»   » ಬರ್ತ್ ಡೇ ಆಚರಿಸಿ ಎಂದು ಪತ್ರ ಬರೆದಿದ್ದ ಅಭಿಮಾನಿಗೆ ಸುದೀಪ್ ಕೊಟ್ಟ ಉತ್ತರ?

ಬರ್ತ್ ಡೇ ಆಚರಿಸಿ ಎಂದು ಪತ್ರ ಬರೆದಿದ್ದ ಅಭಿಮಾನಿಗೆ ಸುದೀಪ್ ಕೊಟ್ಟ ಉತ್ತರ?

Posted By:
Subscribe to Filmibeat Kannada

ಸುದೀಪ್ ಅವರ ಹುಟ್ಟುಹಬ್ಬಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿಯಿದೆ. ಈ ಮಧ್ಯೆ ಸುದೀಪ್ ಅಭಿನಯದ ಚಿತ್ರಗಳು ಪೋಸ್ಟರ್, ಮೋಷನ್ ಪೋಸ್ಟರ್, ಟೀಸರ್ ಬಿಡುಗಡೆಯಾಗಿದೆ. ಈ ಮಧ್ಯೆ ಸುದೀಪ್ ಅಭಿಮಾನಿಯೊಬ್ಬ ಹುಟ್ಟುಹಬ್ಬ ಆಚರಿಸಿಕೊಳ್ಳಿ ಎಂದು ಕಿಚ್ಚನಿಗೆ ಪತ್ರ ಬರೆದಿದ್ದಾನೆ.

ಈ ಪತ್ರಕ್ಕೆ ಸುದೀಪ್ ಕೂಡ ಉತ್ತರ ಕೊಟ್ಟಿದ್ದು, ಹುಟ್ಟುಹಬ್ಬ ಆಚರಿಸಿದಿರಲು ಬಲವಾದ ಕಾರಣ ಇದೆ ಎಂದಿದ್ದಾರೆ.

ಇನ್ನೂ ಮುಂದೆ ಸುದೀಪ್ ಹುಟ್ಟುಹಬ್ಬ ಆಚರಿಸದಿರಲು ಇದೇ ಕಾರಣ..!

Kannada Actor Sudeep Gave Reaction to His Fan

ಅಭಿಮಾನಿ ಬರೆದ ಪತ್ರದಲ್ಲಿ ಏನಿದೆ ನೋಡಿ...

''ಸುದೀಪ್ ಅಣ್ಣ ಒಂದು ವರ್ಷ ಕಾದು ಹುಟ್ಟುಹಬ್ಬ ಬರುತ್ತೆ. ಆ ದಿನ ನಿಮ್ಮನ್ನ ನೋಡಬಹುದು, ನಿಮ್ಮ ಜೊತೆ ಫೋಟೋ ತೆಗೆಸಿಕೊಳ್ಳಬಹುದು ಎಂಬ ಆಸೆಯಿಂದ ಇರ್ತೀವಿ. ಆದ್ರೆ, ಇದ್ದ ಒಂದು ದಿನನೂ ನೀವು ಸಿಗಲ್ಲ ಅಂದ್ರೆ ಹೇಗೆ? ಟೀಸರ್, ಪೋಸ್ಟರ್ ಎಲ್ಲ ಉಡುಗೊರೆ ಅಂತೀರಾ. ಆದ್ರೆ, ಆ ಒಂದು ದಿನ ನಮಗಾಗಿ ಬಿಡುವು ಮಾಡಿಕೊಂಡ್ರೆ ಅದೇ ಕೋಟಿ ಉಡುಗೊರೆ ನಮಗೆ'' ಎಂದು ಪತ್ರ ಬರೆದಿದ್ದಾನೆ.

ಅಂದು ಕಿಚ್ಚ ಸುದೀಪ್ ಮಾಡಿದ್ದನ್ನು ಇಂದು ಬಚ್ಚನ್ ಮಾಡಿದರು

ಇದಕ್ಕೆ ಉತ್ತರಿಸಿರುವ ಸುದೀಪ್ ''ನಾನು ಹುಟ್ಟುಹಬ್ಬ ಆಚರಿಸಿಕೊಳ್ಳದಿರುವುದಕ್ಕೆ ಒಂದು ಬಲವಾದ ಕಾರಣ ಇದೆ. ನಾನು ನಿಮ್ಮನ್ನ ಭೇಟಿ ಮಾಡಿದರು ಕೂಡ ಅದು ಆಚರಣೆಯೇ ಆಗುತ್ತೆ. ನಾನು ಕೇಳಿಕೊಳ್ಳುತ್ತಿದ್ದೇನೆ ಮತ್ತು ನನ್ನ ಮಾತನ್ನ ಗೌರವಿಸುತ್ತೀರಾ ಎಂಬ ನಂಬಿಕೆ ನನಗಿದೆ'' ಎಂದು ಪ್ರತಿಕ್ರಿಯಿಸಿದ್ದಾರೆ.

'ಹುಟ್ಟುಹಬ್ಬ ಆಚರಣೆ ಬೇಡ' ಎಂದ ಸುದೀಪ್ ಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ

English summary
Kannada Actor Sudeep has taken his twitter account to express his decisions about birthday celebration
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada