ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ವಿರುದ್ಧ ರೊಚ್ಚಿಗೆದ್ದ ಸುದೀಪ್ ಅಭಿಮಾನಿಗಳು
Recommended Video
ಸ್ಯಾಂಡಲ್ ವುಡ್ ನಲ್ಲಿ ಕೆಲಸಮಯದಿಂದ ಫ್ಯಾನ್ಸ್ ವಾರ್ ತಣ್ಣಗಾಗಿತ್ತು. ಆಗಾಗ ಎರಡು ಸ್ಟಾರ್ ಗಳ ಅಭಿಮಾನಿಗಳು ಕಿತ್ತಾಡುತ್ತಿದ್ದರು ಸಹ ಅಲ್ಲಗೆ ಸೈಲೆಂಟ್ ಆಗುತ್ತಿದ್ದರು. ಆದ್ರೀಗ ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ವಿರುದ್ಧ ಕೆಂಡಕಾರುತ್ತಿದ್ದಾರೆ.
ಒಂದು ಕಾಲದ ಗೆಳೆಯರು, ಕುಚುಕುಗಳಾಗಿದ್ದರು ಕಿಚ್ಚ ಸುದೀಪ್ ಮತ್ತು ದರ್ಶನ್. ಇಬ್ಬರು ಅಭಿಮಾನಿಗಳು ಸಹ ಹಾಗೆ ಇದ್ದರು. ಆದ್ರೀಗ ಸುದೀಪ್ ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಸುದೀಪ್ ಬಗ್ಗೆ ಕೇಳುತ್ತಿದ್ದಂತೆ ದರ್ಶನ್ ಗರಂ ಆಗಿ ಖಾರವಾಗಿ ಪ್ರತಿಕ್ರಿಯೆ ನೀಡಿದ ವಿರುದ್ಧ ಸುದೀಪ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈಗಲೂ ಸ್ನೇಹಿತ ಎಂದು ಹೇಳಿಕೊಳ್ಳುತ್ತೀರಾ ಅಣ್ಣ?
ಸುದೀಪ್ ಅಭಿಮಾನಿಗಳು ಸುದೀಪ್ ಅವರನ್ನು ಪ್ರಶ್ನಿಸುತ್ತಿದ್ದಾರೆ. "ಈಗಲು ಅಣ್ಣ ದರ್ಶನ್ ಅವರನ್ನು ಸ್ನೇಹಿತ ಎಂದು ಒಪ್ಪಿಕೊಳ್ಳುತ್ತೀರಾ" ಎಂದು ಕೇಳುತ್ತಿದ್ದಾರೆ. "ಈ ನಟನ ಯೋಗ್ಯತೆಯು ಸಂದರ್ಶನದಲ್ಲಿ ಬಯಲಾಗಿದೆ. ಈ ವ್ಯಕ್ತಿಯನ್ನು ಈಗಲೂ ನಿಮ್ಮ ಸ್ನೇಹಿತ ಎಂದು ಹೇಳಿಕೊಳ್ಳುತ್ತೀರ ಸುದೀಪ್ ಅಣ್ಣ" ಎಂದು ದರ್ಶನ್ ಹೇಳಿದ ಮಾತನ್ನು ಶೇರ್ ಮಾಡಿ ಕೇಳುತ್ತಿದ್ದಾರೆ.

ಸುದೀಪ್ ಅಣ್ಣಾ ತೀರಾ ಒಳ್ಳೆಯರಾಗಬೇಡಿ
ಸುದೀಪ್ ಅಣ್ಣ ತೀರಾ ಒಳ್ಳೆಯರಾಗಬೇಡಿ ಎಂದು ಕಿಚ್ಚನಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ ಅಭಿಮಾನಿಗಳು. ದರ್ಶನ್ ಪ್ರತಿಕ್ರಿಯೆ ವಿರುದ್ಧ ಸುದೀಪ್ ಅಭಿಮಾನಿಗಳಿಂದ ತರಹೇವಾರಿ ಕಮೆಂಟ್ ಗಳು ಹರಿದುಬರುತ್ತಿವೆ.
"ಕೊಳಚೆಯಲ್ಲಿ ಕಲ್ಲು ಎಸದರೆ, ಕೊಳಚೆಯ ಹೊಲಸು ನಮಗೆ ಸಿಡಿಯುವುದು ಆ ಥರ ದರ್ಶನ್. ಸುದೀಪ್ ಅಣ್ಣಾ ತೀರಾ ಒಳ್ಳೆಯರಾಗಬೇಡಿ" ಎಂದು ಹೇಳುತ್ತಿದ್ದಾರೆ.

ಅಣ್ಣ ಸಾಕು ಇನ್ಮುಂದೆ ದಯವಿಟ್ಟು ಮಾತಾಡಬೇಡಿ
" ಸುದೀಪ್ ಅಣ್ಣ ಸಾಕು ಇನ್ಮುಂದೆ ದಯವಿಟ್ಟು ಅವರ ಬಗ್ಗೆ ಏನೂ ಮಾತಾಡ ಬೇಡಿ". "ಸ್ನೇಹದ ಬಗ್ಗೆ ಕೇಳಿದ್ರೆ ಹೆಂಡತಿ ಜೊತೆ ಮಲಗುವ ಬಗ್ಗೆ ಮಾತನಾಡುತ್ತಾರೆ, ಇಂಥವರ ಜೊತೆ ಸ್ನೇಹ ಬೇಡ. ಇವರ ಬಗ್ಗೆ ಮಾತನಾಡಬೇಡಿ" ಎಂದು ಅನೇಕ ಜನ ಅಭಿಮಾನಿಗಳು ಸುದೀಪ್ ಅವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ದಯವಿಟ್ಟು ಅವರ ಬಗ್ಗೆ ಮಾತನಾಡಬೇಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ದರ್ಶನ್ ಹೇಳಿದ್ದೇನು?
ಇನ್ಮೇಲೆ ದರ್ಶನ್ ಬೆಳಗ್ಗೆ ಎಷ್ಟೊತ್ತಿಗೆ ಎದ್ದೇಳಬೇಕು, ಏನೇನು ತಿನ್ನಬೇಕು, ಯಾರ ಫೋನ್ ಎತ್ತಬೇಕು, ಯಾರ ಫೋನ್ ಎತ್ತಬಾರದು, ಯಾರ ಜೊತೆ ಫ್ರೆಂಡ್ ಶಿಫ್ ಮಾಡಬೇಕು ಮಾಡಬಾರದು. ರಾತ್ರಿ ಅವನ ಹೆಂಡತಿ ಜೊತೆ ಮಲಗಬೇಕಾ? ಮಲಗಬಾರ್ದ ಎನ್ನುವುದನ್ನು ಮಾಧ್ಯಮದವರು ಡಿಸೈಡ್ ಮಾಡ್ತೀರಾ? ಅದು ನನ್ನ ವೈಯಕ್ತಿಕ, ನನಗೆ ಗೊತ್ತು" ಎಂದು ಕಾರವಾಗಿ ಪ್ರತಿಕ್ರಿಯೆ ನೀಡಿದ್ದರು.


Click it and Unblock the Notifications











