ಕಪಿಲ್ ಶರ್ಮ ಶೋನಲ್ಲಿ 'ಪೈಲ್ವಾನ್' ತಂಡ

Recommended Video

Pailwaan :ಕಪಿಲ್ ಶರ್ಮ ಶೋನಲ್ಲಿ 'ಪೈಲ್ವಾನ್' ತಂಡ | FILMIBEAT KANNADA

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ಪೈಲ್ವಾನ್ ಸಿನಿಮಾದ ಪ್ರಮೋಷನ್ ಭರ್ಜರಿಯಾಗಿ ನಡೆಯುತ್ತಿದೆ. ಪೈಲ್ವಾನ್ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಐದು ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ.

ಹಾಗಾಗಿ ಕಿಚ್ಚ ಅಂಡ್ ಟೀಂ ಈಗ ಪರಭಾಷೆ ನೆಲದಲ್ಲಿ ನಿಂತು ಪೈಲ್ವಾನ್ ಚಿತ್ರದ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಸುದೀಪ್ ಗೆ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದ ಪರಿಚಯವಿದೆ. ಎಲ್ಲಾ ಭಾಷೆಯಲ್ಲೂ ಅಭಿನಯಿಸಿರುವ ಕಿಚ್ಚನಿಗೆ ಪರಭಾಷೆ ನೆಲದಲ್ಲಿ ನಿಂತು ಪ್ರಚಾರ ಮಾಡುವುದು ಅಷ್ಟು ಕಷ್ಟವೆನಿಸುವುದಿಲ್ಲ.

ಸದ್ಯ ಬಾಲಿವುಡ್ ನಲ್ಲಿ ಪ್ರಚಾರ ಮಾಡುತ್ತಿರುವ ಚಿತ್ರತಂಡ ಹಿಂದಿಯ ಖ್ಯಾತ ಕಪಿಲ್ ಶರ್ಮ ಕಾಮಿಡಿ ಶೋನಲ್ಲಿ ಭಾಗಿಯಾಗಿ ಪ್ರಚಾರ ಮಾಡಿದೆ. ಕಿಚ್ಚ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಇಬ್ಬರು ಕಪಿಲ್ ಶರ್ಮ ಶೋನಲ್ಲಿ ಭಾಗಿಯಾಗಿದ್ದಾರೆ. ವಿಶೇಷ ಅಂದ್ರೆ ಸುದೀಪ್ ಗೆ ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಕೂಡ ಸಾಥ್ ನೀಡಿದ್ದಾರೆ.

Kannada Actor Sudeep And Team In Kapil Sharma Show To Promote Pailwan

ಶೋನಲ್ಲಿ ಭಾಗಿಯಾದ ಒಂದಿಷ್ಟು ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸುದೀಪ್ ಈ ಹಿಂದೆ ಕೂಡ ಕಪಿಲ್ ಶರ್ಮ ಶೋನಲ್ಲಿ ಭಾಗಿಯಾಗಿದ್ದರು. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ತಂಡದ ಜೊತೆ ಕಿಚ್ಚ ಕಪಿಲ್ ಶರ್ಮ ಶೋನಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಪೈಲ್ವಾನ್ ಗಾಗಿ ಕಪಲ್ ಶರ್ಮ ಜೊತೆ ಕಾಣಿಸಿಕೊಂಡಿದ್ದಾರೆ.

ಅಂದ್ಹಾಗೆ ಪೈಲ್ವಾನ್ ಸದ್ಯ ಟ್ರೈಲರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಪೈಲ್ವಾನ್ ಮುಂದಿನ ತಿಂಗಳು 12ಕ್ಕೆ ತೆರೆಗೆ ಬರುತ್ತಿದೆ. ಇನ್ನುಳಿದ ದಿನಗಳಲ್ಲಿ ಪೈಲ್ವಾನ್ ಟೀಂ ಎಲ್ಲಾ ಭಾಷೆಯಲ್ಲೂ ಪ್ರಮೋಷನ್ ಮಾಡುವಲ್ಲಿ ಬ್ಯುಸಿಯಾಗಿರಲಿದೆ.

More from Filmibeat

English summary
Kannada actor Sudeep and team were involved in Hindi famous Kapil Sharma show to promote Pailwan film. Pailwan will set to release in September 12th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X