»   » ದೇಶದ 'ಮೋಸ್ಟ್ ಡಿಸೈರೇಬಲ್ ವ್ಯಕ್ತಿ' ಪಟ್ಟಿಯಲ್ಲಿ ಸುದೀಪ್ ಗೆ ಸ್ಥಾನ

ದೇಶದ 'ಮೋಸ್ಟ್ ಡಿಸೈರೇಬಲ್ ವ್ಯಕ್ತಿ' ಪಟ್ಟಿಯಲ್ಲಿ ಸುದೀಪ್ ಗೆ ಸ್ಥಾನ

Posted By:
Subscribe to Filmibeat Kannada

ಕನ್ನಡದ ಆರಡಿ ಕಟೌಟ್, ಅಭಿಮಾನಿಗಳ ಪ್ರೀತಿಯ ಕಿಚ್ಚ ಸುದೀಪ್ 'ಟೈಮ್ಸ್ ಮೋಸ್ಟ್ ಡಿಸೈರೇಬಲ್ (Most Desirable Men) ವ್ಯಕ್ತಿ' ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ದೇಶದ ವಿವಿದ ಕ್ಷೇತ್ರಗಳ 50 ಜನರ ಪೈಕಿ ಕನ್ನಡ ನಟ ಸುದೀಪ್ ಕೂಡ ಕಾಣಿಸಿಕೊಂಡಿರುವುದು ಸ್ಯಾಂಡಲ್ ವುಡ್ ಗೆ ಖುಷಿಯ ವಿಚಾರ.

ಕೇವಲ ಸುದೀಪ್ ಮಾತ್ರವಲ್ಲ, ಬೆಂಗಳೂರಿನ ಹಲವು ಹ್ಯಾಂಡ್ ಸಮ್ ಮಾಡೆಲ್ ಗಳು ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. 2016ರಲ್ಲಿ ಮಿಸ್ಟರ್ ಇಂಡಿಯಾ ಕಿರೀಟ ಗೆದ್ದಿದ್ದ ವಿಷ್ಣುರಾಜ್ ಎಸ್.ಮೆನನ್ ಇದೇ ಮೊದಲ ಬಾರಿಗೆ ಟೈಮ್ಸ್ ಮೋಸ್ಟ್ ಡಿಸೈರೇಬಲ್ ಮೆನ್ ಲಿಸ್ಟ್ ಗೆ ಎಂಟ್ರಿ ಕೊಟ್ಟಿದ್ದು, 11ನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಹಿಂದಿಕ್ಕಿದ ಯಶ್ ನಂ.1

ಉಳಿದಂತೆ ಬೇರೆ ಯಾವೆಲ್ಲಾ ನಟರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ಮೊದಲ ಸ್ಥಾನದಲ್ಲಿ ರೋಹಿತ್

2015ರ ಮಿಸ್ಟರ್ ಇಂಡಿಯಾ ವಿಜೇತ ರೋಹಿತ್ ಖಂಡೇಲ್ವಾಲ್ 2016 ಸಾಲಿನ ‘ಟೈಮ್ಸ್ ಮೋಸ್ಟ್ ಡಿಸೈರೇಬಲ್' ವ್ಯಕ್ತಿ ಆಗಿ ಹೊರಹೊಮ್ಮಿದ್ದಾರೆ. ಎರಡನೇ ಸ್ಥಾನದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಮೂರನೇ ಸ್ಥಾನದಲ್ಲಿ ಬಾಲಿವುಡ್ ಹೃತಿಕ್ ರೋಷನ್ ಸ್ಥಾನ ಪಡೆದುಕೊಂಡಿದ್ದಾರೆ.

ಕಟ್ಟಾ ವಿರೋಧಿಗಳಿಗೆ ಕಿಚ್ಚ ಸುದೀಪ್ ಕೊಟ್ಟ ಉತ್ತರವೇನು.?

