ಮೃತ ಅಭಿಮಾನಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ಸುದೀಪ್

Recommended Video

ಮೃತ ಅಭಿಮಾನಿ ಕುಟುಂಬಕ್ಕೆ ಸಹಾಯಹಸ್ತ ಚಾಚಿದ ಸುದೀಪ್

ರಸ್ತೆ ಅಫಘಾತದಲ್ಲಿ ಸಾವನ್ನಪ್ಪಿದ ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿ ಪುನೀತ್ ಆರ್ಯ ಕುಟುಂಬಕ್ಕೆ ಸುದೀಪ್ ಆರ್ಥಿಕ ನೆರವು ನೀಡಿದ್ದಾರೆ. ನಿನ್ನ(ಜುಲೈ 28) ತುಮಕೂರಿನಲ್ಲಿ ಸಂಭವಿಸಿದ ಅಫಘಾತದಲ್ಲಿ ಬೈಕ್ ಚಲಾಯಿಸುತ್ತಿದ್ದ ಪುನೀತ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಅಭಿಮಾನಿಯ ನಿಧನದ ಸುದ್ದಿ ಕೇಳುತ್ತಿದ್ದಂತೆ ಕಿಚ್ಚ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದರು. ಅಪ್ಪಟ ಅಭಿಮಾನಿಯನ್ನು ಕಳೆದುಕೊಂಡ ದುಃಖವನ್ನು ಹೊರಹಾಕಿದ್ರು. ಜೊತೆಗೆ ಮೃತ ಅಭಿಮಾನಿಯ ಕುಟುಂಬಕ್ಕೆ ಸಾಂತ್ವಾನ ಹೇಳಿ, 2,50,000 ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ಪುನೀತ್ ಆರ್ಯ ತುಮಕೂರು ಜಿಲ್ಲೆಯ ಸುದೀಪ್ ಅಭಿಮಾನಿ ಸಂಘದ ಅಧ್ಯಕ್ಷರಾಗಿದ್ದರು. ವಿದಿಯಾಟಕ್ಕೆ ಬಲಿಯಾಗಿ ಬದುಕನ್ನು ಅರ್ಧದಲ್ಲೆ ನಿಲ್ಲಿಸಿ ಬಾರದ ಲೋಕಕ್ಕೆ ಪಯಣ ಬೆಳೆಸಿದ ಆರ್ಯನಿಗೆ, ಸುದೀಪ್ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ನಟ ಕಬೀರ್ ದಹಾನ್ ಸಿಂಗ್ ಕೂಡ ಅಭಿಮಾನಿಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Kannada Actor Sudeep Gave Money To His Fan Puneeth Arya Family

ಈ ಬಗ್ಗೆ ಸುದೀಪ್ ಟ್ವಿಟ್ಟರ್ ನಲ್ಲಿ "ಸುದ್ದಿ ಕೇಳಿ ಆಘಾತವಾಗಿದೆ, ಅದ್ಭುತವಾದ ಆತ್ಮ ಇನ್ಮುಂದೆ ನಮ್ಮೊಂದಿಗೆ ಇಲ್ಲ ಎನ್ನುವುದನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಅನೇಕ ವರ್ಷಗಳಿಂದ ನನ್ನ ಅಭಿಮಾನಿ ಮತ್ತು ಸಹೋದರನ ಹಾಗೆ ಇದ್ದರು. ತುಂಬ ದುಃಖ ಆಗುತ್ತಿದೆ. ತುಂಬ ಮಿಸ್ ಮಾಡಿಕೊಳ್ಳುತ್ತೇನೆ" ಎಂದು ಅಭಿಮಾನಿಯ ನಿಧನಕ್ಕೆ ಕಿಚ್ಚ ಕಂಬನಿ ಮಿಂಡಿದ್ದಾರೆ.

More from Filmibeat

English summary
Kannada actor Sudeep gave money to his fan Puneeth Arya Family. Puneeth died in the accident.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X