ಟ್ವಿಟ್ಟರ್ ಬ್ಯ್ಲೂ ರೂಮ್ ನಲ್ಲಿ ಸುದೀಪ್: ಅಭಿಮಾನಿಗಳಿಂದ ಬಂದ ಪ್ರಶ್ನೆಗಳು ಹೇಗಿದ್ದವು ಗೊತ್ತಾ?

ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟ. ಸಾಮಾಜಿಕ ಜಾಲತಾಣಗಳ ಮೂಲಕವೆ ಅಭಿಮಾನಿಗಳಿಗೆ ತುಂಬ ಹತ್ತಿರವಾಗಿರುವ ಕಿಚ್ಚ ಇತ್ತೀಚಿಗೆ ಟ್ವಿಟ್ಟರ್ ಇಂಡಿಯಾ ಬ್ಲ್ಯೂ ರೂಮ್ ಮೂಲಕ ಲೈವ್ ಬಂದಿದ್ದರು. ಪೈಲ್ವಾನ್ ಚಿತ್ರದ ಬಗ್ಗೆ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಲು ಆಸ್ಕ್ ಪೈಲ್ವಾನ್ ಹೆಸರಿನಲ್ಲಿ ಪ್ರಶ್ನೆ ಕೇಳಿ ಎಂದು ಹೇಳಿದ್ದರು.

ಕಿಚ್ಚ ಅಭಿಮಾನಿಗಳಿಗೆ ಪೈಲ್ವಾನ್ ಬಗ್ಗೆ ಪ್ರಶ್ನೆ ಕೇಳಿ ಅಂದಿದ್ದೆ ತಡ ಅಭಿಮಾನಿಗಳಿಂದ ಚಿತ್ರ ವಿಚಿತ್ರ ಪ್ರಶ್ನೆಗಳು ಹರಿದು ಬರಲು ಶುರುವಾದವು. ಅಭಿಮಾನಿಗಳ ಕ್ರೇಜಿ ಪ್ರಶ್ನೆಗಳಿಗೆ ಕಿಚ್ಚ ಕೂಡ ಅಷ್ಟೆ ಸಮಾಧಾನದಿಂದ ಉತ್ತರಿಸಿದ್ದಾರೆ.

ಪ್ರಶ್ನೆಗೆ ಉತ್ತರಿಸಿಲ್ಲ ಅಂದ್ರೆ ನಾನು ಮಲಗುತ್ತೇನೆ

ಪ್ರಶ್ನೆಗೆ ಉತ್ತರಿಸಿಲ್ಲ ಅಂದ್ರೆ ನಾನು ಮಲಗುತ್ತೇನೆ

ಕಿಚ್ಚ ಸುದೀಪ್ ಗೆ ಅನೇಕ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯೆ ಹರಿಸುತ್ತಿದ್ದರು. ಆದ್ರೆ ಕೆಲವೊಂದು ಪ್ರಶ್ನೆಗಳಿಗೆ ಮಾತ್ರ ಉತ್ತರಿಸುತ್ತಿದ್ದ ಸುದೀಪ್ ಗೆ ಅಭಿಮಾನಿಯೊಬ್ಬ "ನೀವು ನನ್ನ ಪ್ರಶ್ನೆಗೆ ಉತ್ತರಿಸದಿದ್ದರೆ ನಾನು ಮಲಗುತ್ತೇನೆ" ಎಂದು ಹೇಳಿದ್ದರು. ಅಭಿಮಾನಿಯ ಮಾತಿಗೆ ಸುದೀಪ್ "ನೀನು ಪುಣ್ಯಾತ್ಮ ಕಣಯ್ಯ. ನಾನು ಬಿಡುವಿಲ್ಲದ ಕೆಲಸದ ನಡುವೆ ಸ್ವಲ್ಪ ನಿದ್ದೆ ಮಾಡಲು ಹೆಣಗಾಡುತ್ತಿದ್ದೀನಿ. ನೀನು ಮೊದಲು ಅದನ್ನು ಮಾಡು" ಎಂದು ತಮಾಷೆಯಾಗಿಯೆ ಉತ್ತರಿಸಿದ್ದರು.

ದಯವಿಟ್ಟು ನನಗೊಂದು ವಾಚ್ ಮತ್ತು ಶರ್ಟ್ ಕೊಡಿ

ದಯವಿಟ್ಟು ನನಗೊಂದು ವಾಚ್ ಮತ್ತು ಶರ್ಟ್ ಕೊಡಿ

ಸುದೀಪ್ ಸರ್ ನಿಮ್ಮ ಕೆಲಸಕ್ಕೆ ಹ್ಯಾಟ್ಸಾಫ್. ನಾನು ನಿಮ್ಮನ್ನ ಭೇಟಿಯಾದಾಗ ದಯವಿಟ್ಟು ನನಗೊಂದು ವಾಚ್, ಶರ್ಟ್ ಮತ್ತು ಗಾಗಲ್ ಕೊಡಿ ನಿಮ್ಮ ನೆನಪಿಗೆ" ಎಂದು ಕೇಳಿದ ಅಭಿಮಾನಿಗೆ ಸುದೀಪ್ "ಇದು ನನಗೆ ಶಾಪಿಂಗ್ ರೀತಿ ಕೇಳಿಸಿತು" ಎಂದು ಹೇಳಿದ್ದಾರೆ.

ನೀವು ಹುಡುಗಿಯ ಪ್ರಶ್ನೆಗೆ ಮಾತ್ರ ಉತ್ತರಿಸುತ್ತೀರಾ?

ನೀವು ಹುಡುಗಿಯ ಪ್ರಶ್ನೆಗೆ ಮಾತ್ರ ಉತ್ತರಿಸುತ್ತೀರಾ?

ಪೈಲ್ವಾನ್ ಬಗ್ಗೆ ಪ್ರಶ್ನೆ ಕೇಳಿ ಆಂದ್ರೆ ಅಭಿಮಾನಿಗಳು ಪ್ರಶ್ನೆಗಳು ಬೇರೆಯದ್ದೆ ಆಗಿದ್ದವು. "ಬಾಸ್ ನೀವು ಹುಡುಗಿಯ ಪ್ರಶ್ನೆಗೆ ಮಾತ್ರ ಉತ್ತರಿಸುತ್ತೀರಾ" ಎಂದು ಅಭಿಮಾನಿಯೊಬ್ಬ ನಿರಾಸೆಯಿಂದ ಪ್ರಶ್ನೆ ಹಾಕಿದ್ದರು. ಅದಕ್ಕೆ ಸುದೀಪ್ "ನೀವು ಕೇಳಿದ ಪ್ರಶ್ನೆ ಸರಿ ಎನಿಸುತ್ತಾ" ಎಂದು ಅಭಿಮಾನಿಗೆ ಪ್ರತಿಕ್ರಿಯೆ ನೀಡಿದ್ದರು.

ನೀವು ಯಾಕೆ ಯಾವಾಗಲು ಪುಲ್ಲೋವರ್ ಮಾತ್ರ ಧರಿಸುತ್ತೀರಾ?

ನೀವು ಯಾಕೆ ಯಾವಾಗಲು ಪುಲ್ಲೋವರ್ ಮಾತ್ರ ಧರಿಸುತ್ತೀರಾ?

ಸ್ಯಾಂಡಲ್ ವುಡ್ ಸ್ಟೈಲಿಶ್ ನಟ ಕಿಚ್ಚನಿಗೆ ಅಭಿಮಾನಿಯೊಬ್ಬರು" ಇತ್ತೀಚಿನ ದಿನಗಳಲ್ಲಿ ನೀವು ಕೇವಲ ಕಪ್ಪು ಮತ್ತು ಬಿಳಿ ಬಣ್ಣದ ಪುಲ್ಲೋವರ್ ಮಾತ್ರ ಧರಿಸುತ್ತಿದ್ದೀರಿ. ಇದರ ಹಿಂದೆ ಏನಾದ್ರು ರಹಸ್ಯ ಇದಿಯಾ? ಎಂದು ಕೇಳಿದ್ದಾರೆ. ಇದಕ್ಕೆ "ಇಂತಹ ಬಟ್ಟೆ ಧರಿಸಲು ತುಂಬ ಸುಲಭ ಮತ್ತು ಏನು ಧರಿಸಬೇಕಂದು ಯೋಚಿಸಲು ಹೆಚ್ಚು ಸಮಯ ಹಿಡಿಯುವುದಿಲ್ಲ" ಹೇಳಿದ್ದಾರೆ.

ಸೂಪರ್ ಹೀರೋ ಪಾತ್ರದಲ್ಲಿ ಯಾವಾಗ ನೋಡಬಹುದು?

ಸೂಪರ್ ಹೀರೋ ಪಾತ್ರದಲ್ಲಿ ಯಾವಾಗ ನೋಡಬಹುದು?

"ಇದು ನನ್ನ ಮನವಿ. ನಿಮ್ಮನ್ನ ಸೂಪರ್ ಹೀರೋ ಪಾತ್ರದಲ್ಲಿ ಯಾವಾಗ ನೋಡುವುದು. ಎಲ್ಲಾ ಅಭಿಮಾನಿಗಳ ಕನಸಿದು? ಎಂದು ಅಭಿಮಾನಿಯೊ ಕೇಳಿದ ಪ್ರಶ್ನೆಗೆ ಸುದೀಪ್ "ಒಂದು ದಿನ ಆ ಪಾತ್ರದಲ್ಲು ಕಾಣಿಸಿಕೊಳ್ಳಬಹುದು" ಎಂದಿದ್ದಾರೆ. ಹೀಗೆ ಅಭಿಮಾನಿಗಳಿಂದ ತರಹೇವಾರಿ ಪ್ರಶ್ನೆಗಳು ಹರಿದು ಬಂದಿವೆ. ಕಿಚ್ಚ ಅಭಿಮಾನಿಗಳ ಪ್ರಶ್ನೆಗಳಿಗೆ ಅಷ್ಟೆ ಸಮಾಧಾನವಾಗಿ ಅಷ್ಟೆ ತಮಾಷೆಯಿಂದ ಉತ್ತರಿಸಿದ್ದಾರೆ.

More from Filmibeat

English summary
Kannada actor Sudeep answer to his Fans question on twitter blue room live.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X