ಬಾಲಿವುಡ್ ನಟರು ಮೇಲುಗೈ

2016ನೇ ಸಾಲಿನ ‘ಟೈಮ್ಸ್ ಮೋಸ್ಟ್ ಡಿಸೈರೇಬಲ್' ವ್ಯಕ್ತಿಗಳ ಪಟ್ಟಿಯಲ್ಲಿ ಬಾಲಿವುಡ್ ರೇ ಮೇಲುಗೈ ಸಾಧಿಸಿದ್ದಾರೆ. 50 ಜನರ ಪಟ್ಟಿಯಲ್ಲಿ, ರಣ್ವೀರ್ ಸಿಂಗ್ ()4, ಫಾವಾದ್ ಖಾನ್ (5), ಸಿದ್ಧಾರ್ಥ ಮಲ್ಹೋತ್ರ (6), ಶಾಹೀದ್ ಕಪೂರ್ (10), ರಣ್ಬೀರ್ ಕಪೂರ್ (12), ವರುಣ್ ದವನ್ (13), ಆದಿತ್ಯ ರಾಯ್ ಕಪೂರ್ (15), ಜಾನ್ ಅಬ್ರಾಹಿಂ (16), ಸುಶಾಂತ್ ಸಿಂಗ್ ರಜಪೂತ್ (17), ಫರನ್ ಅಖ್ತರ್ (19), ರಣ್ದೀಪ್ ಹೂಡ ಟಾಪ್-20 ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಅಲ್ಲಿ ದರ್ಶನ್ ಫ್ಯಾನ್, ಇಲ್ಲಿ ಕಿಚ್ಚನ ಫ್ಯಾನ್: ಇವರು ಪಕ್ಕಾ ಅಭಿಮಾನಿಗಳು

ಮಹೇಶ್ ಬಾಬು, ಪ್ರಭಾಸ್ ಗೂ ಸ್ಥಾನ

ತೆಲುಗು ನಟ ಪ್ರಿನ್ಸ್ ಮಹೇಶ್ ಬಾಬು ಈ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದುಕೊಂಡಿದ್ದರೇ, ಬಾಹುಬಲಿ ಖ್ಯಾತಿಯ ಪ್ರಭಾಸ್ 22ನೇ ಸ್ಥಾನದಲ್ಲಿ ಮತ್ತು ರಾಣಾ ದಗ್ಗುಬಾಟಿ 24ನೇ ಸ್ಥಾನದಲ್ಲಿದ್ದಾರೆ.

ಏಕೈಕ ಕನ್ನಡಿಗ ಸುದೀಪ್

ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಏಕೈಕ ಕನ್ನಡ ನಟ ಸುದೀಪ್. ಕಳೆದ ಭಾರಿಯೂ ಸುದೀಪ್ 43ನೇ ಸ್ಥಾನ ಪಡೆದುಕೊಂಡಿದ್ದರು. ಈ ಬಾರಿಯೂ 43ನೇ ಸ್ಥಾನವನ್ನ ಕಾಯ್ದುಕೊಂಡಿದ್ದಾರೆ.

ಖುಷಿ ಸಮಾಚಾರ ಕೇಳಿ 'ಕಿರಿಕ್' ಹುಡುಗರ ಬೆನ್ನುತಟ್ಟಿದ ಕಿಚ್ಚ ಸುದೀಪ್

ದುಲ್ಕಾರ್ ಸಲ್ಮಾನ್

ಇನ್ನು ಮಲಯಾಳಂ ಹ್ಯಾಂಡ್ ಸಮ್ ನಟ ದುಲ್ಕರ್ ಸಲ್ಮಾನ್ ಕೂಡ 'ಮೋಸ್ಟ್ ಡಿಸೈರೇಬಲ್ ವ್ಯಕ್ತಿ'ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, 14ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ನವೀನ್ ಪೌಲಿ 28ನೇ ಸ್ಥಾನದಲ್ಲಿದ್ದಾರೆ.

26ನೇ ಸ್ಥಾನದಲ್ಲಿ ಧನುಶ್

ಇನ್ನು ಕಾಲಿವುಡ್ ಕ್ಷೇತ್ರದಿಂದ ತಮಿಳು ನಟ ಧನುಶ್ ಮಾತ್ರ ಸ್ಥಾನ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ. 'ಮೋಸ್ಟ್ ಡಿಸೈರೇಬಲ್ ವ್ಯಕ್ತಿ'ಗಳ ಪಟ್ಟಿಯಲ್ಲಿ ಧನುಶ್ 26ನೇ ಸ್ಥಾನ ಗಳಿಸಿಕೊಂಡಿದ್ದಾರೆ.

English summary
The Times Most Desirable for men is out. And this year too sees Sandalwood superstar Sudeep retain a place in the top 50, with him being on number 43 again.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada