twitter
    For Quick Alerts
    ALLOW NOTIFICATIONS  
    For Daily Alerts

    ಎಲ್ಲರ ನೋವು ಕೇಳುತ್ತೇನೆ, ನನ್ನ ನೋವನ್ನ ಯಾರೊಬ್ಬರು ಕೇಳಿಲ್ಲ?

    By Bharath Kumar
    |

    ಅಭಿನಯ ಚಕ್ರವರ್ತಿ, ಕೆಚ್ಚೆದೆಯ ಕಿಚ್ಚ ಸುದೀಪ್ ಅವರ ಘರ್ಜನೆ, ಅಬ್ಬರ ಎಲ್ಲವನ್ನ ತೆರೆ ನೋಡಿ ಕಣ್ತುಂಬಿಕೊಂಡಿದ್ದೇವೆ. ಆದ್ರೆ, ಸುದೀಪ್ ತಮ್ಮ ವೈಯಕ್ತಿಕ ಜೀವನದಲ್ಲಿ ಹೇಗಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ.

    'ಹೆಬ್ಬುಲಿ'ಯಂತೆ ಘರ್ಜಿಸುವ ಕಿಚ್ಚನ ಮನಸ್ಸಿನಲ್ಲಿ ನುಂಗಲಾರದ ನೋವುಗಳಿವೆ. ಮರೆಯಲಾಗದ ಸೋಲುಗಳಿವೆ. ಸದಾ ಸ್ನೇಹಿತರೊಂದಿಗೆ ಇರುವ ಸುದೀಪ್ ಅವರಲ್ಲೊಬ್ಬ 'ಏಕಾಂಗಿ' ಇದ್ದಾನೆ. ಅದು ಅವರನ್ನ ಸದಾ ಕಾಡುತ್ತಿದೆ. ಎಲ್ಲರ ಕಷ್ಟ-ನೋವುಗಳಿಗೆ ಸ್ಪಂದಿಸುವ ಕಿಚ್ಚನಿಗೆ ಯಾರೊಬ್ಬರು ಜೊತೆಯಾಗಿಲ್ಲ ಎಂಬುದು ಬೇಸರದ ಸಂಗತಿ.[ಸುದೀಪ್ ಬದುಕಿನ ಮೊದಲ ಅತ್ಯಂತ ದೊಡ್ಡ ಸಾಧನೆ ಇದು..!]

    ಹೌದು, ಕಿಚ್ಚ ಸುದೀಪ್ ಅವರ ವೈಯಕ್ತಿಕ ಬದುಕು ಹಾಗೂ ಸಿನಿಮಾ ಬದುಕಿನ ಬಗ್ಗೆ, ತಮ್ಮ ಮನದಾಳದಲ್ಲಿ ಮುಚ್ಚಿಟ್ಟಿದ್ದ ಭಾವನೆಗಳನ್ನ 'ಟಿವಿ9' ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. 'ಮಾಣಿಕ್ಯ'ನ ಮನದಲ್ಲಿದ್ದ ನೋವಿನ ನುಡಿಯನ್ನ ಅವರ ಮಾತಿನಲ್ಲೆ ಓದಿ.....

    'ಇಂಡಸ್ಟ್ರಿ ಬದಲಾಯಿಸಬೇಕಾದರೇ, ನಾವು ಬದಲಾಗಬೇಕು'!

    'ಇಂಡಸ್ಟ್ರಿ ಬದಲಾಯಿಸಬೇಕಾದರೇ, ನಾವು ಬದಲಾಗಬೇಕು'!

    ''ಮೊದಲು ನಾವು ಸರಿ ಆಗಬೇಕು. ಅದು ನಾವು ಇಂಡಸ್ಟ್ರಿಗೆ ಕೊಡ್ತಿರುವ ಕೊಡುಗೆ. ಇಂಡಸ್ಟ್ರಿನ ಬದಲಾಯಿಸುವುದಕ್ಕೆ ಮುಂಚೆ ನಮಗೆ ನಾವು ಬದಲಾಗಬೇಕು. ನನ್ನ ಜೀವನದಲ್ಲೂ ಆ ತರ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ. ಆದ್ರೂ, ಜನರ ಪ್ರೀತಿ ಸಿಕ್ಕಿದೆ. ಅದನ್ನ ನಾನು ಉಳಿಸಿಕೊಳ್ತಿನಿ''[ರವಿಶಂಕರ್ ಧ್ವನಿ ಬಗ್ಗೆ ಯದ್ವಾತದ್ವಾ ಹೊಗಳಿದ ಕಿಚ್ಚ ಸುದೀಪ್]

    'ನನಗೆ ಆಯಾಸ ಆಗಿದೆ'

    'ನನಗೆ ಆಯಾಸ ಆಗಿದೆ'

