಶ್ ಗೆ ಕಿಚ್ಚನಿಂದ ಪರಿಹಾರ ಧನ]

    ಇಂತಹ ಅಪರೂಪದ ನಟ ಸುದೀಪ್ ಅವರು ದೀಪಾವಳಿ ಹಬ್ಬದ ವಿಶೇಷ ಸಂದರ್ಭದಲ್ಲಿ, ಎಲ್ಲರೂ ಮೆಚ್ಚಿ ಕೊಂಡಾಡುವ ಕೆಲಸ ಮಾಡಿದ್ದಾರೆ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪಕ್ಕದ ರಾಜ್ಯದಲ್ಲೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಸುದೀಪ್ ಅವರ ಸಮಾಜ ಸೇವೆಯ ಬಗ್ಗೆ ತಿಳಿಯಲು, ಮುಂದೆ ಓದಿ....

    ಕಷ್ಟದಲ್ಲಿರುವವರ ಬಂಧು ಕಿಚ್ಚ

    ಕಷ್ಟದಲ್ಲಿರುವವರ ಬಂಧು ಕಿಚ್ಚ

    ಕಷ್ಟ ಅಂತ ಕೈ ಚಾಚುವ ಅಸಹಾಯಕರಿಗೆ ಸಹಾಯ ಹಸ್ತ ಚಾಚಲು ಸದಾ ಸುದೀಪ್ ಅವರು ತಯಾರಾಗಿರುತ್ತಾರೆ. ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕಿಚ್ಚ ಸುದೀಪ್ ಯಾವಾಗಲೂ ಸದ್ದಿಲ್ಲದೇ ಕಷ್ಟಕಾಲದಲ್ಲಿರುವವರಿಗೆ ಸಹಾಯ ಮಾಡುತ್ತಿರುತ್ತಾರೆ.[ಸ್ಟಾರ್-ವಾರ್, ಮಣ್ಣು-ಮಸಿ ಅಂತ್ಹೇಳಿ ನಟರ ಮಧ್ಯೆ ಹುಳಿ ಹಿಂಡಬೇಡಿ: ಕಿಚ್ಚ]

    ದತ್ತು ಪಡೆದ ಸುದೀಪ್

    ದತ್ತು ಪಡೆದ ಸುದೀಪ್

    ಇದೀಗ ಮತ್ತೆ ಸದ್ದು-ಸುದ್ದಿ ಮಾಡದೇ ಒಂದೊಳ್ಳೆ ಕೆಲಸ ಮಾಡಿದ್ದಾರೆ. ಈ ಬಾರಿ ದೀಪಾವಳಿ ಹಬ್ಬದ ಅಂಗವಾಗಿ 28 ಮಂದಿ ಅನಾಥ ಮಕ್ಕಳನ್ನು ದತ್ತು ಪಡೆದುಕೊಂಡು, ಅವರ ವಿದ್ಯಾಭ್ಯಾಸದ ಖರ್ಚು-ವೆಚ್ಚಗಳನ್ನು ಕಿಚ್ಚ ಸುದೀಪ್ ಅವರು ಭರಿಸಲಿದ್ದಾರೆ.[ಕಿಚ್ಚ ಸುದೀಪ್ ಗೆ 'ದೊಡ್ಡ ಪಾಠ' ಕಲಿಸಿದ 'ಆ' ಸತ್ಯ ಘಟನೆ ಯಾವುದು?]

    ಟ್ವೀಟ್ ಹಂಚಿಕೊಂಡ ಅಭಿನಯ ಚಕ್ರವರ್ತಿ

    ಟ್ವೀಟ್ ಹಂಚಿಕೊಂಡ ಅಭಿನಯ ಚಕ್ರವರ್ತಿ

    ಈ ವಿಚಾರವನ್ನು ಖುದ್ದು ಟ್ವೀಟ್ ಮಾಡುವ ಮೂಲಕ ಸುದೀಪ್ ಹಂಚಿಕೊಂಡಿದ್ದಾರೆ. "28 ಮಕ್ಕಳನ್ನು ದತ್ತು ತೆಗೆದುಕೊಂಡಿರುವುದಲ್ಲದೇ ಕೆಲ ಶಾಲೆಗಳು ಮತ್ತು ಅನಾಥಾಶ್ರಮಗಳನ್ನು ದತ್ತು ತೆಗೆದುಕೊಂಡಿದ್ದೇನೆ. ಈ ಕೆಲಸ ಮುಂದುವರಿಯುತ್ತದೆ', ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.[ಸುದೀಪ್ ಅಸಾಧಾರಣ ಸಾಧನೆಗೆ ನನ್ನದೊಂದು ಸೆಲ್ಯೂಟ್ ಎಂದವರಾರು.?]

    ಇದು ಮೊದಲೇನಲ್ಲಾ

    ಇದು ಮೊದಲೇನಲ್ಲಾ

    ಅಂದಹಾಗೆ ಸುದೀಪ್ ಅವರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಇದು ಮೊದಲೇನಲ್ಲ. ಈ ಮೊದಲು ಕಷ್ಟದಲ್ಲಿರುವ ನಿರ್ಮಾಪಕರಿಗೆ ಸಹಾಯ ಮಾಡುವ ಸಲುವಾಗಿ ಅವರ ನಿರ್ಮಾಣದ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಜೊತೆಗೆ ಮೊನ್ನೆ-ಮೊನ್ನೆ ಕಾವೇರಿ ವಿವಾದದಲ್ಲಿ ಗುಂಡೇಟಿಗೆ ಬಲಿಯಾದ ಉಮೇಶ್ ಅವರ ಕುಟುಂಬಕ್ಕೂ ಸಹಾಯ ಹಸ್ತ ಚಾಚಿದ್ದರು. ಇದೀಗ ಅನಾಥ ಮಕ್ಕಳು ಮತ್ತು ಶಾಲೆಯನ್ನು ದತ್ತು ತೆಗೆದುಕೊಂಡಿದ್ದಾರೆ.

    English summary
    Kannada Actor Sudeep turn out to be guardian of 28 children's. He is taking care of children's from orphans.
    Wednesday, November 2, 2016, 16:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X