ಹೈದರಾಬಾದ್ ನಲ್ಲಿ 'ಪೈಲ್ವಾನ್' ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ

Recommended Video

Pailwaan movie : 'ಪೈಲ್ವಾನ್' ಸಿನಿಮಾದಲ್ಲಿ ನಟ ರಮೇಶ್ ಅರವಿಂದ್ | FILMIBEAT KANNADA

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ಪೈಲ್ವಾನ್ ಸಿನಿಮಾ ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಕನ್ನಡ ಮಾತ್ರವಲ್ಲದೆ ಪೈಲ್ವಾನ್ ದೇಶದಾದ್ಯಂತ ತೆರೆಗೆ ಬರುತ್ತಿದೆ. ಈಗಾಗಲೆ ಪ್ರಮೋಷನ್ ನಲ್ಲಿ ಬ್ಯುಸಿ ಯಾಗಿರುವ ಚಿತ್ರತಂಡ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಭರ್ಜರಿ ಪ್ರಮೋಷನ್ ಮಾಡುತ್ತಿದ್ದಾರೆ.

ಮೊನ್ನೆ ಮೊನ್ನೆವರೆಗು ಬಾಲಿವುಡ್ ನಲ್ಲಿ ಅಬ್ಬರಿಸುತ್ತಿದ್ದ ಸುದೀಪ್ ಮತ್ತು ಸುನೀಲ್ ಶೆಟ್ಟಿ ಟೀಂ ಈಗ ಪ್ರಮೋಷನ್ ಗಾಗಿ ಟಾಲಿವುಡ್ ಕಡೆ ಮುಖ ಮಾಡುತ್ತಿದ್ದಾರೆ. ಟಾಲಿವುಡ್ ನಲ್ಲಿ ದೊಡ್ಡ ಫ್ಯಾನ್ ಫಾಲೋವರ್ಸ್ ಹೊಂದಿರುವ ಕಿಚ್ಚ ಪೈಲ್ವಾನ್ ಚಿತ್ರದ ಪ್ರಿ-ರಿಲೀಸ್ ಈವೆಂಟ್ ಅನ್ನು ಅದ್ದೂರಿಯಾಗಿ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ.

ಸೆಪ್ಟಂಬರ್ 6ಕ್ಕೆ ಪ್ರಿ-ರಿಲೀಸ್ ಈವೆಂಟ್

ಸೆಪ್ಟಂಬರ್ 6ಕ್ಕೆ ಪ್ರಿ-ರಿಲೀಸ್ ಈವೆಂಟ್

ಇದೇ ತಿಂಗಳು 6ರಂದು ತೆಲುಗಿನಲ್ಲಿ ಪೈಲ್ವಾನ್ ಚಿತ್ರದ ಪ್ರಿ ರಿಲೀಸ್ ಈವೆಂಟ್ ನಡೆಯುತ್ತಿದೆ. ಹೈದರಾಬಾದ್ ನ ಜೆ ಆರ್ ಸಿ ಕನ್ವೆಷನ್ ಹಾಲ್ ನಲ್ಲಿ ಗ್ರ್ಯಾಂಡ್ ಆಗಿ ನಡೆಯುತ್ತಿದೆ. ಸಂಜೆ ಆರು ಗಂಟೆಗೆ ಪೈಲ್ವಾನ್ ಈವೆಂಟ್ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಸಾಧ್ಯತೆ ಇದೆ.

