ಅಭಿಮಾನಿಯಾಗಿ ವಿಷ್ಣುದಾದಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸುದೀಪ್
ನಿರ್ದೇಶಕ ಕೋಡಿ ರಾಮಕೃಷ್ಣ ಆಕ್ಷನ್-ಕಟ್ ಹೇಳುತ್ತಿರುವ, ಲಕ್ಕಿ ಸ್ಟಾರ್ ರಮ್ಯಾ ಮತ್ತು ದೂದ್ ಪೇಡಾ ದಿಗಂತ್ ಒಂದಾಗಿ ಕಾಣಿಸಿಕೊಳ್ಳುತ್ತಿರುವ 'ನಾಗರಹಾವು' ಚಿತ್ರ ದಿನದಿಂದ ದಿನಕ್ಕೆ ಸಾಕಷ್ಟು ಸುದ್ದಿ ಮಾಡುತ್ತಿದೆ.
ಅಭಿನಯ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಅವರು ಡಿಜಿಟಲ್ ರೂಪದಲ್ಲಿ ಅಭಿನಯಿಸುತ್ತಿರುವ 'ನಾಗರಹಾವು' ಚಿತ್ರದ 3D ಸ್ಟ್ಯಾಂಡ್ ಇತ್ತೀಚೆಗೆ ಅನಾವರಣಗೊಂಡಿದ್ದು, ಅದರ ಎದುರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸ್ಪರ್ಧೆಯನ್ನು ಚಿತ್ರತಂಡ ಏರ್ಪಡಿಸಿತ್ತು.[ವಿಷ್ಣುದಾದಾ' ಜೊತೆ 'ಜಗ್ಗುದಾದಾ', ಗಣಿ, ಪ್ರೇಮ್ ಸೂಪರ್ ಸೆಲ್ಫಿ.!]
ಇದಕ್ಕೆ ಸ್ಯಾಂಡಲ್ ವುಡ್ ಸ್ಟಾರ್ ನಟ-ನಟಿಯರು ಹೆಚ್ಚಿನ ಪ್ರಚಾರ ನೀಡುವ ಸಲುವಾಗಿ ವಿಷ್ಣುದಾದಾ ಅವರ 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಸಾಲಿಗೆ ಇದೀಗ ಹೊಸ ಸೇರ್ಪಡೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ನಟಿ ತೇಜಸ್ವಿನಿ ಪ್ರಕಾಶ್. ಹೌದು ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಮಾಲ್ ಗೆ ಭೇಟಿ ನೋಡಿ ಡಾ.ವಿಷ್ಣುವರ್ಧನ್ ಅವರ 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಒಬ್ಬ ಅಭಿಮಾನಿಯಂತೆ ಫೀಲ್ ಮಾಡಿಕೊಂಡಿದ್ದಾರೆ.['ನಾಗರಹಾವು' ಚಿತ್ರಕ್ಕೆ ಸ್ಯಾಂಡಲ್ ವುಡ್ ತಾರೆಯರ ಬೆಂಬಲ]
