ದಿನದಿಂದ ದಿನಕ್ಕೆ ಕಿಚ್ಚ ಸುದೀಪ್ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗ್ತಿದ್ಯಾ?
Recommended Video
ಸ್ಯಾಂಡಲ್ ವುಡ್ ನ ಆರಡಿ ಕಟೌಟ್, ಅಭಿನಯ ಚಕ್ರವರ್ತಿ, ಮಾಣಿಕ್ಯ, ಕಿಚ್ಚ ಹೀಗೆ ನಾನಾ ಬಿರುದುಗಳಿಂದ ಖ್ಯಾತಿ ಗಳಿಸಿರುವ ನಟ ಸುದೀಪ್. ಚಂದನವನದ ಟಾಪ್ ಸ್ಟಾರ್ ನಟರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಕಿಚ್ಚನಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ.
ಕರ್ನಾಟಕ ಮಾತ್ರವಲ್ಲದೆ ಗಡಿಗೂ ಮೀರಿ ಅಭಿಮಾನಿ ಬಳಗ ಸಂಪಾದಿಸಿದ್ದಾರೆ ಕಿಚ್ಚ. ಆದ್ರೀಗ ಸುದೀಪ್ ಅಭಿಮಾನಿಗಳ ಸಂಖ್ಯೆ ಕಮ್ಮಿಯಾಗುತ್ತಿದೆಯಾ ಎನ್ನುವ ಪ್ರಶ್ನೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ದಕ್ಷಿಣ ಭಾರತ ಮತ್ತು ಬಾಲಿವುಡ್ ಚಿತ್ರರಂಗದಲ್ಲಿ ಮಿಂಚುತ್ತಿರುವ ಕಿಚ್ಚನಿಗೆ ಕನ್ನಡ ಅಭಿಮಾನಿಗಳು ಕಡಿಮೆಯಾಗುತ್ತಿದ್ದಾರಾ ಎನ್ನುವ ಅನುಮಾನ ಶುರುವಾಗಿದೆ.
ಈ ವಿಚಾರ ಈಗ ಚರ್ಚೆಯಾಗುತ್ತಿರಲು ಕಾರಣ ಅಭಿಮಾನಿಯೊಬ್ಬನ ಪ್ರಶ್ನೆ. ಸುದೀಪ್ ಪೈಲ್ವಾನ್ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಅಭಿಮಾನಿಗಳಲ್ಲಿ ಪೈಲ್ವಾನ್ ಬಗ್ಗೆ ಪ್ರಶ್ನೆಗಳಿದ್ದರೆ #ಆಸ್ಕ್ ಪೈಲ್ವಾನ್ ಹೆಸರಿನಲ್ಲಿ ಕೇಳಿ ಎಂದು ಹೇಳಿದ್ದರು. ಸುದೀಪ್ ಈ ಮಾತು ಹೇಳುತ್ತಿದ್ದಂತೆ ಅಭಿಮಾನಿಗಳಿಂದ ತರಹೇವಾರಿ ಪ್ರಶ್ನೆಗಳು ಹರಿದು ಬರಲು ಶುರುವಾದವು. ಇದರಲ್ಲಿ ಅಭಿಮಾನಿಯೊಬ್ಬ ಸುದೀಪ್ ಗೆ ನಿಮ್ಮ ಅಭಿಮಾನಿಗಳ ಸಂಖ್ಯೆ ಕಮ್ಮಿ ಆಗುತ್ತಿದ್ದಾರೆ ಎಂದಿದ್ದರು. ಇದಕ್ಕೆ ಸುದೀಪ್ ಕೂಡ ಉತ್ತರಿಸಿದ್ದಾರೆ.

ಸುದೀಪ್ ಅಭಿಮಾನಿಗಳ ಸಂಖ್ಯೆ ಕಮ್ಮಿಯಾಗುತ್ತಿದೆಯಂತೆ
ಅಭಿಮಾನಿಯೊಬ್ಬ ಕಿಚ್ಚನಿಗೆ" ಸುದೀಪ್ ಸರ್ ದಿನದಿಂದ ದಿನಕ್ಕೆ ನಿಮ್ಮ ಅಭಿಮಾನಿಗಳ ಸಂಖ್ಯೆ ಕಮ್ಮಿಯಾಗುತ್ತಿದೆ. ಇದಕ್ಕೆ ಕಾರಣ ಏನು ಗೊತ್ತಾ? ಉತ್ತಮ ಸಿನಿಮಾಗಳನ್ನು ಮಾಡಿ ಆಗ ಸಹಜವಾಗಿಯೆ ಅಭಿಮಾನಿಗಳು ಹೆಚ್ಚಾಗುತ್ತಾರೆ. ಅಲ್ಲದೆ ಉತ್ತಮ ಜನರನ್ನು ಸಂಪಾದಿಸುತ್ತೀರಾ ಮತ್ತು ಜನರ ಪ್ರೀತಿನು ಸಿಗುತ್ತೆ. ಇದು ನನ್ನ ಮನವಿ" ಎಂದು ಆಸ್ಕ್ ಪೈಲ್ವಾನ್ ಹೆಸರಿನಲ್ಲಿ ಅಭಿಮಾನಿಯೊಬ್ಬ ಸುದೀಪ್ ಗೆ ಸಲಹೆ ನೀಡಿದ್ದರು.