ಯು ಟ್ಯೂಬ್ ಲೈವ್ ನಲ್ಲಿ ಪ್ರಿ-ರಿಲೀಸ್ ಈವೆಂಟ್

ಯು ಟ್ಯೂಬ್ ಲೈವ್ ನಲ್ಲಿ ಪ್ರಿ-ರಿಲೀಸ್ ಈವೆಂಟ್

ದೂರದಲ್ಲಿರುವ ಅಭಿಮಾನಿಗಳು ಕಾರ್ಯಕ್ರಮ ಮಿಸ್ ಮಾಡಿಕೊಳ್ಳುತ್ತೇವೆ ಎಂದು ನಿರಾಸೆ ಪಟ್ಟುಕೊಳ್ಳುವ ಅವಶ್ಯತೆ ಇಲ್ಲ. ಯಾಕಂದ್ರೆ ಈ ಗ್ರ್ಯಾಂಡ್ ಈವೆಂಟ್ ಯೂ ಟ್ಯೂಬ್ ನಲ್ಲಿ ಲೈವ್ ಬರಲಿದೆ. ಹಾಗಾಗಿ ದೂರದ ಊರಲ್ಲೆ ಕುಳಿತು ಪೈಲ್ವಾನ್ ಈವೆಂಟ್ ನೋಡಬಹುದು. ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಸುದೀಪ್ ಮತ್ತು ಸುನೀಲ್ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಲಿದೆ.

ಯಾರಗಲಿದ್ದಾರೆ ಗೆಸ್ಟ್?

ಯಾರಗಲಿದ್ದಾರೆ ಗೆಸ್ಟ್?

ಅಂದ್ಹಾಗೆ ಈ ಅದ್ದೂರಿ ಕಾರ್ಯಕ್ರಮಕ್ಕೆ ಯಾರು ಗೆಸ್ಟ್ ಆಗಿ ಬರಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ತೆಲುಗು ಚಿತ್ರರಂಗದಲ್ಲಿ ಸುದೀಪ್ ಬಹುತೇಕ ಕಲಾವಿದರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಹಾಗಾಗಿ ಯಾವ ಸ್ಟಾರ್ ನಟ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಬರಲಿದ್ದಾರೆ ಎನ್ನುವುದು ಸುದೀಪಿಯಸ್ಸ್ ಕುತೂಹಲ.

'ಈಗ' ಚಿತ್ರದ ಮೂಲಕ ಟಾಲಿವುಡ್ ಎಂಟ್ರಿ

'ಈಗ' ಚಿತ್ರದ ಮೂಲಕ ಟಾಲಿವುಡ್ ಎಂಟ್ರಿ

ಸೂಪರ್ ಹಿಟ್ 'ಈಗ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಅಭಿನಯ ಚಕ್ರವರ್ತಿ, ನಂತರ ಬಾಹುಬಲಿ ಚಿತ್ರದಲ್ಲೂ ಮಿಂಚಿದ್ದಾರೆ. ಸದ್ಯ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೀಗ ಪೈಲ್ವಾನ್ ಸಿನಿಮಾ ತೆಲುಗು ಭಾಷೆಗೆ ಡಬ್ ಆಗಿ ತೆರೆಗೆ ಬರುತ್ತಿದೆ.

300ಸಾವಿರ ಚಿತ್ರಮಂದಿರಗಳಲ್ಲಿ ಪೈಲ್ವಾನ್

300ಸಾವಿರ ಚಿತ್ರಮಂದಿರಗಳಲ್ಲಿ ಪೈಲ್ವಾನ್

ಕುಸ್ತಿ ಪಟುವಾಗಿ ಕಾಣಿಸಿಕೊಂಡಿರುವ ಸುದೀಪ್ ನೋಡಲು ತೆಲುಗು ಅಭಿಮಾನಿಗಳು ಕೂಡ ಕಾತುರರಾಗಿದ್ದಾರೆ. ಪೈಲ್ವಾನ್ ಸುಮಾರು ಮೂರು ಸಾವಿರಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗುವ ಮೂಲಕ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಕೃಷ್ಣ ನಿರ್ದೇಶನದ ಪೈಲ್ವಾನ್ ಇದೆ ತಿಂಗಳು 12ಕ್ಕೆ ದೇಶದಾದ್ಯಂತ ತೆರೆಗೆ ಬರುತ್ತಿದೆ.

More from Filmibeat

English summary
Kannada actor Sudeep grace Pailwaan Telugu pre release Event In Hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X