ಅಕ್ಕ-ತಮ್ಮನಂತಿದ್ದ ಸುದೀಪ್ ಮತ್ತು ಸುಮಲತಾ ಈಗ ದೂರ ದೂರ?

By ಫಿಲ್ಮಿಬೀಟ್ ಡೆಸ್ಕ್

Recommended Video

ದೂರಾದ ಸುಮಲತಾ, ಸುದೀಪ್..? | Sumalatha | FILMIBEAT KANNADA

ಕಿಚ್ಚ ಸುದೀಪ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಾಂಧವ್ಯದ ಬಗ್ಗೆ ಎಲ್ಲರಿಗೂ ಗೊತ್ತಿರೋದೆ. ಅಂಬರೀಶ್ ಅವರನ್ನು ತುಂಬ ಇಷ್ಟಪಡುತ್ತಿದ್ದ ವ್ಯಕ್ತಿಗಳಲ್ಲಿ ಸುದೀಪ್ ಕೂಡ ಒಬ್ಬರು. ಅದೇ ರೀತಿ ಸುಮಲತಾ ಅವರ ಜೊತೆಯಲ್ಲೂ ಕಿಚ್ಚನಿಗೆ ಉತ್ತಮ ಆತ್ಮೀಯತೆ ಇತ್ತು. ಅಂಬಿಯನ್ನ ಪ್ರೀತಿಯಿಂದ ಮಾವ ಎನ್ನುತ್ತಿದ್ದ ಸುದೀಪ್, ಸುಮಲತಾ ಅವರನ್ನು ಅಕ್ಕ ಎಂದು ಕರೆಯುತ್ತಿದ್ದರು.

ಅಂಬರೀಶ್ ನಿಧನದ ನಂತರ ಸುದೀಪ್ ಮತ್ತು ಸುಮಲತಾ ನಡುವಿನ ಸಂಬಂಧ ಹಳಸಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಇತ್ತೀಚಿಗೆ ನಡೆಯುತ್ತಿರುವ ಕೆಲವು ವಿದ್ಯಮಾನಗಳನ್ನ ಗಮನಿಸದಾಗ ಸುದೀಪ್ ಮತ್ತು ಸುಮಲತಾ ನಡುವೆ ಅಂತರ ಹೆಚ್ಚಾಗಿದೆ ಎಂಬ ಅನುಮಾನ ಮೂಡುತ್ತಿದೆ. ಅದಕ್ಕೆ ಕೆಲವು ಕಾರಣಗಳು ನಮ್ಮ ಮುಂದಿದೆ.

ಮಂಡ್ಯ ಚುನಾವಣೆ ವೇಳೆ ಆಗಿದ್ದೇನು?

ಮಂಡ್ಯ ಚುನಾವಣೆ ವೇಳೆ ಆಗಿದ್ದೇನು?

ಸುಮಲತಾ ಅವರು ಮಂಡ್ಯ ಚುನಾವಣೆಯಲ್ಲಿ ಸ್ಪರ್ಧಿಸಿದ ವೇಳೆ, ಅಂಬರೀಶ್ ಗೆ ತುಂಬ ಆಪ್ತರಾಗಿದ್ದ ಸುದೀಪ್ ಸುಮಲತಾ ಪರ ಪ್ರಚಾರಕ್ಕೆ ಬಂದೆ ಬರುತ್ತಾರೆ ಎಂದು ಭಾವಿಸಲಾಗಿತ್ತು. ಆದ್ರೆ ಸುದೀಪ್ ಪ್ರಚಾರದಿಂದ ತುಂಬ ದೂರ ಸರಿದಿದ್ದರು. ಸುದೀಪ್ ಯಾಕೆ ಸುಮಲತಾ ಪರ ಪ್ರಚಾರ ಮಾಡಿಲ್ಲ ಎನ್ನುವುದು ಭಾರಿ ಚರ್ಚೆಗೆ ಕಾರಣವಾಗಿತ್ತು.

ನನ್ನ ಅವಶ್ಯಕತೆ ಇಲ್ಲದಿರಬಹುದು

ನನ್ನ ಅವಶ್ಯಕತೆ ಇಲ್ಲದಿರಬಹುದು

ಪ್ರಚಾರದ ಬಗ್ಗೆ ಖಾಸಗಿ ವಾಹಿನಿಯಲ್ಲಿ ಮಾತನಾಡಿದ್ದ ಸುದೀಪ್ 'ನಾನು ಯಾವತ್ತು ಬರ್ತೀನಿ ಅಂತ ಮಾತು ಕೊಟ್ಟು, ಮಾತು ತಪ್ಪಿದವನಲ್ಲ. ನನ್ನ ಅವಶ್ಯಕತೆ ಅಲ್ಲಿ ಇಲ್ಲ ಅಂತ ಅನಿಸಿತು ಎಂದು ಹೇಳಿದ್ದಾರೆ. "ಚುನಾವಣೆಗೆ ನಿಂತ ನಂತರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರೆ ಹೋಗಿ ಮಾಡಿದ್ರು. ಅವಾಗ ಅವರು ನನ್ನನ್ನು ಕರೆಯಲಿಲ್ಲ. ಆದ್ರೆ ಕರೆಯಲಿಲ್ಲ ಎನ್ನುವುದು ನನಗೆ ತಲೆಗೆ ಬಂದಿಲ್ಲ. ಆದ್ರೆ ನನಗೆ ಅನಿಸಿತು ನನ್ನ ಅವಶ್ಯಕತೆ ಅಲ್ಲಿ ಇಲ್ಲ ಎನ್ನುವುದು ಎಂದು ಸುದೀಪ್ ಹೇಳಿದ್ದರು.

ತೊಂದರೆ ನೀಡಲು ಇಷ್ಟ ಪಡುವುದಿಲ್ಲ

ತೊಂದರೆ ನೀಡಲು ಇಷ್ಟ ಪಡುವುದಿಲ್ಲ

"ಪ್ರಚಾರಕ್ಕೆ ಬನ್ನಿ ಎಂದು ಯಾರನ್ನು ಕರೆದಿಲ್ಲ. ಸುದೀಪ್ ಅವರು ನನ್ನ ಒಳ್ಳೆಯ ಫ್ರೆಂಡ್. ಅವರು ತಾವೇ ಇಷ್ಟ ಪಟ್ಟು ಪ್ರಚಾರದಲ್ಲಿ ಭಾಗಿಯಾದರೆ ನಾನು ಸ್ವಾಗತ ಮಾಡುತ್ತಾನೆ. ನಾನು ಸುದೀಪ್ ಅವರಿಗೆ ತೊಂದರೆ ನೀಡಲು ಇಷ್ಟ ಪಡುವುದಿಲ್ಲ. ಸುದೀಪ್ ಇಷ್ಟ ಇದ್ದರೆ ಬರಬಹುದು. ಆದರೆ, ನಮ್ಮ ಅವರ ಸಂಬಂಧ ರಾಜಕೀಯವನ್ನು ಮೀರಿದ್ದು. ನಾನು ಇದನ್ನು ರಾಜಕೀಯವಾಗಿ ನೋಡಲು ಇಷ್ಟ ಪಡುವುದಿಲ್ಲ" ಎಂದು ಹೇಳಿದ್ದರು. ಆದರೂ ಸುದೀಪ್ ಪ್ರಚಾರ ಮಾಡ್ತಾರೆ ಎಂಬ ನಿರೀಕ್ಷೆ ಇತ್ತು.

ಸುದೀಪ್ ಹುಟ್ಟುಹಬ್ಬಕ್ಕೆ ಶುಭ ಕೋರಿಲ್ಲ

ಸುದೀಪ್ ಹುಟ್ಟುಹಬ್ಬಕ್ಕೆ ಶುಭ ಕೋರಿಲ್ಲ

ಚುನಾವಣೆಯ ನಂತರ ಸುದೀಪ್ ಮತ್ತು ಸುಮಲತಾ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಅಚ್ಚರಿ ಸಂಗತಿ ಅಂದ್ರೆ ಸುಮಲತಾ ಈ ಬಾರಿ ಸುದೀಪ್ ಹುಟ್ಟುಹಬ್ಬಕ್ಕು ಸೋಶಿಯಲ್ ಮೀಡಿಯಾದಲ್ಲಿ ಶುಭಕೋರಿಲ್ಲ. ಪ್ರತಿವರ್ಷ ಸುಮಲತಾ, ಸುದೀಪ್ ಹುಟ್ಟುಹಬ್ಬಕ್ಕೆ ಶುಭಕೋರುತ್ತಿದ್ದರು. ಆದ್ರೆ ಈ ಬಾರಿ ಸುಮಲತಾ ಅವರ ಶುಭಾಶಯದ ಪೋಸ್ಟ್ ಕಂಡು ಬಂದಿಲ್ಲ.

