»   » ಕಿಚ್ಚ ಸುದೀಪ್ ಈಗ ಆಧಾರ್ ರಾಯಭಾರಿ

ಕಿಚ್ಚ ಸುದೀಪ್ ಈಗ ಆಧಾರ್ ರಾಯಭಾರಿ

Posted By:
Subscribe to Filmibeat Kannada

ಪಾಸ್ ಪೋರ್ಟ್ ಮಾಡಿಸಬೇಕಾ...ಎಲ್.ಪಿ.ಜಿಗೆ ಸಬ್ಸಿಡಿ ಬೇಕಾ...ಬ್ಯಾಂಕ್ ಅಕೌಂಟ್ ಓಪನ್ ಮಾಡಬೇಕಾ...ಎಲ್ಲೇ ಹೋದರೂ ನೀವು ನಿಮ್ಮ ಆಧಾರ್ ಕಾರ್ಡ್ ತೋರಿಸಲೇಬೇಕು! ಹೀಗಿದ್ದರೂ, ಬಹುತೇಕ ಮಂದಿಯ ಬಳಿ ಆಧಾರ್ ಕಾರ್ಡ್ ಇಲ್ಲ. ಆಧಾರ್ ಕಾರ್ಡ್ ನಿಂದಾಗುವ ಉಪಯೋಗಗಳೂ ಅನೇಕರಿಗೆ ಗೊತ್ತಿಲ್ಲ.

ಅದಕ್ಕಾಗಿ ಆಧಾರ್ ಇ-ಆಡಳಿತ ಕೇಂದ್ರ ಒಂದು ಪ್ಲಾನ್ ಮಾಡಿದೆ. ಆಧಾರ್ ಯೋಜನೆಯ ಉದ್ದೇಶ, ಪ್ರಾಮುಖ್ಯತೆ ಮತ್ತು ಪ್ರಯೋಜನಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಚಿತ್ರನಟ ಸುದೀಪ್ ಅವರನ್ನು ರಾಯಭಾರಿಯಾಗಿ ನೇಮಿಸಿದೆ.

Kannada Actor Sudeep brand ambassador of Aadhar

ಇದರೊಂದಿಗೆ, ಆಧಾರ್ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಬೆಂಗಳೂರು ಒನ್, ಕರ್ನಾಟದ ಒನ್ ಮತ್ತು ನಾಡಕಚೇರಿಗಳಲ್ಲಿ ಶಾಶ್ವತ ಆಧಾರ್ ನೋಂದಣಿ ಕೇಂದ್ರಗಳನ್ನ ಕೂಡ ಇ-ಆಡಳಿತ ಕೇಂದ್ರ ಆರಂಭಿಸುತ್ತಿದೆ. [ಬೆಂಗಳೂರು ಟ್ರಾಫಿಕ್ ರಾಯಭಾರಿ ಕಿಚ್ಚ ಸುದೀಪ್]

ಸುದೀಪ್ ಹೀಗೆ ರಾಯಭಾರಿಯಾಗಿರುವುದು ಇದೇ ಮೊದಲೇನಲ್ಲ. ಆಟೋ ಡ್ರೈವರ್ ಗಳು ಅಡ್ಡಾದಿಡ್ಡಿಯಾಗಿ ಓಡಿಸಬಾರದು ಅನ್ನುವ ಸಂದೇಶ ಸಾರೋಕೆ ಬೆಂಗಳೂರು ಟ್ರಾಫಿಕ್ ಪೊಲೀಸ್ ಗೆ ಕಿಚ್ಚ ಸುದೀಪ್ ಬ್ರ್ಯಾಂಡ್ ಅಂಬಾಸಿಡರ್ ಅಗಿದ್ದರು.

ಇನ್ನು ಕಮರ್ಶಿಯಲ್ ಬಗ್ಗೆ ಹೇಳ್ಬೇಕು ಅಂದ್ರೆ, ಇಂಟೆಕ್ಸ್ ಮೊಬೈಲ್, ಪಾರಾಗಾನ್ ಪಾದರಕ್ಷೆ ಮತ್ತು ಜಾಯ್ ಅಲುಕ್ಕಾಸ್ ಆಭರಣಗಳಿಗೆ ಸುದೀಪ್ ಪ್ರಚಾರ ರಾಯಭಾರಿ. (ಏಜೆನ್ಸೀಸ್)

English summary
After being brand ambassador for Bangalore City traffic police and endorsing Joyalukkas, Intex Mobiles, Paragon Footwares, Kannada Actor Sudeep has signed as ambassador of Aadhar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada