ಅಪ್ಪಟ ಅಭಿಮಾನಿ ಆರ್ಯ ನಿಧನಕ್ಕೆ ಕಂಬನಿ ಮಿಡಿದ ಕಿಚ್ಚ ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಪರ ಅಪ್ಪಟ ಅಭಿಮಾನಿ ಪುನೀತ್ ಆರ್ಯ ಇಂದು ಇಹಲೋಕ ತ್ಯಜಿಸಿದ್ದಾರೆ. ತುಮಕೂರಿನಲ್ಲಿ ಸಂಭವಿಸಿದ ರಸ್ತೆ ಅಫಘಾತದಲ್ಲಿ ಪುನೀತ್ ಆರ್ಯ ಸಾವನ್ನಪ್ಪಿದ್ದಾರೆ. ಬೈಕ್ ರೈಡ್ ಮಾಡುತ್ತಿದ್ದ ಆರ್ಯ ಅಫಘಾತ ಸ್ಥಳದಲ್ಲೆ ನಿಧನರಾಗಿದ್ದಾರೆ.
ಪುನೀತ್ ಆರ್ಯ ತುಮಕೂರಿನ ಸುದೀಪ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷರಾಗಿದ್ದರು. ಅಪ್ಪಟ ಅಭಿಮಾನಿಯ ನಿಧನಕ್ಕೆ ಸುದೀಪ್ ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ. "ಸುದ್ದಿ ಕೇಳಿ ಆಘಾತವಾಗಿದೆ, ಅದ್ಭುತವಾದ ಆತ್ಮ ಇನ್ಮುಂದೆ ನಮ್ಮೊಂದಿಗೆ ಇಲ್ಲ ಎನ್ನುವುದನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಅನೇಕ ವರ್ಷಗಳಿಂದ ನನ್ನ ಅಭಿಮಾನಿ ಮತ್ತು ಸಹೋದರನ ಹಾಗೆ ಇದ್ದರು. ತುಂಬ ದುಃಖ ಆಗುತ್ತಿದೆ. ತುಂಬ ಮಿಸ್ ಮಾಡಿಕೊಳ್ಳುತ್ತೇನೆ" ಎಂದು ಕಿಚ್ಚ ಅಭಿಮಾನಿಯೊಬ್ಬರ ನಿಧನದ ಸುದ್ದಿ ಕೇಳಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಪುನೀತ್ ಆರ್ಯ ನಿಧನಕ್ಕೆ ಸುದೀಪ್ ಅಭಿಮಾನಿಗಳು ಕೂಡ ಸಂತಾಪ ಸೂಚಿಸುತ್ತಿದ್ದಾರೆ. ಇನ್ನು ನಟ ಕಬೀರ್ ದುಹಾನ್ ಸಿಂಗ್ ಕೂಡ ಆರ್ಯ ನಿಧನಕ್ಕೆ ಸಂಪಾತ ಸೂಚಿಸಿದ್ದಾರೆ. "ಸಹೋದರನ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಪುನೀತ್ ಆರ್ಯನ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿತ್ತು. ಯುವತಿಯೊಬ್ಬಳಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವವದಾಗಿ ಹೇಳಿ ಮೋಸ ಮಾಡಿದ್ದಾರೆ ಮತ್ತು ಅತ್ಯಾಚಾರ ಮಾಡಿದ್ದಾನೆ ಎಂದು ನೊಂದು ಯುವತಿಯೊಬ್ಬಳು ದೂರು ದಾಖಲಿಸಿದ್ದರು.ಆದ್ರೆ ಆರೋಪವನ್ನು ಆರ್ಯ ತಳ್ಳಿ ಹಾಕಿದ್ದರು. ಇದೆಲ್ಲ ಮುಗಿದ ಕತೆ. ಆದ್ರೀಗ ಬಾಳಿ ಬದುಕಿ ತಂದೆ ತಾಯಿಗೆ ಆಶ್ರಯವಾಗಬೇಕಿದ್ದ ಮಗ ಹೀಗೆ ರಸ್ತೆ ಅಫಘಾತದಲ್ಲಿ ಸಾವನ್ನಪ್ಪಿದ್ದು ನಿಜಕ್ಕು ದುರಂತ.


Click it and Unblock the Notifications