For Quick Alerts
  ALLOW NOTIFICATIONS  
  For Daily Alerts

  'ದಬಾಂಗ್-3' ಪ್ರಮೋಷನ್ ನಲ್ಲಿ ಜಾವಾ ಬೈಕ್ ಏರಿದ ಕಿಚ್ಚ ಸುದೀಪ್

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಮುಂಬೈನಲ್ಲಿ ಇದ್ದಾರೆ. ಬಹುನಿರೀಕ್ಷೆಯ ದಬಾಂಗ್-3 ಚಿತ್ರದ ಪ್ರಮೋಷನ್ ನಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಮೊದಲ ಬಾರಿಗೆ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಎದುರು ತೊಡೆ ತಟ್ಟಿ ನಿಂತಿರುವ ಸುದೀಪ್ ಇದೆ ತಿಂಗಳು 20ಕ್ಕೆ ಅಭಿಮಾನಿಗಳ ಮುಂದೆ ಬರಲಿದ್ದಾರೆ.

  ಇನ್ನೇನು ಚಿತ್ರ ರಿಲೀಸ್ ಗೆ ಕೆಲವೇ ದಿನಗಳು ಬಾಕಿ ಇದೆ. ಈಗಾಗಲೆ ಚಿತ್ರತಂಡ ಪ್ರಮೋಷನ್ ನಲ್ಲಿ ನಿರತವಾಗಿದೆ. ನಿನ್ನೆ ಮುಂಬೈನಲ್ಲಿ ಚಿತ್ರದ ಪ್ರಮೋಷನ್ ಭರ್ಜರಿಯಾಗಿ ಮಾಡಿದೆ ಚಿತ್ರತಂಡ. ಈ ಸಮಯದಲ್ಲಿ ಕಿಚ್ಚ ಸುದೀಪ್ ಜಾವಾ ಬೈಕ್ ಏರಿ ಸಂತಸಪಟ್ಟಿದ್ದಾರೆ. ಸ್ಟೈಲಿಶ್ ಕಿಚ್ಚ ಜಾವಾ ಬೈಕ್ ಮೇಲೆ ಕುಳಿತು ಫೋಟೋಗೆ ಪೋಸ್ ನೀಡಿದ್ದಾರೆ.

  ವಿಶೇಷ ಅಭಿಮಾನಿಯ ಮಾತು ಕೇಳಿ ಭಾವುಕರಾದ ಕಿಚ್ಚ ಸುದೀಪ್ವಿಶೇಷ ಅಭಿಮಾನಿಯ ಮಾತು ಕೇಳಿ ಭಾವುಕರಾದ ಕಿಚ್ಚ ಸುದೀಪ್

  ಸುದೀಪ್ ಜಾವಾ ಬೈಕ್ ಮೇಲೆ ಕುಳಿತಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಸಮಯದಲ್ಲಿ ನಟಿ ಸೋನಾಕ್ಷಿ ಸಿನ್ಹಾ, ಅರ್ಬಾಜ್ ಖಾನ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು. ಕಿಚ್ಚ ದಬಾಂಗ್-3 ಪ್ರಮೋಷನ್ ನ ನಡುವೆಯು ಕಿಚ್ಚ ಕೋಟಿಗೊಬ್ಬ-3 ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. 'ಕೋಟಿಗೊಬ್ಬ-3' ಚಿತ್ರದ ಟಾಕಿ ಭಾಗಮುಗಿಸಿರುವ ಚಿತ್ರತಂಡ ಸದ್ಯ ಹಾಡಿನ ಚಿತ್ರೀಕರಣ ಬಾಕಿಯುಳಿಸಿಕೊಂಡಿದೆ.

  ಚಿತ್ರದ ಮೂರು ಹಾಡಿನ ಚಿತ್ರೀಕರಣ ಬೇರೆ ಬೇರೆ ಕಡೆ ಚಿತ್ರೀಕರಿಸಲು ಪ್ಲಾನ್ ಮಾಡಿದೆ ಚಿತ್ರತಂಡ. ಸದ್ಯ ಮುಂಬೈನಲ್ಲಿರುವ ಕಿಚ್ಚ ಕೋಟಿಗೊಬ್ಬ-3 ಚಿತ್ರೀಕರಣದಲ್ಲೂ ಭಾಗಿಯಾಗಲಿದ್ದಾರೆ. ಬಹುನಿರೀಕ್ಷೆಯ ದಬಾಂಗ್-3 ಹಿಂದಿ ಜೊತೆಗೆ ಕನ್ನಡದಲ್ಲೂ ತೆರೆಗೆ ಬರುತ್ತಿದೆ. ಈಗಾಗಲೆ ಕನ್ನಡ ವರ್ಷನ್ ಹಾಡು ಕೂಡ ರಿಲೀಸ್ ಆಗಿದೆ. ವಿಶೇಷ ಅಂದರೆ ಚಿತ್ರಕ್ಕೆ ಸಲ್ಮಾನ್ ಖಾನ್ ಅವರೆ ಡಬ್ ಮಾಡಿದ್ದಾರೆ.

  English summary
  Kannada actor Sudeep Jawa bike ride in Dabangg-3 promotion at Mumbai. Dabangg-3 movie set to release on December 20th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X