ಸುದೀಪ್ ಹೆಸರಲ್ಲಿ ಗ್ರಂಥಾಲಯ ತೆರೆದು ಅಭಿಮಾನ ಮೆರೆದ ಅಭಿಮಾನಿ
ಕಿಚ್ಚ ಸುದೀಪ್ ಅಪಾರ ಸಂಖ್ಯೆ ಅಭಿಮಾನಿಗಳನ್ನು ಹೊಂದಿರುವ ನಟ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಬಾಲಿವುಡ್ ನಲ್ಲಿಯೂ ಕಿಚ್ಚನ ಹವಾ ಜೋರಾಗಿಯೆ ಇದೆ. ಬೇರೆ ಭಾಷೆಯಲ್ಲಿ ಮಿಂಚುವ ಮೂಲಕ ಬಹುಭಾಷೆಯ ನಟನಾಗಿ ಗುರುತಿಸಿಕೊಂಡಿರುವ ಕಿಚ್ಚನಿಗೆ ಗಡಿಗೂ ಮೀರಿದ ಅಭಿಮಾನಿ ಬಳಗವಿದೆ..
ಅಭಿಮಾನಿಗಳು ನೆಚ್ಚಿನ ನಟರ ಮೇಲಿನ ಅಭಿಮಾನವನ್ನು ನಾನಾತರಹ ಹೊರಹಾಕುತ್ತಾರೆ. ಕೆಲವರು ಫೋಟೋ ಇಟ್ಟು ಪೂಜಿಸಿದರೆ ಇನ್ನು ಕೆಲವು ಅಭಿಮಾನಿಗಳು ಸುದೀಪ್ ಹೆಸರನ್ನು ಹಚ್ಚೆ ಹಾಕಿಸಿಕೊಂಡು ಸಂತಸ ಪಡುತ್ತಾರೆ. ಇನ್ನೂ ಕೆಲವರು ಕಿಚ್ಚನ ಪೋಟೋವನ್ನೆ ಹಚ್ಚೆಹಾಕಿಕೊಳ್ಳುವ ಮೂಲಕ ಅಭಿಮಾನ ಮೆರೆಯುತ್ತಾರೆ.
ನೆಚ್ಚಿನ ನಟ-ನಟಿಯರಿಗಾಗಿ ಏನು ಬೇಕಾದರು ಮಾಡಲು ತಯಾರಾಗಿರುತ್ತಾರೆ ಅಭಿಮಾನಿಗಳು. ಅಭಿಮಾನಿಗಳಿಂದ ಸಿನಿ ತಾರೆಯರಿಗಾಗಿ ದೇವಸ್ಥಾನ ಕಟ್ಟಿರುವ ಉದಾಹರಣೆಯು ಇದೆ. ಇಲ್ಲೊಬ್ಬ ಅಭಿಮಾನಿ ಕಿಚ್ಚ ಸುದೀಪ್ ಹೆಸರಲ್ಲಿ ಗ್ರಾಂಥಾಲಯ ಕಟ್ಟಿಸಿದ್ದಾರೆ. ಬೊಂಬೇರಹಳ್ಳಿ ಎನ್ನುವ ಊರಲ್ಲಿ ಕಿಚ್ಚ ಸುದೀಪ್ ಗ್ರಂಥಾಲಯ ನಿರ್ಮಾಣ ಮಾಡಿ ಸುದೀಪ್ ಹುಟ್ಟುಹಬ್ಬದಂದು ಉದ್ಘಾಟನೆ ಮಾಡಿದ್ದಾರೆ.

ಈ ಬಗ್ಗೆ ಅಭಿಮಾನಿ ಬಸಯ್ಯ ಎಸ್ ನಾಗಯ್ಯನವರ್ ಸಾಮಾಜಿಕ ಜಾಲತಾಣದಲ್ಲಿ ಗ್ರಂಥಾಲಯದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿದ್ದಾರೆ. ಕಿಚ್ಚನ ಹೆಸರಿನ ಗ್ರಂಥಾಲಯ ನೋಡಿ ಸುದೀಪ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇಮೋಜಿಯ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಸದ್ಯ ಸುದೀಪಿಯನ್ಸ್ ಪೈಲ್ವಾನ್ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಐದು ಭಾಷೆಯಲ್ಲಿ ತೆರೆಗೆ ಬರುತ್ತಿರುವ ಪೈಲ್ವಾನ್ ಸಿನಿಮಾ ತೆರೆಗೆ ಬರುತ್ತಿದೆ. ಸೆಪ್ಟಂಬರ್ 12ರಂದು ತೆರೆಗೆ ಬರುತ್ತಿರುವ ಪೈಲ್ವಾನ್ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.


Click it and Unblock the Notifications











