ಸುದೀಪ್ 'ಫ್ಯಾಂಟಂ' ಶೀರ್ಷಿಕೆ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದೇನು?
Recommended Video
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್ ನ ಬಹು ನಿರೀಕ್ಷೆ ಸಿನಿಮಾಗೆ 'ಫ್ಯಾಂಟಂ' ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೆ 'ಫ್ಯಾಂಟಂ' ಶೀರ್ಷಿಕೆ ವೈರಲ್ ಆಗಿದೆ. ಕಿಚ್ಚ ಸುದೀಪ್ ಸದ್ಯ 'ಕೋಟಿಗೊಬ್ಬ-3' ಮತ್ತು 'ದಬಾಂಗ್-3' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಈ ಎರಡು ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದಂತೆ ಅನೂಪ್ ಭಂಡಾರಿ ನಿರ್ದೇಶನದ ಚಿತ್ರದಲ್ಲಿ ಭಾಗಿಯಾಗಲಿದ್ದಾರೆ. ಅಂದ್ಹಾಗೆ ಸದ್ಯ 'ಫ್ಯಾಂಟಂ' ಎಂದು ಟೈಟಲ್ ಎಂದು ಟೈಟಲ್ ಇಟ್ಟಿರುವ ಚಿತ್ರದ ಚಿತ್ರೀಕರಣ ಡಿಸೆಂಬರ್ ನಿಂದ ಪ್ರಾರಂಭವಾಗಲಿದೆ. ಅನೂಪ್ ಭಂಢಾರಿ ತಂಡ ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಚಿತ್ರತಂಡ ಟೈಟಲ್ ಅನೌನ್ಸ್ ಮಾಡುವ ಮೊದಲೆ ಚಿತ್ರದ ಟೈಟಲ್ ವೈರಲ್ ಆಗಿರುವುದು ಚಿತ್ರತಂಡಕ್ಕೆ ಅಚ್ಚರಿ ಮೂಡಿಸಿದೆ.
ಈ ಬಗ್ಗೆ ವಿಚಾರಿಸಲು ಫಿಲ್ಮಿ ಬೀಟ್ ಕನ್ನಡ ಟೀಂ ನಿರ್ದೇಶಕ ಅನೂಪ್ ಭಂಡಾರಿ ಅವರನ್ನು ಸಂಪರ್ಕಿಸಿದಾಗ "ಚಿತ್ರಕ್ಕೆ ಟೈಟಲ್ ಇನ್ನು ಫೈನಲ್ ಆಗಿಲ್ಲ. ಎರಡು ಮೂರು ಶೀರ್ಷಿಕೆ ಇದೆ. ಅದರಲ್ಲಿ ಒಂದನ್ನು ಸಧ್ಯದಲ್ಲೇ ಫೈನಲ್ ಮಾಡುತ್ತೇವೆ. ನಂತರ ಅಧಿಕೃತವಾಗಿ ಅನೌನ್ಸ್ ಮಾಡುತ್ತೇವೆ. ಎಂದು ತಿಳಿಸಿದ್ದಾರೆ.

"ಸುದೀಪ್ ಅವರು ಸದ್ಯ 'ಕೋಟಿಗೊಬ್ಬ-3' ಮತ್ತು 'ದಬಾಂಗ್-3' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಆ ಎರಡು ಸಿನಿಮಾಗಳು ಮುಗಿದ ಬಳಿಕ ನಮ್ಮ ಸಿನಿಮಾ ಪ್ರಾರಂಭಿಸುತ್ತೇವೆ. ಚಿತ್ರದ ಮುಖ್ಯ ಕಲಾವಿದರ ಆಯ್ಕೆ ಇನ್ನು ಆಗಿಲ್ಲ. ಎಲ್ಲಾ ಫೈನಲ್ ಆದ ಬಳಿಕ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇವೆ" ಎಂದು ಅನೂಪ್ ಹೇಳಿದ್ದಾರೆ.
ಸಿನಿಮಾ ಚಿತ್ರೀಕರಣ ಪ್ರಾರಂಭವಾಗುವುದು ಇನ್ನು ಎರಡು ತಿಂಗಳಿದೆ. ಈ ಗ್ಯಾಪ್ ನಲ್ಲಿ ಕಿಚ್ಚ ಎರಡು ಸಿನಿಮಾಗಳ ಚಿತ್ರೀಕರಣ ಮುಗಿಸಿ ನಂತರ ಬಿಗ್ ಬಾಸ್ ಸೀಸನ್ 7ನಲ್ಲಿ ಬ್ಯುಸಿಯಾಗಲಿದ್ದಾರೆ. ನಂತರ ಡಿಸೆಂಬರ್ ನಿಂದ ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.


Click it and Unblock the Notifications