    ''ನಾನು ಮನಸ್ಸು ಮಾಡಿದ್ರೆ ಎರಡ್ಮೂರು ಸಿನಿಮಾ ಮಾಡಬಹುದು ಅಂತ ಎಲ್ಲರೂ ಹೇಳ್ತಾರೆ. ಬಟ್, ಅದು ಆಗ್ತಿಲ್ಲ. ಯಾಕಂದ್ರೆ, ನನಗೆ ಜೀವನದಲ್ಲಿ ಆಯಾಸವಾಗಿದೆ. ನಾನು ಸ್ವಲ್ಪ ನಿಧಾನವಾಗಿದ್ದೀನಿ. ನನಗೆ ಹೆಚ್ಚು ಸಿನಿಮಾ ಮಾಡ್ಬೇಕು, ಹೆಚ್ಚು ಸಂಭಾವನೆ ಪಡಿಯಬೇಕು ಎಂಬ ಭಾವನೆ ಇಲ್ಲ. ನನಗೆ ಇಷ್ಟೆ ಸಾಕು, ಬೇರೆನೂ ಬೇಕಾಗಿಲ್ಲ.''['ಹೆಬ್ಬುಲಿ' ಬಗ್ಗೆ ಸುದೀಪ್ ಬರೆದುಕೊಂಡಿರುವ ಮನದಾಳದ ಮಾತುಗಳು...]

    'ನನ್ನ ಸಿನಿಮಾ ದುಡ್ಡು ಮಾಡಿದೆ ಅಂತ ಯಾರು ಹೇಳೆ ಇಲ್ಲ'

    'ನನ್ನ ಸಿನಿಮಾ ದುಡ್ಡು ಮಾಡಿದೆ ಅಂತ ಯಾರು ಹೇಳೆ ಇಲ್ಲ'

    ''ನನ್ನ ಲೈಫ್ ನಲ್ಲಿ ನನಗೆ ಕೊಡಬೇಕಾಗಿರುವ ಹಣ ಅರ್ಧದಷ್ಟು ಬಾಕಿಯಿದೆ. ನಾನು ದುಡ್ಡು ಮುಖ ಯಾವತ್ತು ನೋಡಿಲ್ಲ. ಅವರ ಕೆಲಸವನ್ನ ಮುಗಿಸಿ ಕೊಟ್ಟಿದ್ದೀನಿ. ನಮ್ಮ ಮನೆಗೆ ಬರುವ ನಿರ್ಮಾಪಕರು ಖುಷಿಯಿಂದ ಹೋಗ್ಬೇಕು. ನಾನು ಒಂದು ಚಿತ್ರವನ್ನ ಶ್ರಮ ಪಟ್ಟು, ಇಷ್ಟ ಪಟ್ಟು ಮಾಡಿರುತ್ತೇನೆ. ಆದ್ರೆ, ಸಿನಿಮಾ ಮುಗಿಯುವ ಹೊತ್ತಿಗೆ ನಾನು ವಿಲನ್ ಆಗ್ಬಿಡ್ತಿನಿ. ಅದು ನನಗೆ ಅವರು ಕೊಡೋ ಬೆಲೆ''[ನೀವು ಸುದೀಪ್ ಅಭಿಮಾನಿ: ಸುದೀಪ್ 'ಇವರಿಗೆ' ಅಭಿಮಾನಿ.! ಯಾರವರು.?]

    'ಪ್ರಿಯಾಗೆ ಮಾತ್ರ ನನ್ನ ಮೇಲೆ ಬೇಜಾರಾಗುವ ಅಧಿಕಾರ'

    'ಪ್ರಿಯಾಗೆ ಮಾತ್ರ ನನ್ನ ಮೇಲೆ ಬೇಜಾರಾಗುವ ಅಧಿಕಾರ'

    ''ನನ್ನ ಮೇಲೆ ಯಾರಿಗಾದರೂ ಕೋಪ, ಬೇಜಾರು ಆಗಿದೆ ಅಂದ್ರೆ ಅದು 'ಪ್ರಿಯಾ' ಒಬ್ಬರಿಗೆ ಮಾತ್ರ. ಯಾಕಂದ್ರೆ, ನಾನು ಕಂಪ್ಲೀಟ್ ಆಗಿ ಸಿನಿಮಾ ಅಂತ, ಹೇಗಿರಬೇಕಾಗಿತ್ತೋ ಹಾಗೆ ಇರಲಿಲ್ಲ. ಪ್ರಿಯಾ ಬಿಟ್ಟರೇ, ಇನ್ಯಾರಿಗೂ ಜೀವನದಲ್ಲಿ ಮೋಸ ಮಾಡಿಲ್ಲ. ನಾನು ಸಾಯೋತನಕ ಹೆಮ್ಮೆಯಿಂದ ಇರ್ತಿನಿ.