ಇನ್ನು ನಟಿ ತೇಜಸ್ವಿನಿ ಅವರು ಕೂಡ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟಿದ್ದು, ಜೊತೆಗೆ ವಿಷ್ಣು ಅವರ ಜೊತೆ 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ, ಚಿರಋಣಿ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಲವ್ಲಿ ಸ್ಟಾರ್ ಪ್ರೇಮ್, ಗೋಲ್ಡನ್ ಸ್ಟಾರ್ ಗಣೇಶ್, 'ಉಗ್ರಂ' ನಟ ಶ್ರೀಮುರಳಿ, ಕಾಮಿಡಿ ನಟ ಶರಣ್, ಮಾಸ್ಟರ್ ಆನಂದ್, ನಭಾ ನಟೇಶ್ ಮುಂತಾದವರು ವಿಷ್ಣು ಅವರ 3D ಸ್ಟ್ಯಾಂಡ್ ಮುಂದೆ ಈಗಾಗಲೇ ಸೆಲ್ಫಿ ಕ್ಲಿಕ್ಕಿಸಿ 'ನಾಗರಹಾವು' ಚಿತ್ರತಂಡಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಚಾರ ನೀಡಿದ್ದಾರೆ.[ವಿಷ್ಣು ಅವರ 3D ಪೋಸ್ಟರ್ ಮುಂದೆ ಸೆಲ್ಫಿ ಕ್ಲಿಕ್ಕಿಸಿ ಆಕರ್ಷಕ ಬಹುಮಾನ ಗೆಲ್ಲಿ]
ಹೆಚ್ಚಿನ ಮಾಲ್ ಗಳಲ್ಲಿ ಸಾಹಸಸಿಂಹ ಡಾ.ವಿಷ್ಣು ರವರ 'ನಾಗರಹಾವು' 3D ಸ್ಟ್ಯಾಂಡ್ ಇಡಲಾಗಿದೆ. ಅದರ ಮುಂದೆ ನಿಂತು ಸೂಪರ್ ಸೆಲ್ಫಿ ಕ್ಲಿಕ್ ಮಾಡಿ, 8277127001 ನಂಬರ್ ಗೆ ವಾಟ್ಸ್ ಆಪ್ ಮಾಡಿ, ಸೂಕ್ತ ಬಹುಮಾನ ಗೆಲ್ಲಿ. 3D ಸ್ಟ್ಯಾಂಡ್ ಮುಂದೆ ಸ್ಟಾರ್ ಸೆಲ್ಫಿ ಚಿತ್ರಗಳನ್ನು ನೋಡಿ ಕೆಳಗಿನ ಸ್ಲೈಡುಗಳಲ್ಲಿ...
-3D ಸ್ಟ್ಯಾಂಡಿ ಮುಂದೆ ಕಿಚ್ಚ ಸುದೀಪ್ ಸೆಲ್ಫಿ
-3D ಸ್ಟ್ಯಾಂಡಿ ಮುಂದೆ ಕಿಚ್ಚ ಸುದೀಪ್ ಫೋಸ್
-3D ಸ್ಟ್ಯಾಂಡಿ ಮುಂದೆ ಕಿಚ್ಚ ಸುದೀಪ್ ಫೋಸ್
-3D ಸ್ಟ್ಯಾಂಡಿ ಮುಂದೆ ಕಿಚ್ಚ ಸುದೀಪ್
-'ರಾಜಾಹುಲಿ', 'ಗಜಪಡೆ' ಖ್ಯಾತಿ ನಟ ಹರ್ಷ
-ಕನ್ನಡ ನಟ ಪೆಟ್ರೋಲ್ ಪ್ರಸನ್ನ
-'ರಾಜಾಹುಲಿ', 'ಗಜಪಡೆ' ಖ್ಯಾತಿ ನಟ ಹರ್ಷ
-ಕನ್ನಡ ನಟ ಜೆಕೆ ಅಲಿಯಾಸ್ ಜಯ್ ಕಾರ್ತಿಕ್
-'ಅಶ್ವಿನಿ ನಕ್ಷತ್ರ' ಖ್ಯಾತಿಯ ಕನ್ನಡ ನಟಿ ಮಯೂರಿ
-ಕನ್ನಡ ನಟ ನವೀನ್ ಕೃಷ್ಣ
-ನಟ ತಿಲಕ್, ಆರ್ ಜೆ ರಶ್ಮಿ, ಆರ್.ಜೆ ರೋಹಿತ್, ನಟ ಗುರುನಂದನ್, ನಟ ಬುಲೆಟ್ ಪ್ರಕಾಶ್, ನಟ ಅಕುಲ್ ಬಾಲಾಜಿ
-ಕನ್ನಡ ನಟಿ ತೇಜಸ್ವಿನಿ ಪ್ರಕಾಶ್
-ಕನ್ನಡ ನಟಿ ತೇಜಸ್ವಿನಿ ಪ್ರಕಾಶ್
-ವಿಷ್ಣುದಾದಾ ಅಭಿಮಾನಿ


Click it and Unblock the Notifications











