ಕಿಚ್ಚನ ಕಿಚನ್ ನಲ್ಲಿ ತಯಾರಾಗುತ್ತಿದೆ ಸ್ಪೆಷಲ್ ತಿಂಡಿ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಅಡುಗೆ ಮಾಡುವುದೆಂದರೆ ತುಂಬ ಇಷ್ಟ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿಡುವಿನ ವೇಳೆಯಲ್ಲಿ ಸುದೀಪ್ ಹೆಚ್ಚಾಗಿ ಕಿಚನ್ ನಲ್ಲಿ ಕಾಲ ಕಳೆಯುತ್ತಾರೆ. ವಿಶೇಷ ತಿನಿಸುಗಳನ್ನು ಮಾಡುತ್ತಿರುತ್ತಾರೆ. ಕಿಚ್ಚನ ಅಡುಗೆ ಸ್ಪೆಷಲ್ ಅನ್ನು ಈ ಹಿಂದೆ ಬಿಗ್ ಬಾಸ್ ರಿಯಾಲಿಟಿ ಶೋ ವೇದಿಕೆಯಲ್ಲಿ ನೋಡಿ ಬೆರಗಾಗಿದ್ದೀರಿ.
ಇತ್ತಿಚೀಗಷ್ಟೆ ಸೈರಾ ನರಸಿಂಹ ರೆಡ್ಡಿ ಸಿನಿಮಾ ಸೆಟ್ ನಲ್ಲಿಯೂ ಸುದೀಪ್ ವಿಶೇಷವಾದ ಬಿಸಿ ಬಿಸಿ ಆಂಮ್ಲೆಟ್ ಮಾಡಿ ಬಡಿಸಿದ್ದರು. ಈಗ ಕಿಚ್ಚ ಕ್ರಿಯಷನ್ಸ್ ಯೂ ಟ್ಯೂಬ್ ನಲ್ಲಿ ಸುದೀಪ್ ವಿಶೇಷ ತಿನಿಸು ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಶೆಫ್ ಕಿಚ್ಚ, ಕ್ರಿಸ್ಪಿಯಾದ ಕ್ರೂಸೆಂಟ್ಸ್ ತಯಾರಿಸುತ್ತಿರುವ ವಿಡಿಯೋ ಇದಾಗಿದೆ. ಸುದೀಪ್ ಅಡುಗೆ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸುದೀಪ್ ವಿಶೇಷ ತಿಂಡಿ ಮಾಡುತ್ತಿರುವುದನ್ನು ನೋಡಿ ಅಭಿಮಾನಿಗಳಿಂದ ಸಾವಿರಗಟ್ಟಲೆ ಲೈಕ್ಸ್ ಮತ್ತು ಕಮೆಂಟ್ಸ್ ಹರಿದು ಬಂದಿದೆ.
ಶೆಫ್ ಕಿಚ್ಚ ಕ್ರಿಸ್ಪಿಯಾದ ಕ್ರೂಸೆಂಟ್ಸ್ ಸೂಪರ್ ಆಕ್ಟರ್, ಸೂಪರ್ ಸ್ಟಾರ್ ಮಾಸ್ಟರ್ ಶೆಫ್ ಎಂದು ಈ ವಿಡಿಯೋ ಕ್ಯಾಪ್ಷನ್ ನೀಡಲಾಗಿದೆ. ಸುದೀಪ್ ಮಾಡುವ ಅಡುಗೆ ತಿನ್ನವ ಭಾಗ್ಯ ಅಂತು ಅಲ್ಲಾ ಅಭಿಮಾನಿಗಳು ಸಿಗದೆ ಇರಬಹುದು, ಆದರೆ ಕಿಚ್ಚನ ಅಡುಗೆ ನೋಡಿ ಸಂತಸ ಪಡುತ್ತಿದ್ದಾರೆ ಅಭಿಮಾನಿಗಳು.


Click it and Unblock the Notifications