    'ನಾನು ಕಣ್ಣೀರು ಹಾಕಿದ್ದೀನಿ'

    'ನಾನು ಕಣ್ಣೀರು ಹಾಕಿದ್ದೀನಿ'

    ''ನಾನು ಈ ಇಂಡಸ್ಟ್ರಿಯಲ್ಲಿ ತುಂಬಾ ನೋಡಿದ್ದೀನಿ. ಅದೆಷ್ಟೋ ಸರಿ ನಾನು ಮನೆಗೆ ಬಂದು ಕಣ್ಣೀರು ಹಾಕಿದ್ದುಂಟು. ನನ್ನ ಮೇಲೂ ಕೆಟ್ಟ ಭಾಷೆಯನ್ನ ಉಪಯೋಗಿಸಿದ್ದಾರೆ. ಮನುಷ್ಯರಿಗೆ ಬೆಲೆ ಇಲ್ವಾ ಅನ್ಸಿದೆ. ನಾನು ಯವಾಗಲೂ ಜನರ ಮಧ್ಯೆ ಇರೋದಕ್ಕೆ ಇಷ್ಟ ಪಡ್ತಿದ್ದೆ, ಆದ್ರೆ, ನಾನು ಈಗ ತುಂಬಾ ದೂರ ಆಗಿಬಿಟ್ಟಿದ್ದೀನಿ. ಈಗ ನನಗೆ ನನ್ನ ಸಿನಿಮಾ ಮಾತ್ರ''[ಕಿಚ್ಚ ಸುದೀಪ್ ಅಭಿನಯಕ್ಕೆ ಆಂಧ್ರ ಸರ್ಕಾರದಿಂದ 'ರಾಜ್ಯ ಪ್ರಶಸ್ತಿ' ]

    'ನನ್ನ ನೋವು ಯಾರು ಕೇಳಿಲ್ಲ'

    'ನನ್ನ ನೋವು ಯಾರು ಕೇಳಿಲ್ಲ'

    ''ಎಲ್ಲರೂ ಬಂದು ನೋವು ಹೇಳಿಕೊಳ್ತಾರೆ. ಹಾಗಾಯ್ತು, ನನಗೆ ಹೀಗಾಯ್ತು ಅಂತ. ಒಬ್ಬ ಬಂದು ನಿಮಗೇನಾಯ್ತು ಅಂತ ನನ್ನ ನೋವು ಕೇಳೀದ್ರಾ? ನಿಮ್ಮ ನೋವು ಹೇಳಿಕೊಳ್ಳಿ, ಆದ್ರೆ, ಸುದೀಪ್ ಏನಾಯ್ತು ಅಂತ ಯಾರೊಬ್ಬರು ಕೇಳಿಲ್ಲ. ಎಲ್ಲರೂ ಕೈ ಹಿಡ್ಕೊಂಡು ಬರ್ಬೇಕು ಅಂತ ಕೈ ಹಿಡ್ಕೊಂಡು ಬರ್ತಿವಿ. ಆದ್ರೆ, ಬಹಳ ಬೇಗ ದೊಡ್ಡವರಾಗ್ತಾರೆ. ಅಲ್ಲಿ ಅವರ ಜೀವನದಲ್ಲಿ ನಮ್ಮ ಕೆಲಸ ಮುಗಿತು ಅಂತ ಅಂದುಕೊಳ್ತಿನಿ''.[ಸುದೀಪ್ ಮಾತನಾಡಿರುವ ವಿಡಿಯೋ ಇಲ್ಲಿದೆ]

    'ಜನರೇ ನನ್ನ ಸಂಪಾದನೆ'

    'ಜನರೇ ನನ್ನ ಸಂಪಾದನೆ'

    ''ನನ್ನ ಜೀವನದಲ್ಲಿ ಯಾರು ನನಗೆ ಸ್ಪಂದಿಸಿದ್ದರೋ ಇಲ್ವೋ ಗೊತ್ತಿಲ್ಲ. ಆದ್ರೆ, ಜನರು ಸ್ಪಂದಿಸಿದರು. ನನ್ನ ಅಭಿಮಾನಿಗಳು ಅಂತ ಹೇಳ್ಕೊಂಡು ಮೊದಲಿನಿಂದಲೂ ಬಂದಿದ್ದಾರೆ ಅಲ್ವಾ, ಅವರ ಮೇಲೆ ನನಗೆ ಹೆಮ್ಮೆ ಇದೆ. ಥಿಯೇಟರ್ ಗೆ ನನ್ನ ನೋಡಿ ಜನ ಬರ್ತಾರೆ. ಅವರ ಬಗ್ಗೆ ನನಗೆ ಹೆಮ್ಮೆ ಇದೆ. ಇದೇ ನಾನು ಮಾಡಿರುವುದೇ ಸಂಪಾದನೆ ಮತ್ತು ಸಾಧನೆ''[ಸುದೀಪ್ ಮಾತನಾಡಿರುವ ವಿಡಿಯೋ ಇಲ್ಲಿದೆ]

    English summary
    Kannada Actor Kiccha Sudeep Emotional Talk in Tv9 Interview. Here is the Complete Speech of Sudeep in Words.
    Monday, March 6, 2017, 12:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X