twitter
    For Quick Alerts
    ALLOW NOTIFICATIONS  
    For Daily Alerts

    'ಸೈರಾ' ಚಿತ್ರತಂಡಕ್ಕೆ ವಿಶೇಷ ಅಡುಗೆ ಮಾಡಿ ಬಡಿಸಿದ ಕಿಚ್ಚ ಸುದೀಪ್

    |

    ಸ್ಯಾಂಡಲ್ ವುಡ್ ನ ಮಾಣಿಕ್ಯ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಅಡುಗೆ ಮಾಡುವುದೆಂದರೆ ತುಂಬ ಇಷ್ಟ. ಬಿಡುವಿನ ವೇಳೆಯಲ್ಲಿ ಸುದೀಪ್ ಮನೆಯಲ್ಲಿ ಅಡುಗೆ ಮಾಡುತ್ತಿರುತ್ತಾರೆ. ಮನೆಯಲ್ಲಿ ಮಾತ್ರವಲ್ಲದೆ ಸಾಕಷ್ಟು ಕಾರ್ಯಕ್ರಮಗಳಲ್ಲೂ ಅಡುಗೆ ಮಾಡಿ ಕೈ ರುಚಿ ತೋರಿಸಿದ್ದಾರೆ.

    ಈ ಹಿಂದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಅಡುಗೆ ಮಾಡಿ ಬಿಗ್ ಮನೆಗೆ ಬರುವ ವಿಶೇಷ ಅತಿಥಿಗಳಿಗೆ ಬಡಿಸುತ್ತಿದ್ದರು. ಕಿಚ್ಚನ ಅಡುಗೆ ಕಾರ್ಯಕ್ರಮ ಸಖತ್ ಖ್ಯಾತಿಗಳಿಸಿತ್ತು. ಆಗಾಗ ಅಡುಗೆ ಮಾಡುತ್ತಿರುವ ಕಿಚ್ಚ ಇತ್ತೀಚಿಗೆ ಸೈರಾ ಚಿತ್ರೀಕರಣ ಸೆಟ್ ನಲ್ಲಿಯೂ ಅಡುಗೆ ಮಾಡಿ ಬಡಿಸಿ ಅಚ್ಚರಿ ಮೂಡಿಸಿದ್ದಾರೆ. ಕನ್ನಡ ಸ್ಟಾರ್ ನಟನ ಅಡುಗೆ ಕೈ ರುಚಿಗೆ ಸೈರಾ ತಂಡ ಫಿದಾ ಆಗಿದೆ.

    ಸೈರಾ ಚಿತ್ರದ ಬೆಂಗಳೂರು ಕಾರ್ಯಕ್ರಮಕ್ಕೆ ಸುದೀಪ್ ಯಾಕೆ ಬರಲಿಲ್ಲ?ಸೈರಾ ಚಿತ್ರದ ಬೆಂಗಳೂರು ಕಾರ್ಯಕ್ರಮಕ್ಕೆ ಸುದೀಪ್ ಯಾಕೆ ಬರಲಿಲ್ಲ?

    ಹೌದು, ಇತ್ತೀಚಿಗೆ ಕಿಚ್ಚ ಸುದೀಪ್ ಸೈರಾ ಚಿತ್ರೀಕರಣ ಸಮಯದಲ್ಲಿ ವಿಶೇಷವಾದ ಆಮ್ಲೆಟ್ ದೋಸೆ ಮಾಡಿ ಚಿತ್ರತಂಡಕ್ಕೆ ಬಡಿಸಿದ್ದಾರೆ. ಅವುಕು ರಾಜನ ದೋಸೆ ತಿಂದ ಚಿತ್ರತಂಡ ಫುಲ್ ಖುಷ್ ಆಗಿದೆ. ರಾಜನ ಕಾಸ್ಟ್ಯೂಮ್ ನಲ್ಲಿಯೆ ಇರುವ ಕಿಚ್ಚ ಚಿತ್ರೀಕರಣದ ಸಮಯದಲ್ಲಿ ಊಟದ ಬ್ರೇಕ್ ನಲ್ಲಿ ಬಿಸಿ ಬಿಸಿ ದೋಸೆ ಮಾಡಿ ಬಡಿಸಿದ್ದಾರೆ.

    Kannada Actor Sudeep Made A Special Dish For Sye Raa Narasimha Reddy Film Team

    ಅಡುಗೆ ಮಾಡಿ ಬಡಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಜೊತೆಗೆ "ಸೈರಾ ಚಿತ್ರೀಕರಣ ಸಮಯದ ಫನ್ ಟೈಂ. ವಿಶೇಷವಾದ ಆಮ್ಲೆಟ್ ದೋಸೆ" ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಭಿಮಾನಿಗಳಿಂದ ಸಾಕಷ್ಟು ಲೈಕ್ಸ್ ಮತ್ತು ಕಮೆಂಟ್ ಹರಿದುಬರುತ್ತಿದೆ.

    ತೆಲುಗು ನಟ ಚಿರಂಜೀವಿ ಅಭಿನಯದ ಸೈ ರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಸುದೀಪ್ ಅವುಕು ರಾಜನಾಗಿ ಮಿಂಚಿದ್ದಾರೆ. ಸೈರಾ ಇದೆ ತಿಂಗಳು 2ಕ್ಕೆ ತೆರೆಗೆ ಬರುತ್ತಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಚಿತ್ರದಲ್ಲಿ ದೊಡ್ಡ ಕಲಾವಿದರ ಬಳಗವೆ ಇದೆ.

    English summary
    Kannada actor Sudeep made a special dish for Sye Raa Narasimha Reddy film team. Sudeep Playing Avuku Raaja role in Sye Raa Narasimha Reddy.
    Wednesday, October 2, 2019, 10:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X