ವಿವಾದ ಹುಟ್ಟುಹಾಕಿದ್ದ 'ಬಳೆ' ಹೇಳಿಕೆ ಬಗ್ಗೆ ಸುದೀಪ್ ಸ್ಪಷ್ಟನೆ

Recommended Video

ಬಳೆ ಹೇಳಿಕೆ ಬಗ್ಗೆ ಸುದೀಪ್ ಸ್ಪಷ್ಟನೆ ಏನು ಗೊತ್ತಾ..? | Sudeep | FILMIBEAT KANNADA

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ರಿಲೀಸ್ ಆದ ನಂತರ ಅಭಿಮಾನಿಗಳ ವಾರ್ ತಾರಕಕ್ಕೇರಿತ್ತು. ಒಂದೆಡೆೆ ಪೈಲ್ವಾನ್ ಸಿನಿಮಾ ಪೈರಸಿಯಾಗಿ ವೈರಲ್ ಆಗುತ್ತಿದ್ದರೆ ಮತ್ತೊಂಡೆದೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಕೆಸರೆರಚಾಟ ಜೋರಾಗಿತ್ತು.

ಪೈಲ್ವಾನ್ ಪೈರಸಿ ಮಾಡಿದ ಕಿರಾತಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಒಬ್ಬ ಅರೆಸ್ಟ್ ಆಗುತ್ತಿದ್ದಂತೆ ಸುದೀಪ್ ಇದರ ಮೂಲ ಹುಡುಕುವವರೆಗು ಬಿಡಲ್ಲ ಎಂದು ಟ್ವೀಟ್ ಮಾಡಿದ್ದರು. ಇನ್ನೇನು ಅಭಿಮಾನಿಗಳ ವಾರ್ ತಣ್ಣಗಾಗುತ್ತಿದೆ ಎನ್ನುವಷ್ಟೊತ್ತಿಗೆ ಸುದೀಪ್ ಮಾಡಿದ ಮತ್ತೊಂದು ಟ್ವೀಟ್ ಭಾರಿ ಚರ್ಚೆಗೆ ಕಾರಣವಾಯ್ತು. ಸುದೀಪ್ ಬಳಸಿದ ಬಳೆ ಪದದ ವಿರುದ್ಧ ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಸುದೀಪ್ ಮಾಡಿದ ಟ್ವೀಟ್ ಏನು?

ಸುದೀಪ್ ಮಾಡಿದ ಟ್ವೀಟ್ ಏನು?

"ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳು ಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ, ಇನ್ನು ಕೆಲವು ದಿನಗಳು ಮಾತ್ರ" ಎಂದು ಟ್ವೀಟ್ ಮಾಡಿದ್ದರು.

ವಿವಾದಕ್ಕೆ ಕಾರಣವಾಯ್ತು 'ಬಳೆ' ಹೇಳಿಕೆ

ವಿವಾದಕ್ಕೆ ಕಾರಣವಾಯ್ತು 'ಬಳೆ' ಹೇಳಿಕೆ

ಸುದೀಪ್ ಬಳೆ ಪದವನ್ನು ಬಳಸಿ ಟ್ವೀಟ್ ಮಾಡುತ್ತಿದ್ದಂತೆ ಮಹಿಳೆಯರು ಆಕ್ರೋಶ ಹೊರಹಾಕಲು ಶುರುಮಾಡಿದರು. ಈ ಪದ ಬಳಸುವುದು ಮಹಿಳೆಯರಿಗೆ ಅಗೌರವ ತೋರಿದಂತೆ, ಮಹಿಳೆಯನ್ನು ಅಸಮರ್ತ, ಅಶಕ್ತರು ಎಂದು ಬಿಂಬಿಸಿದಂತೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಟ್ವೀಟ್ ವಿರುದ್ಧ ಕಿಡಿಕಾರಿದ್ದರು.

ಸ್ಪಷ್ಟನೆ ನೀಡಿದ ಸುದೀಪ್

ಸ್ಪಷ್ಟನೆ ನೀಡಿದ ಸುದೀಪ್

"ನನ್ನ ಹೇಳಿಕೆಯಲ್ಲಿ ಬಳೆ ಪದ ಬಳಸಿದ್ದಕ್ಕೆ ಮನನೊಂದಿರುವ ಮಹಿಳೆಯರೆ, ನನ್ನ ಬಗ್ಗೆ ನನ್ನ ಸ್ನೇಹಿತರ ಬಗ್ಗೆ ವ್ಯಂಗ್ಯವಾಗಿ ಕಮೆಂಟ್ ಮಾಡಿದವರಿಗೆ ನಾನು ಕೊಟ್ಟ ಪ್ರತಿಕ್ರಿಯೆ. ನಾನು ಮಹಿಳೆಯರನ್ನು ನಿಂದಿಸುವವರ ಸಾಲಿಗೆ ಸೇರಿದವನಲ್ಲ" ಎಂದು ಹೇಳಿದ್ದಾರೆ.

ಏನೆ ಟ್ವೀಟ್ ಮಾಡಿದರು ಟ್ರೋಲ್ ಮಾಡುತ್ತಾರೆ

ಏನೆ ಟ್ವೀಟ್ ಮಾಡಿದರು ಟ್ರೋಲ್ ಮಾಡುತ್ತಾರೆ

"ಸೆಪ್ಟಂಬರ್ ನಲ್ಲಿಯೆ ಸಾಕಷ್ಟು ಗ್ರೂಪ್ ಗಳು ಹುಟ್ಟಿಕೊಂಡಿವೆ. ಏನೇನೊ ಹೆಸರು ಹೆಸರುಗಳನ್ನು ಇಟ್ಟಿದ್ದಾರೆ. ನಾನು ಏನೆ ಟ್ವೀಟ್ ಮಾಡಿದ್ರು ಟ್ರೋಲ್ ಮಾಡೋದು, ಕೆಟ್ಟದಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಎಲ್ಲರ ಮೇಲು ದೂರು ಕೊಡುತ್ತೇನೆ. ಅವರೆಲ್ಲರನ್ನು ಹುಡುಕಿಸುತ್ತೇನೆ. ಅವರೆಲ್ಲ ಯಾರು ಅಂತ ಗೊತ್ತಾಗಬೇಕು. ನನ್ನ ಬಗ್ಗೆ ವ್ಯಂಗ್ಯವಾಡುವವರಿಗೆ ನಾನು ಬಳೆಯಲ್ಲ ಹಾಕಿದ್ದು ಖಡಗ ಅಂತ ಹೇಳಿದ್ದು. ನನ್ನ ಅಮ್ಮನು ಬಳಿ ಹಾಕುತ್ತಾರೆ. ಪತ್ನಿ ಅಕ್ಕಂದಿರು ಬಳೆ ಹಾಕುತ್ತಾರೆ. ಬಳೆ ಪದವನ್ನು ಅವಮಾನಿಸಿಲ್ಲ" ಎಂದು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ವಿಡಿಯೋವೊಂದನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

More from Filmibeat

English summary
''We had put bracelets, not bangles''...Sudeep made Statement about pailwaan piracy. Sudeep clarified about his bangles statement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X