Just In
Don't Miss!
- News
ಜನರಲ್ಲಿ ಹೊಸ ಕನಸು ಬಿತ್ತಿದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ
- Finance
ಅಸ್ಸಾಂನಲ್ಲಿ ಚಿಕನ್ ಕೇಜಿಗೆ 500 ರುಪಾಯಿ, ಈರುಳ್ಳಿಗೆ 250 ರುಪಾಯಿ
- Technology
ಎಂಆಧಾರ್ ಆಪ್ ಅಪ್ಡೇಟ್ ಮಾಡಿ, ಹೆಚ್ಚಿನ ಸೇವೆ ಆನಂದಿಸಿ..!
- Sports
ಏಕದಿನ ಸರಣಿ; ಭಾರತದ ಟಾಪ್ ಆರ್ಡರ್ ವಿಕೆಟ್ ಕಿತ್ತು ಸಂಭ್ರಮಿಸಿದ ವಿಂಡೀಸ್ ಬೌಲರ್ಸ್; live ಸ್ಕೋರ್
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Lifestyle
ವಾರ ಭವಿಷ್ಯ- ಡಿಸೆಂಬರ್ 15ರಿಂದ ಡಿಸೆಂಬರ್ 21ರ ತನಕ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಗೋಲ್ಡನ್ ಸ್ಟಾರ್ ಗಣೇಶ್ ಗೆ ಕಿಚ್ಚ ಸುದೀಪ್ ಶುಭಾಶಯ ತಿಳಿಸಿದ್ದೇಕೆ?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಕೋಟಿಗೊಬ್ಬ-3 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪೈರಸಿ ಸಮಸ್ಯೆಯ ನಡುವೆಯು ಪೈಲ್ವಾನ್ ಸಕ್ಸಸ್ ನ ಖುಷಿಯಲ್ಲಿರುವ ಕಿಚ್ಚ, ಗೋಲ್ಡನ್ ಸ್ಟಾರ್ ಗಣೇಶ್ ಗೆ ಶುಭಕೋರಿದ್ದಾರೆ. ಕಿಚ್ಚನ ಮಾತುಗಳನ್ನು ಕೇಳಿ ಗಣಿ ಧನ್ಯವಾದ ತಿಳಿಸಿದ್ದಾರೆ.
ಗಣೇಶ್ ಅಭಿನಯದ ಗೀತಾ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇದೆ ತಿಂಗಳು 27ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ಸಿನಿಮಾ ರಿಲೀಸ್ ನ ಬ್ಯುಸಿಯಲ್ಲಿರುವ ಗಣಿಗೆ, ಸುದೀಪ್ ಬೆಸ್ಟ್ ವಿಶಸ್ ತಿಳಿಸಿದ್ದಾರೆ. "ಚಿತ್ರದ ಟ್ರೈಲರ್ ಉತ್ತಮ ಮಾಡಿದೆ. ಚಿತ್ರದ ಕಾನ್ಸೆಪ್ಟ್ ತುಂಬ ಕುತೂಹಲಕಾರಿಯಾಗಿದೆ. ಇದೆ ತಿಂಗಳು 27ಕ್ಕೆ ತೆರೆಗೆ ಬರುತ್ತಿರುವ ಗೀತಾ ಸಿನಿಮಾಗೆ ಮತ್ತು ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ" ಎಂದು ಟ್ವೀಟ್ ಮಾಡಿದ್ದಾರೆ.
ದಶಕದ ಜೊತೆಗಾರರಿಗೆ ಧನ್ಯವಾದ ತಿಳಿಸಿದ ಸುದೀಪ್
ಕಿಚ್ಚನ ಟ್ವೀಟ್ ಗೆ ಗಣಿ ಕೂಡ ಧನ್ಯವಾದ ತಿಳಿಸಿದ್ದಾರೆ. ಈ ಮೊದಲು ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾಗೆ ಗಣೇಶ್ ಶುಭಕೋರಿದ್ದರು. ಇತ್ತೀಚಿನ ದಿನಗಳಲ್ಲಿ ಒಬ್ಬ ಸ್ಟಾರ್ ನಟನ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಮತ್ತೊಬ್ಬ ಸ್ಟಾರ್ ನಟ ಶುಭಕೋರುವುದು ಹೆಚ್ಚಾಗುತ್ತಿದೆ.
ಗೀತಾ ಸಿನಿಮಾ ಕನ್ನಡಪರ ಹೋರಾಟ ಮತ್ತು ಚಳುವಳಿಯ ಬಗ್ಗೆ ಇದೆ. ಗಣೇಶ್ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿಜಯ್ ನಾಗೇಂದ್ರ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರು ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಮೂಲಕ ನಿರೀಕ್ಷೆ ಮೂಡಿಸಿರುವ ಗೀತಾ ಹೇಗಿರಲಿದೆ ಎನ್ನುವುದು 27ಕ್ಕೆ ಗೊತ್ತಾಗಲಿದೆ.