ಸುದೀಪ್ ರಿಯಾಕ್ಷನ್
ಇದು ಪೈಲ್ವಾನ್ ಬಗ್ಗೆ ಇದ್ದ ಕಾರ್ಯಕ್ರಮ ಮಾತ್ರವಾದ್ದರು ಕಿಚ್ಚ ಅಭಿಮಾನಿಗಳ ಪ್ರತಿಯೊಂದು ಪ್ರಶ್ನೆಗಳಿಗೂ ಉತ್ತರಿಸುತ್ತಿದ್ದಾರೆ. ಹಾಗೆ ಈ ಅಭಿಮಾನಿಯ ಪ್ರಶ್ನೆಗೂ ಪ್ರತಿಕ್ರಿಯೆ ನೀಡಿದ್ದಾರೆ. "ಸರಿ ಸರ್, ಈ ಟ್ವೀಟ್ ನೀವು ನನಗೆ ಮಾಡಿದ್ದೀರಾ" ಎಂದು ಸುದೀಪ್ ಕೇಳಿದ್ದಾರೆ.

ಪ್ರಶ್ನೆ ಮಾಡಿದ ಅಭಿಮಾನಿಗೆ ಅಭಿಮಾನಿಗಳ ತರಾಟೆ
ಸುದೀಪ್ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಪ್ರಶ್ನೆ ಮಾಡಿದ ಅಭಿಮಾನಿ 'ನಿರಾಸೆಗೊಂಡ ಕಿಚ್ಚನ ಅಭಿಮಾನಿ' ಎಂದು ಟ್ವಿಟ್ಟರ್ ನಲ್ಲಿ ಹೆಸರು ಹಾಕಿಕೊಂಡಿದ್ದಾರೆ. ಸುದೀಪ್ ಗೆ ಈ ಪ್ರಶ್ನೆ ಕೇಳುತ್ತಿದ್ದಂತೆ ಸುದೀಪಿಯನ್ಸ್ ರೊಚ್ಚಿಗೆದ್ದಿದ್ದಾರೆ. "ಕಿಚ್ಚನಿಗೆ ಇಡೀ ಭಾರತದಾದ್ಯಂತ ಅಭಿಮಾನಿಗಳಿದ್ದಾರೆ. ಅಭಿಮಾನಿಗಳ ಸಂಖ್ಯೆ ಜಾಸ್ತಿ ಆಗ್ತಿದೆ. ಕಡಿಮೆ ಆಗ್ತಿಲ್ಲ. ತಿಳಿದುಕೊಂಡು ಮಾತಾಡು" ಎಂದು ತಿರುಗೇಟು ನೀಡುತ್ತಿದ್ದಾರೆ. "ನೀನೇನು ಲೆಕ್ಕ ಹಾಕಿದ್ದೀಯಾ", "ಜೋಕ್ ಆಫ್ ದಿ ಇಯರ್", ಎಂದೆಲ್ಲ ಕಮೆಂಟ್ ಮಾಡುತ್ತಿದ್ದಾರೆ.

ಅಭಿಮಾನಿ ಹೇಳಿದ್ದು ನಿಜಾನಾ
ಸುದೀಪ್ ಸದ್ಯ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲೂ ಅಭಿನಯಿಸುತ್ತಿದ್ದಾರೆ. ಹಾಗಾಗಿ ಎಲ್ಲಾ ಭಾಷೆಯಲ್ಲು ಕಿಚ್ಚನಿಗೆ ಅಭಿಮಾನಿಗಳಿದ್ದಾರೆ. ಸಹಜವಾಗಿಯೆ ಅಭಿಮಾನಿಗಳ ಸಂಖ್ಯೆಯು ಹೆಚ್ಚಾಗಿರುತ್ತೆ. ಹೆಬ್ಬುಲಿ ಸಿನಿಮಾದ ನಂತರ ಸುದೀಪ್ "ದಿ ವಿಲನ್" ಮತ್ತು "ಅಂಬಿ ನಿಂಗೆ ವಯಸ್ಸಾಯ್ತೋ" ಸಿನಿಮಾಗಳು ರಿಲೀಸ್ ಆಗಿವೆ. ಆದ್ರೆ ಇದು ಮಲ್ಟಿ ಸ್ಟಾರರ್ ಸಿನಿಮಾ. ಹಾಗೆ ನೋಡಿದ್ರೆ ಹೆಬ್ಬುಲಿ ನಂತರ ಸುದೀಪ್ ಸಿನಿಮಾಗೆ ತುಂಬಾ ಗ್ಯಾಪ್ ಆಗಿದೆ. ಹಾಗಾಗಿ ಅಭಿಮಾನಿಗಳಿಗೆ ನಿರಾಸೆ ಆಗಿರುವುದು ಕೂಡ ಸಹಜ. ಆದ್ರೆ ಅಭಿಮಾನಿಗಳ ಸಂಖ್ಯೆ ಕಮ್ಮಿ ಆಗಿದೆ ಎನ್ನುವುದರಲ್ಲಿ ಅರ್ಥವಿಲ್ಲ.


Click it and Unblock the Notifications











