For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಸಹೋದರನ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್ ಶುಭಕೋರಿದ್ದು ಹೀಗೆ

  |

  ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ಉತ್ತಮ ಸ್ನೇಹಿತರು. ಅಭಿನಯ ಚಕ್ರವರ್ತಿ ಸುದೀಪ್, ದಬಂಗ್-3 ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ತೆರೆಹಂಚಿಕೊಂಡ ಬಳಿಕ ಇಬ್ಬರ ನಡುವೆ ಉತ್ತಮ ಸ್ನೇಹ ಬಾಂಧವ್ಯ ಬೆಳೆದಿದೆ. ಸಿನಿಮಾದ ಬಳಿಕವೂ ಅದೇ ಬಾಂಧವ್ಯವನ್ನು ಉಳಿಸಿಕೊಂಡಿದ್ದಾರೆ. ಚಿತ್ರೀಕರಣದ ನಂತರ ಸಲ್ಮಾನ್ ಖಾನ್, ಕಿಚ್ಚನ ಮನೆಗೂ ಸಹ ಭೇಟಿ ನೀಡಿ ಸುದೀಪ್ ಕುಟುಂಬದ ಜೊತೆ ಸಮಯ ಕಳೆದಿದ್ದರು.

  ಅಂದಹಾಗೆ ಸಲ್ಮಾನ್ ಖಾನ್ ಮತ್ತು ಸುದೀಪ್ ನಡುವೆ ಉತ್ತಮ ಸ್ನೇಹ ಬೆಸೆಯುವ ಮೊದಲೇ ಸುದೀಪ್ ಮತ್ತು ಸಲ್ಮಾನ್ ಖಾನ್ ಸಹೋದರರ ನಡುವೆ ಉತ್ತಮ ಸ್ನೇಹ ಬಾಂಧವ್ಯವಿತ್ತು. ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ಜೊತೆ ಸುದೀಪ್ ಅವರಿಗೆ ಉತ್ತಮ ಸ್ನೇಹಿತರು.

  ವಿಡಿಯೋ ವೈರಲ್: ಸುದೀಪ್ 'ಫ್ಯಾಂಟಮ್' ಸಿನಿಮಾದ ಹಾಡಿನಲ್ಲಿ ವಿಶೇಷ ಅತಿಥಿ; ಯಾರದು?

  ಇಂದು ನಟ ಮತ್ತು ನಿರ್ದೇಶಕ ಸೊಹೈಲ್ ಖಾನ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 50ನೇ ವಸಂತಕ್ಕೆ ಕಾಲಿಟ್ಟಿರುವ ಸೊಹೈಲ್ ಖಾನ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸೊಹೈಲ್ ಖಾನ್ ಸ್ನೇಹಿತ ಮತ್ತು ಕನ್ನಡದ ನಟ ಕಿಚ್ಚ ಸುದೀಪ್ ಸಹ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿರುವ ಸುದೀಪ್, ಸೊಹೈಲ್ ಖಾನ್ ಅವರನ್ನು ಸಹೋದರ ಮತ್ತು ಸ್ನೇಹಿತ ಎಂದು ಕರೆದಿದ್ದಾರೆ. 'ಸ್ನೇಹಿತ ಮತ್ತು ಜೀವನದ ಸಹೋದರ. ನನ್ನ ಪ್ರೀತಿಯ ಸಹೋದರ ಸೊಹೈಲ್ ಖಾನ್. ನಿಮಗೆ ಇವತ್ತು ಶುಭಾಶಯ ತಿಳಿಸಿದ ಅನೇಕರಲ್ಲಿ ನಾನು ಒಬ್ಬ. ನೀವು ಇವತ್ತು ಪ್ರತಿಯೊಬ್ಬರ ಶುಭಾಶಯ ಮತ್ತು ಹಾರೈಕೆಗಳನ್ನು ಸ್ವೀಕರಿಸುತ್ತಿದ್ದೀರಿ. ಮತ್ತು ಅದು ಶಾಶ್ವತವಾಗಿ ಇರಲಿ. ಯಾವಾಗಲು ಸಂತೋಷವಾಗಿರಿ. ಹುಟ್ಟುಹಬ್ಬದ ಶುಭಾಶಯಗಳು' ಎಂದು ಶುಭಕೋರಿದ್ದಾರೆ.

  ಪ್ರೀತಿಯ ವಿಶ್ ಜೊತೆಗೆ ಸೊಹೈಲ್ ಖಾನ್ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದಾರೆ. ಸುದೀಪ್ ಶುಭಾಶಯ ತಿಳಿಸುತ್ತಿದ್ದಂತೆ ಅಭಿಮಾನಿಗಳು ಸಹ ಶುಭ ಹಾರೈಸುತ್ತಿದ್ದಾರೆ. ಅಂದಹಾಗೆ ಸೊಹೈಲ್ ಖಾನ್ ಸಹ ದಬಂಗ್-3 ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಮತ್ಯಾವ ಸಿನಿಮಾವನ್ನು ಸೊಹೈಲ್ ಒಪ್ಪಿಕೊಂಡಿಲ್ಲ.

  English summary
  Kannada Actor Sudeep wishes to salman Khan brother sohail khan for his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X