'ಯುವರತ್ನ' ಟೀಸರ್ ನೋಡಿ ಅಭಿನಯ ಚಕ್ರವರ್ತಿ ಹೇಳಿದ್ದೇನು?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಚಿತ್ರದ ಟೀಸರ್ ಟ್ರೆಂಡಿಂಗ್ ನಲ್ಲಿದೆ. ಎಲ್ಲಾ ಕಡೆಯಿಂದನೂ 'ಯುವರತ್ನ' ಟೀಸರ್ ಗೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೆ ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ಸ್ಟಾರ್ಸ್ ಕೂಡ 'ಯುವರತ್ನ'ನನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

'ಯುವರತ್ನ'ನ ನಯಾ ಅವತಾರಕ್ಕೆ ಕಿಚ್ಚ ಸುದೀಪ್ ಕೂಡ ಫಿದಾ ಆಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಲುಕ್, ಸಂತೋಷ್ ಆನಂದ್ ರಾಮ್ ನಿರ್ದೇಶನಕ್ಕೆ ಕಿಚ್ಚ ಫುಲ್ ಮಾರ್ಕ್ಸ್ ನೀಡಿದ್ದಾರೆ. ಟೀಸರ್ ಬಗ್ಗೆ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿದ್ದಾರೆ.

"ಫುನೀತ್ ರಾಜ್ ಕುಮಾರ್ ವಯಸ್ಸು 10 ವರ್ಷ ಹಿಂದೆ ಹೋದಾಗೆ ಇದೆ. ದೃಶ್ಯವನ್ನು ಸೆರೆಹಿಡಿದಿರುವ ರೀತಿ ಅದ್ಭುತವಾಗಿದೆ. ಕೊನೆಯ ದೃಶ್ಯವಂತೂ ಕ್ಲಾಸಿ ಆಗಿದೆ. ಕೊನೆಯ ದೃಶ್ಯಕ್ಕೆ ಕಮರ್ಶಿಯಲ್ ಟಚ್ ನೀಡಿದ್ದು ಚಿತ್ರ ಮತ್ತೊಂದು ಲೆವಲ್ ಗೆ ಹೋಗುವುದು ಪಕ್ಕಾ. ಶುಭವಾಗಲಿ" ಎಂದು ಹೇಳಿದ್ದಾರೆ.

Kannada Actor Sudeep Likes Puneeth Rajkumar Starrer Yuvaratna teaser

ಚಿತ್ರದಲ್ಲಿ ಪುನೀತ್ ಕಾಲೇಜ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಶಿಕ್ಷಣ ಮಾಫಿಯಾದ ಬಗ್ಗೆ ಇರುವ ಸಿನಿಮಾವಾದ್ರು. ಸದ್ಯ ರಿಲೀಸ್ ಆಗಿರುವ ಟೀಸರ್ ನಲ್ಲಿ ಪುನೀತ್ ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಪುನೀತ್ ಹೊಸ ಲುಕ್, 29 ನಂಬರ್ ಜೆರ್ಸಿ, ಆರ್ ಕೆ ಟೀಂ ಎಲ್ಲ ಅಂಶವು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಟೀಸರ್ ನೋಡಿದ ಅನೇಕ ಮಂದಿ ಹಾಡಿಹೊಗಳುತ್ತಿದ್ದಾರೆ. ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್ ಕೂಡ ಯುವರತ್ನ ಟೀಸರ್ ನೋಡಿ ಟ್ವೀಟ್ ಮಾಡಿದ್ದಾರೆ. ಇನ್ನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್, ರಕ್ಷಿತ್ ಶೆಟ್ಟಿ, ಮಾನ್ವಿತಾ ಸೇರಿದಂತೆ ಸಾಕಷ್ಟು ಸ್ಟಾರ್ಸ್ ಶುಭ ಕೋರಿದ್ದಾರೆ.

More from Filmibeat

English summary
Kannada actor Sudeep likes Puneeth Rajkumar starrer yuvaratna teaser. Sudeep tweet about Yuvaratna teaser.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X