ಪೈಲ್ವಾನ್ ಬಗ್ಗೆ ಒಂದೇ ಒಂದು ಮಾತಿಲ್ಲ

ಪೈಲ್ವಾನ್ ಬಗ್ಗೆ ಒಂದೇ ಒಂದು ಮಾತಿಲ್ಲ

ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ರಿಲೀಸ್ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡರು, ಈ ಬಗ್ಗೆ ಸುಮಲತಾ ಒಂದು ಮಾತನ್ನು ಆಡಿಲ್ಲ. ಸಾಮಾನ್ಯವಾಗಿ ಸುಮಲತಾ ತೀರ ಆಪ್ತರ ಸಿನಿಮಾಗಳ ಬಗ್ಗೆ ಟ್ವಿಟರ್ ನಲ್ಲಿ ವಿಶ್ ಮಾಡುತ್ತಾರೆ. ಅಲ್ಲದೆ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದ್ರೆ ಪೈಲ್ವಾನ್ ವಿಚಾರದಲ್ಲಿ ಹಾಗೆ ಮಾಡಿಲ್ಲ. ಸಿನಿಮಾದ ಬಗ್ಗೆ ಸುಮಲತಾ ಯಾವ ಪ್ರತಿಕ್ರಿಯೆಯನ್ನು ನೀಡಿಲ್ಲ ಯಾಕೆ ಎಂಬುದು ಸಹಜವಾಗಿ ಕಾಡುವ ಪ್ರಶ್ನೆ.

ಸುಮಲತಾ ಬರ್ತಡೇಗೆ ಟ್ವೀಟ್ ಮಾಡಿದ್ದ ಸುದೀಪ್

ಸುಮಲತಾ ಬರ್ತಡೇಗೆ ಟ್ವೀಟ್ ಮಾಡಿದ್ದ ಸುದೀಪ್

ಸುಮಲತಾ ಅವರ ಹುಟ್ಟುಹಬ್ಬಕ್ಕೆ ಸುದೀಪ್ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದರು. ಪ್ರತಿ ಬಾರಿಯೂ ಸುದೀಪ್, ಸುಮಲತಾ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಾರೆ. ಸುಮಲತಾ ಪರ ಚುನಾವಣೆ ಪ್ರಚಾರಕ್ಕೆ ಹೋಗಿಲ್ಲ ಎಂದರು ಸುಮಲತಾ ಅವರಿಗೆ ಸುದೀಪ್ ಟ್ವಿಟರ್ ನಲ್ಲಿಯೆ ವಿಶ್ ಮಾಡಿ ಶುಭಾಶಯ ತಿಳಿಸಿದ್ದರು. ಅದಕ್ಕೆ ಸುಮಲತಾ ಕೂಡ ಥ್ಯಾಂಕ್ಸ್ ಹೇಳಿದ್ದರು.

ದರ್ಶನ್-ಸುದೀಪ್ ಮತ್ತು ಸುಮಲತಾ?

ದರ್ಶನ್-ಸುದೀಪ್ ಮತ್ತು ಸುಮಲತಾ?

ಈಗಿರುವ ಪರಿಸ್ಥಿತಿಯಲ್ಲಿ ದರ್ಶನ್ ಮತ್ತು ಕಿಚ್ಚನ ಮಧ್ಯ ಸುಮಲತಾ ಮಧ್ಯಪ್ರವೇಶಿಸಿ ಸಂಧಾನ ಮಾಡಿಸಬಹುದು ಎಂಬ ನಿರೀಕ್ಷೆಯೂ ಇದೆ. ಆದರೆ, ಸುಮಲತಾ ಮತ್ತು ಸುದೀಪ್ ನಡುವಿನ ಸಂಬಂಧದಲ್ಲಿ ಅಂತರ ಹೆಚ್ಚಾಗಿದೆ ಎಂಬುದು ಇದು ಸಾಧ್ಯನಾ ಎಂಬ ಅನುಮಾನವನ್ನ ತರಿಸಿದೆ. ಮತ್ತೊಂದೆಡೆ ಮಂಡ್ಯೆ ಸಂಸದೆಯಾಗಿರುವ ಸುಮಲತಾ ಅವರಿಗೆ ಈಗ ಹೆಚ್ಚಿನ ಜವಾಬ್ದಾರಿ ಇದ್ದು, ಆ ಕೆಲಸಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಿರಬಹುದು ಎನ್ನುವುದನ್ನ ಕೂಡ ಅಲ್ಲೆಗಳೆಯುವಂತಿಲ್ಲ.

More from Filmibeat

English summary
Kannada actor Sudeep and Sumalatha relationship may breakup.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X